ಬೆಂಗಳೂರು:ರೋಚಕತೆಯಲ್ಲಿಯೇ ಸಾಗಿದ ಕನ್ನಡದ ಬಿಗ್ ಬಾಸ್ ಸೀಸನ್ 8ಕ್ಕೆ ಭಾನುವಾರ ವರ್ಣರಂಜಿತ ತೆರೆಬಿದ್ದಿದ್ದು, ‘ಹಳ್ಳಿ ಹೈದ’ ಮಂಜು ಪಾವಗಡ ವಿಜೇತರಾಗಿದ್ದಾರೆ. ಹಲವು ವಿಶೇಷತೆಗಳಿಂದ ಕೂಡಿದ್ದ ಈ ಶೋನಲ್ಲಿ ಮಂಜು ಪಾವಗಡ ಬಿಗ್​ಬಾಸ್​ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಇದು ಕನ್ನಡ ಬಿಗ್​ ಬಾಸ್​ನಲ್ಲಿ ಇದುವರೆಗೂ ಯಾರೂ ಮಾಡಿರದ ದಾಖಲೆ!
ಕರೊನಾ ಹಿನ್ನೆಲೆ ಬಿಗ್​ ಬಾಸ್​ ಸೀಸನ್​-8ಕ್ಕೆ ತಡೆಯುಂಟಾಗಿತ್ತು. 72ನೇ ದಿನಕ್ಕೆ ಸ್ಥಗಿತಗೊಂಡಿದ್ದ ಶೋ 43 ದಿನಗಳ ಬಳಿಕ ಮತ್ತೆ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿತ್ತು. 120 ದಿನಗಳ ಶೋ ಕನ್ನಡದ ಬಿಗ್ ಬಾಸ್ ಇತಿಹಾಸದಲ್ಲಿ ನಡೆದಿರಲಿಲ್ಲ. ಅದೂ ಈ ಸೀಸನ್​ನಲ್ಲಿ ಘಟಿಸಿದೆ. ಅಷ್ಟೇ ಅಲ್ಲ ಈ ಹಿಂದಿನ 7 ಸೀಸನ್​ಗೆ ಹೋಲಿಸಿದಲ್ಲಿ 8ನೇ ಸೀಸನ್​ ವಿನ್ನರ್​ ಪಡೆದ ಮತಗಳು ದಾಖಲೆ ಸೃಷ್ಟಿಸಿದೆ.
ಬಿಗ್​ಬಾಸ್​ ಸೀಸನ್​ 8ರ ಫಿನಾಲೆಯ ಟಾಪ್ 5ನಲ್ಲಿ ಮಂಜು ಪಾವಗಡ, ಅರವಿಂದ್ ಕೆ.ಪಿ, ವೈಷ್ಣವಿ ಗೌಡ, ದಿವ್ಯಾ ಉರುಡುಗ, ಪ್ರಶಾಂತ್ ಸಂಬರಗಿ ಇದ್ದರು. 10.21 ಲಕ್ಷ ಮತ ಪಡೆದ ವೈಷ್ಣವಿ ಮತ್ತು 6.69 ಲಕ್ಷ ಮತ ಪಡೆದಿದ್ದ ಪ್ರಶಾಂತ್ ಸಂಬರಗಿ ಅವರು ದೊಡ್ಡಮನೆಯಿಂದ ಶನಿವಾರವೇ ನಿರ್ಗಮಿಸಿದ್ದರು. ಉಳಿದ ಮೂವರು ಸ್ಪರ್ಧಿಗಳ ಪೈಕಿ ದಿವ್ಯಾ ಉರುಡುಗ 3ನೇ ಸ್ಥಾನಕ್ಕೆ ಬಂದು ನಿರ್ಗಮಿಸಿದ್ದರು. ರನ್ನರ್ ಅಪ್ ಅರವಿಂದ್​ಗೆ 43 ಲಕ್ಷ ವೋಟ್, ಮಂಜು ಪಾವಗಡ ಅವರಿಗೆ 45 ಲಕ್ಷ ವೋಟ್​ಗಳು ಬಂದಿದೆ. ಇದು ಕನ್ನಡ ಬಿಗ್​ ಬಾಸ್​ನ​ ಎಲ್ಲ ಸೀಸನ್​ಗೂ ಹೋಸಿಲಿದಲ್ಲಿ ಅತಿ ಹೆಚ್ಚು ವೋಟ್​ ಪಡೆದದ್ದು ಮಂಜು. ಇದು ಹೊಸ ದಾಖಲೆಯನ್ನೇ ನಿರ್ಮಿಸಿದೆ.
ನನ್ನ ತಾಯಾಣೆ.. ಅಷ್ಟೊಂದು ಹಣವನ್ನು ಜೀವನದಲ್ಲಿ ನೋಡಿಯೇ ಇರಲಿಲ್ಲ: ಮಂಜು ಪಾವಗಡ

ಮದ್ವೆಯಾದ 23 ದಿನಕ್ಕೇ ನವದಂಪತಿ ದುರಂತ ಸಾವು! ಅತ್ತಿಗೆಯ ಪ್ರಾಣವೂ ಹೋಯ್ತು…

ಮೈಸೂರು ವಿವಿ ಪ್ರಾಧ್ಯಾಪಕ ಕಾಮಪುರಾಣ ಕೇಸ್​ಗೆ ಸ್ಫೋಟಕ ತಿರುವು! ಮರುದಿನವೇ ಉಲ್ಟಾ ಹೊಡೆದ ಸಂತ್ರಸ್ತೆ

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:3 × one =
Remember me
