ರಾಯಚೂರು:ಮಸ್ಕಿ ಪಟ್ಟಣ ಹೊರವಲಯದಲ್ಲಿ 33 ದಿನಗಳ ಹಿಂದೆ ನಡೆದಿದ್ದ 9ನೇ ತರಗತಿ ವಿದ್ಯಾರ್ಥಿನಿಯೊಬ್ಬಳ ಕೊಲೆ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕಿದೆ. ಬಾಲಕಿ ಶವ ಪತ್ತೆಯಾದ ಸ್ಥಳದ ಸಮೀಪದ ಪೊದೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಯುವಕನ ಶವ ಸಿಕ್ಕಿದೆ.
ಕಳೆದ ಫೆ.25ರಂದು ಶಾಲೆಗೆ ಹೋಗಿದ್ದ 9ನೇ ತರಗತಿ ವಿದ್ಯಾರ್ಥಿನಿ ಭೂಮಿಕಾಳನ್ನು ಮಸ್ಕಿ ಪಟ್ಟಣ ಹೊರವಲಯದ ಸಾನಬಾಳ ರಸ್ತೆಯಲ್ಲಿ ಕೊಲೆ ಮಾಡಲಾಗಿತ್ತು. ಇದೀಗ ಸಮೀಪದ ಪೊದೆಯಲ್ಲಿ ರಮೇಶ್​ ಎಂಬಾತನ ಶವ ಪತ್ತೆಯಾಗಿದೆ. ಸಂಬಂಧದಲ್ಲಿ ರಮೇಶ್​ಗೆ ಭೂಮಿಕಾ ಸೋದರತ್ತೆ ಮಗಳು. ಅದೇ ಸಲುಗೆಯಲ್ಲಿ ಆಕೆಯೊಂದಿಗೆ ಆಪ್ತವಾಗಿದ್ದ ರಮೇಶ್​ ಪ್ರೀತಿ ಮಾಡುತ್ತಿದ್ದ. ಮದುವೆ ಮಾಡಿಕೊಳ್ಳುವಂತೆ ಕೇಳುತ್ತಿದ್ದ.
ಪೆ.25ರಂದು ಭೂಮಿಕಾಳ ಕತ್ತು ಕೊಯ್ದು ಕೊಲೆ ಮಾಡಲಾಗಿತ್ತು. ರಸ್ತೆಯಲ್ಲೇ ಶಾಲಾ ಬ್ಯಾಗ್​ ಕೂಡ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು. ಈ ಘಟನೆ ಸ್ಥಳೀಯರನ್ನು ಬೆಚ್ಚಿಬೀಳಿಸಿತ್ತು. ಈ ಕೊಲೆ ಆರೋಪಿ ರಮೇಶ್​ಗಾಗಿ ಪೊಲೀಸರು ಹುಡುಕಾಡ ನಡೆಸುತ್ತಿದ್ದರು. ಆದರೆ, ಇಂದು(ಮಂಗಳವಾರ) ಬೆಳಗ್ಗೆ ಕೊಳೆತ ಸ್ಥಿತಿಯಲ್ಲಿ ರಮೇಶನ ಶವ ಪತ್ತೆಯಾಗಿದೆ. ಪ್ರಿಯತಮೆ ಕೊಲೆಯಾದ ಸ್ಥಳದಿಂದ ಸ್ವಲ್ಪ ದೂರದಲ್ಲೇ ಆರೋಪಿ ಶವ ದೊರೆತಿದೆ. ಪೊದೆಯಲ್ಲಿದ್ದ ರಮೇಶನ ಮೃತದೇಹವನ್ನ ನಾಯಿಗಳು ಹೊರಗೆ ಎಳೆದುತಂದಿದಗದು, ಕುರಿಗಾಯಿಗಳು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಮಸ್ಕಿ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದು, ಭೂಮಿಕಾಳನ್ನ ಕೊಂದ ಎರಡ್ಮೂರು ದಿನಗಳ ಬಳಿಕ ಅದೇ ಜಾಗದಲ್ಲಿ ರಮೇಶ್ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿಡುವ ಶಂಕೆ ವ್ಯಕ್ತವಾಗಿದೆ. ಭೂಮಿಕಾ ಕೊಲೆಯಾದ ಜಾಗದಲ್ಲಿ ವಿಷದ ಬಾಟಲಿಯೂ ಪತ್ತೆಯಾಗಿದೆ.
ಭೂಮಿಕಾ ಮೊದಲು ಮದುವೆಗೆ ಒಪ್ಪಿ, ನಂತರ ನಿರಾಕರಿಸಿದ್ದಳು ಎನ್ನಲಾಗಿದೆ. ಇದೇ ವಿಚಾರಕ್ಕೆ ನೊಂದ ರಮೇಶ್​, ಆಕೆಯನ್ನು ಶಾಲೆಯಿಂದ ಕರೆತರುವ ನೆಪದಲ್ಲಿ ಬಂದ ಮಾರ್ಗಮಧ್ಯೆ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.
ಶಂಕರಣ್ಣನ ಆತ್ಮಹತ್ಯೆಗೆ ಕಾರಣ ಬಯಲು! ಅಯ್ಯೋ, ಸ್ವಲ್ಪ ಅರ್ಡ್ಜೆಸ್ಟ್​ ಮಾಡ್ಕೊಂಡಿದ್ರೆ ಇಷ್ಟೆಲ್ಲಾ ಆಗ್ತಿರ್ಲಿಲ್ಲ ತಾಯಿ…

ಡೆತ್​ನೋಟ್​ ಬರೆದಿಟ್ಟು ಶಂಕರಪ್ಪ ಆತ್ಮಹತ್ಯೆ! ಮದ್ವೆಯಾದ 5 ತಿಂಗಳಲ್ಲೇ ದುರಂತ, ಪತ್ನಿ ಮೇಘನಾಳ ಗೋಳಾಟ ನೋಡಲಾಗ್ತಿಲ್ಲ…


ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:five × 5 =
Remember me
