ಬೆಂಗಳೂರು:ಮದುವೆಗಾಗಿ ಮ್ಯಾಟ್ರಿಮೋನಿಯಲ್ ಜಾಲತಾಣದಲ್ಲಿ ವರನನ್ನು ಹುಡುಕಾಟ ನಡೆಸುತ್ತಿದ್ದ ಬೆಂಗಳೂರಿನ ಯುವತಿಗೆ ವ್ಯಕ್ತಿಯೊಬ್ಬ ಮದ್ವೆ ಆಸೆ ಹುಟ್ಟಿಸಿ ವಂಚಿಸಿದ್ದಾನೆ. ನೊಂದ ಯುವತಿ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾಳೆ.
ಸುಧಾಮನಗರದ 29 ವರ್ಷದ ಯುವತಿ ವಂಚನೆಗೆ ಒಳಗಾದವಳು. ಬ್ಯಾಂಕ್​ವೊಂದರ ಉದ್ಯೋಗಿಯಾಗಿರುವ ಈಕೆ, ಮ್ಯಾಟ್ರಿಮೋನಿಯಲ್‌ನಲ್ಲಿ ಸ್ವ-ವಿವರ ಅಪ್‌ಲೋಡ್ ಮಾಡಿ ವರನ ಹುಡುಕಾಟ ನಡೆಸುತ್ತಿದ್ದರು. 2021ರ ಡಿಸೆಂಬರ್ 30ರಂದು ಯುವತಿಗೆ ಕರೆ ಮಾಡಿದ ರಾಜೇಶ್ ಕುಮಾರ್​ ಎಂಬಾತ, ತಾನು ಯುಎಸ್‌ನಲ್ಲಿ ಸಂಶೋಧಕ. ಮ್ಯಾಟ್ರಿಮೋನಿಯಲ್​ನಲ್ಲಿ ನಿಮ್ಮ ಫೋಟೋ ನೋಡಿದೆ. ನನಗೆ ಇಷ್ಟ ಆಗಿದ್ದೀರಿ. ನೀವು ಒಪ್ಪಿದರೆ ಬೆಂಗಳೂರಿಗೆ ಬಂದು ನಿಮ್ಮನ್ನು ಮದುವೆಯಾಗಿ ಬೆಂಗಳೂರಲ್ಲೇ ನೆಲೆಸುವೆ ಎಂದಿದ್ದ.
ಈ ಮಾತನ್ನು ನಂಬಿದ ಯುವತಿ, ಮದುವೆಗೆ ಒಪ್ಪಿದ್ದಳು. ಬಳಿಕ ಯುವತಿ ಮತ್ತು ರಾಜೇಶ್​ ನಡುವೆ ಮೊಬೈಲ್‌ನಲ್ಲಿ ಸಂಭಾಷಣೆ ಶುರುವಾಗಿತ್ತು. ‘ಯುಎಸ್‌ನಿಂದ ಬರಬೇಕಾದರೆ ಮದುವೆ ಪ್ರಮಾಣ ಪತ್ರ ಮಾಡಿಸಬೇಕು. ಅದಕ್ಕೆ ಬ್ಯಾಂಕ್ ಸಿಬಿಲ್ ಸ್ಕೋರ್ ಹೆಚ್ಚಿಸಿಕೊಳ್ಳಬೇಕಾಗಿದೆ. ನನ್ನ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಿದ್ರೆ ಅನುಕೂಲ ಆಗುತ್ತೆ…’ ಎಂದು ಯುವತಿಗೆ ಪುಸಲಾಯಿಸಿದ್ದ. ರಾಜೇಶ್​ನ ಮಾತು ನಂಬಿದ ಯುವತಿ, ಆತನ ಬ್ಯಾಂಕ್ ಖಾತೆಗೆ ಹಂತ ಹಂತವಾಗಿ 7.55 ಲಕ್ಷ ರೂ. ವರ್ಗಾವಣೆ ಮಾಡಿದ್ದಳು. ಆದರೆ, ರಾಜೇಶ್​ ಮಾತ್ರ ಬೆಂಗಳೂರಿಗೆ ಬರುವ ಯಾವುದೇ ಪ್ಲ್ಯಾನ್ ಮಾಡಿರಲಿಲ್ಲ. ಪದೇಪದೆ ಹಣ ಕೇಳಿದಾಗ ಅನುಮಾನ ಬಂದು ಯುವತಿ, ಕೇಂದ್ರ ವಿಭಾಗ ಸಿಇಎನ್ ಪೊಲೀಸ್​ ಠಾಣೆಗೆ ದೂರು ನೀಡಿದ್ದಾಳೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ತುಮಕೂರಲ್ಲಿ ಬುದ್ಧಿಮಾಂದ್ಯೆ ಮೇಲೆ ಅತ್ಯಾಚಾರವೆಸಗಿದ್ದ ಎಎಸ್​ಐಗೆ 20 ವರ್ಷ ಜೈಲು! 4 ವರ್ಷದ ಹಿಂದೆ ನಡೆದಿತ್ತು ಹೀನ ಕೃತ್ಯ

ಮುದ್ದಹನುಮೇಗೌಡ ಬಿಜೆಪಿ ಅಭ್ಯರ್ಥಿ? ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಕಣಕ್ಕಿಳಿಸಲು ಚಿಂತನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + eighteen =
Remember me
