ಬೆಂಗಳೂರು:ಅರ್ಧಕ್ಕೆ ನಿಲ್ಲಿಸಲಾಗಿದ್ದ ಮೇಕೆದಾಟು ಪಾದಯಾತ್ರೆಯನ್ನ ಮತ್ತೆ ಆರಂಭಿಸಲು ಕಾಂಗ್ರೆಸ್​ ಸಿದ್ಧತೆ ನಡೆಸಿದ್ದು, ಫೆ.27ರಿಂದ ಮೇಕೆದಾಟು ಹೋರಾಟ ಶುರುವಾಗಲಿದೆ.
ಮೇಕೆದಾಟು ಅಣೆಕಟ್ಟೆ ನಿರ್ಮಾಣಕ್ಕೆ ಒತ್ತಾಯಿಸಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪಾದಯಾತ್ರೆ 2022ರ ಜನವರಿ 9ರಂದು ಕನಕಪುರದ ಸಂಗಮದಿಂದ ಆರಂಭವಾಗಿತ್ತು. 4 ದಿನದ ಪಾದಯಾತ್ರೆ ರಾಮನಗರದವರೆಗೆ ತಲುಪಿತ್ತು. ಕರೊನಾ ಪ್ರಕರಣ ಹೆಚ್ಚಾಗಿದ್ದರಿಂದ 5ನೇ ದಿನಕ್ಕೆ ಪಾದಯಾತ್ರೆಯು ಮೊಟಕುಗೊಂಡಿತ್ತು. ಇದೀಗ ಪುನಃ ಯಾತ್ರೆ ಆರಂಭಿಸಲು ಉದ್ದೇಶಿಸಿದ್ದು, ರಾಮನಗರದಿಂದ ಬಿಡದಿ, ಕೆಂಗೇರಿ ಮಾರ್ಗವಾಗಿ ಮಲ್ಲೇಶ್ವರ ಒಳಗೊಂಡಂತೆ ಮಾರ್ಗವನ್ನು ಅಂತಿಮಗೊಳಿಸಲಾಗುತ್ತಿದೆ.
ಈ ಕುರಿತು ಗುರುವಾರ ಬೆಂಗಳೂರು ವ್ಯಾಪ್ತಿಯ ಶಾಸಕರೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಭೆ ನಡೆಸಿ, ಪಾದಯಾತ್ರೆ ಯಶಸ್ಸುಗೊಳಿಸಲು ಎಲ್ಲರ ಸಹಕರ ನೀಡಬೇಕು ಎಂದು ಕೋರಿದ್ದಾರೆ.
ಪಾದಯಾತ್ರೆಗೆ ತಯಾರಿ ನಡೆಸಿದ್ದೇವೆ. ಬಿಜೆಪಿ ಸರ್ಕಾರದಲ್ಲಿ ನಮಗೆ ಯಾತ್ರೆ ಮಾಡಲು ಅವಕಾಶ ಕೊಡುವುದಿಲ್ಲ. ಎರಡು ದಿನಗಳ ಹಿಂದೆ ಮಠದ ಕಾರ್ಯಕ್ರಮದಲ್ಲಿ ಸಾವಿರಾರು ಜನ ಸೇರಿದ್ದರು. ಆಡಳಿತ ಪಕ್ಷದ ಅನೇಕರು ಸೇರಿದ್ದರು. ಅವರ ಮೇಲೆ ಪ್ರಕರಣ ದಾಖಲಿಸಲಿಲ್ಲ. ನಾವು ಪಾದಯಾತ್ರೆ ಹೊರಡುತ್ತೇವೆಂದ ಕೂಡಲೇ ಇವರಿಗೆ ಕಾನೂನಿನ ನೆನಪಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಫೆ.27ರಂದು ಯಾತ್ರೆ ಆರಂಭಿಸಬೇಕೆಂದಿದ್ದೇವೆ. ಎಲ್ಲ ಶಾಸಕರ ಅಭಿಪ್ರಾಯ ಪಡೆದು, ಯಾತ್ರೆ ಮಾರ್ಗ ಬದಲಾಯಿಸಿ, ಕಡಿಮೆ ಅವಧಿಯಲ್ಲಿ ಮುಕ್ತಾಯಗೊಳಿಸುವ ಚಿಂತನೆ ಇದೆ ಎಂದು ಡಿಕೆಶಿ ‘ವಿಜಯವಾಣಿ’ಗೆ ವಿವರಿಸಿದರು.
ತುಮಕೂರಲ್ಲಿ ಹಿಜಾಬ್​ ವಿವಾದ: ಕೆಲಸಕ್ಕೆ ರಾಜೀನಾಮೆ ಕೊಟ್ಟ ಉಪನ್ಯಾಸಕಿ

ತಣ್ಣಗಾಗದ ಹಿಜಾಬ್ ವಿವಾದ: ಶಾಲೆಯಲ್ಲಿ ಸರಸ್ವತಿ ಫೋಟೋ ಬೇಡ ಎಂದ ಮುಸ್ಲಿಂ ವಿದ್ಯಾರ್ಥಿನಿಯ ತಾಯಿ

ವಿಜಯಪುರದಲ್ಲಿ ಹಾಡಹಗಲೇ ಪಿಎಸ್‌ಐ ಮಗನ ಹತ್ಯೆ: ಗರ್ಭಿಣಿ ಮಗಳ ಬಾಳಿಗೆ ಕೊಳ್ಳಿ ಇಟ್ಟ ಮಾಜಿ ಕಾರ್ಪೋರೇಟರ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − one =
Remember me
