ರಾಮನಗರ:ಕೋವಿಡ್​ ಕಾರಣದಿಂದ ಅರ್ಧಕ್ಕೆ ಮೊಟಕುಗೊಂಡಿದ್ದ ಮೇಕೆದಾಟು ಪಾದಯಾತ್ರೆಗೆ ಇಂದು(ಭಾನುವಾರ) ರಾಮನಗರದಲ್ಲಿ ಚಾಲನೆ ಸಿಕ್ಕಿದೆ.
ಶನಿವಾರ ರಾತ್ರಿ ಆದಿ ಚುಂಚನಗಿರಿ ಮಠದಲ್ಲೇ ವಾಸ್ತವ್ಯ ಹೂಡಿದ್ದ ಡಿಕೆಶಿ, ಭಾನುವಾರ ಬೆಳಗ್ಗೆ ಗವಿಗಂಗಾಧರೇಶ್ವನ ದರ್ಶನ ಪಡೆದರು. ಬಳಿಕ ನಗರದ ಚಾಮುಂಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಎಂಜಿ ರಸ್ತೆಯಲ್ಲಿನ ಪೀರನ್ ಷಾ, ವಲಿ ಷಾ ದರ್ಗಾದಲ್ಲಿ ಪ್ರಾರ್ಥಿಸಿದರು. ಬಳಿಕ ಅಲ್ಲಿಂದಲ್ಲೇ ಪೂರ್ಣಕುಂಭದೊಂದಿಗೆ ಮೆರವಣಿಗೆಯಲ್ಲಿ ಸಾಗಿ ಕನಕಪುರ ವೃತದಲ್ಲಿನ ಟಿ.ಆರ್. ಮಿಲ್​ನಲ್ಲಿ ಸಿದ್ಧಪಡಿಸಿದ್ದ ವೇದಿಕೆ ತಲುಪಿದರು.
10 ಗಂಟೆ ನಂತರ ವೇದಿಕೆ ಕಾರ್ಯಕ್ರಮ ಆರಂಭಗೊಂಡಿತು. ಬಿ.ಕೆ.ಹರಿಪ್ರಸಾದ್, ಸಿದ್ದರಾಮಯ್ಯ, ರಣದೀಪ್ ಸಿಂಗ್ ಸುರ್ಜೆವಾಲ, ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್, ಮಾಜಿ ಶಾಸಕ ಚೆಲುವರಾಯಸ್ವಾಮಿ, ನರೇಂದ್ರ ಸ್ವಾಮಿ, ಅಲ್ಲಂ ವೀರಭದ್ರಪ್ಪ, ಧೃವನಾರಾಯಣ್, ಸಲೀಂ ಅಹಮ್ಮದ್, ಯು.ಟಿ.ಖಾದರ್, ಎಚ್.ಕೆ.ಪಾಟೀಲ್, ರಾಮಲಿಂಗರೆಡ್ಡಿ, ಕುಸುಮಾ, ಪುಷ್ಪ ಅಮರನಾಥ್, ಜಿಲ್ಲಾಧ್ಯಕ್ಷ ಗಂಗಾಧರ್ ಇತರರು ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಇನ್ನು ಕೆಲವೇ ಕ್ಷಣದಲ್ಲಿ ಬೆಂಗಳುರಿನತ್ತ ಪಾದಯಾತ್ರೆ ಹೊರಡಲಿದೆ.
ಕೋವಿಡ್​ನಿಂದಾಗಿ ಪಾದಯಾತ್ರೆ ಜ.13ಕ್ಕೆ ಅಂತ್ಯಕಂಡಿತ್ತು. ಇದೀಗ ಮತ್ತೆ ಆರಂಭಗೊಂಡಿದೆ. ರಾಮನಗರದಿಂದ ಬೆಂಗಳೂರಿನ ನ್ಯಾಷನಲ್​ ಕಾಲೇಜು ಮೈದಾನಕ್ಕೆ ಒಟ್ಟಾರೆ 80 ಕಿ.ಮೀ. ದೂರವನ್ನು 5 ದಿನಗಳಲ್ಲಿ ಕ್ರಮಿಸಲಿದೆ.
ಸ್ಪರ್ಧಾತ್ಮಕ ಪರೀಕ್ಷೆ: ಕಾರ್ಮಿಕರ ಮಕ್ಕಳಿಗೆ ಉಚಿತ ತರಬೇತಿ, ಇಲ್ಲಿದೆ ಉಪಯುಕ್ತ ಮಾಹಿತಿ

ಪೊಲೀಸರನ್ನೇ ಡ್ರಾಪ್ ಕೇಳಿ ಸಿಕ್ಕಿಬಿದ್ದ ಕಳ್ಳರು! ಇದು ಸಿನಿಮಾ ಕಥೆಯಲ್ಲ, ದೊಡ್ಡಬಳ್ಳಾಪುರದಲ್ಲಿ ಹಾಡಹಗಲೇ ನಡೆದ ಘಟನೆ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:15 − ten =
Remember me
