ತುಮಕೂರು:ಭಿಕ್ಷೆ ಕೇಳುವ ನೆಪದಲ್ಲಿ ಮನೆ ಬಾಗಿಲಿಗೆ ಬಂದವ ಚಾಕು ತೋರಿಸಿ ಮಹಿಳೆಯ ಮಾಂಗಲ್ಯಸರ ಕಿತ್ತುಕೊಂಡು ಪರಾರಿಯಾಗಿದ್ದಾನೆ.
ಇಂತಹ ಘಟನೆ ಕುಣಿಗಲ್ ತಾಲೂಕಿನ ಹೊನ್ನೇಗೌಡನಪಾಳ್ಯದಲ್ಲಿ ಸಂಭವಿಸಿದೆ. ಪಾರ್ವತಮ್ಮ ಎಂಬುವರು ಸರ ಕಳೆದುಕೊಂಡವರು. ಮನೆಯಲ್ಲಿ ಪಾರ್ವತಮ್ಮ ಒಬ್ಬರೇ ಇದ್ದರು. ಈ ವೇಳೆ ಭಿಕ್ಷೆ ಬೇಡುವ ನೆಪದಲ್ಲಿ ಮನೆ ಬಾಗಿಲ ಬಳಿ ಬಂದ ದುಷ್ಕರ್ಮಿಯೊಬ್ಬ, ‘ಭಿಕ್ಷೆ ಹಾಕಿ ತಾಯಿ’ ಎಂದು ಬಾಗಿಲು ತಟ್ಟಿದ್ದಾನೆ.
ಯಾರೋ ಭಿಕ್ಷುಕ ಇರಬೇಕು ಎಂದು ಪಾರ್ವತಮ್ಮ ಬಾಗಿಲು ತೆಗೆದದ್ದೇ ತಡ ದುಷ್ಕರ್ಮಿ ಚಾಕು ತೋರಿಸಿ 40 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆ. ಘಟನೆ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ.(ದಿಗ್ವಿಜಯ ನ್ಯೂಸ್​)
ಪೂಜೆ ನೆಪದಲ್ಲಿ ಮಹಿಳೆಯ ಹಣೆಗೆ ಕಪ್ಪಿಟ್ಟು ಮಾಡಬಾರದ್ದು ಮಾಡಿ ಸಿಕ್ಕಿಬಿದ್ದ ಕೊಳ್ಳೇಗಾಲದ ಮಂತ್ರವಾದಿ!

ತುಮಕೂರು ಸ್ಮಾರ್ಟ್​ ಸಿಟಿ ಪಾರ್ಕ್​ನಲ್ಲಿ ಪ್ರೇಮಿಗಳ ಲವ್ವಿಡವ್ವಿ! ಕಾಲೇಜಿಗೆ ಚಕ್ಕರ್ ಹಾಕಿ ಮೈಮರೆಯುತ್ತಿರುವ ಜೋಡಿಗಳು…

ಮಗಳ ಜತೆ ತಾಯಿ ಆತ್ಮಹತ್ಯೆ! 10 ದಿನದ ಹಿಂದೆ ವಿದ್ಯಾರ್ಥಿನಿಯೊಬ್ಬಳ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡದ್ದೇ ಮುಳುವಾಯ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 10 =
Remember me
