ಬೆಂಗಳೂರು:ಅಡೆತಡೆಗಳನ್ನು ದಾಟಿ ಬಂದ ಮೇಕೆದಾಟು ಪಾದಯಾತ್ರೆ ಗುರುವಾರ ಬಸವನಗುಡಿಯ ನ್ಯಾಷನಲ್​ ಕಾಲೇಜು ಮೈದಾನದಲ್ಲಿ ಸಂಪನ್ನಗೊಳ್ಳುತ್ತಿದ್ದು, ಈ ವೇಳೆ ಅಬ್ಬರಿಸಿ ಬೊಬ್ಬಿರಿಯುವ ಧಾವಂತದಲ್ಲಿ ಕಾಂಗ್ರೆಸ್​ ಇದೆ. ಕೊನೇ ದಿನದ ಪಾದಯಾತ್ರೆಯು ಇಂದು ಬೆಳಗ್ಗೆ ಅರಮನೆ ಮೈದಾನದಿಂದ ಹೊರಟಿದೆ.
ರಾಮನಗರದ ಕಾರ್ಯಕ್ರಮದಲ್ಲಿ ಗಂಡಸ್ತನದ ಸವಾಲು ಹಾಕಿದ್ದ ಸಚಿವ ಡಾ. ಸಿ.ಎನ್​. ಅಶ್ವತ್ಥನಾರಾಯಣ್​ಗೆ ಎದಿರೇಟು ನೀಡಲು ಸಂಸದ ಡಿ.ಕೆ. ಸುರೇಶ್​ ಪಾದಯಾತ್ರೆ ಮಾರ್ಗವನ್ನೇ ಬದಲಿಸಿದ್ದಾರೆ. ಗುರುವಾರ ಪಾದಯಾತ್ರೆಯನ್ನು ಮಲ್ಲೇಶ್ವರದಲ್ಲಿ ಹಾದುಹೋಗುವಂತೆ ನೋಡಿಕೊಂಡಿದ್ದಾರೆ. ಮಲ್ಲೇಶ್ವರದಲ್ಲಿ ಜನಬಲ ಪ್ರದರ್ಶನಕ್ಕೂ ಕಾಂಗ್ರೆಸ್​ ತಯಾರಿ ನಡೆಸಿದೆ. ರಾಜ್ಯದ ಮೂಲೆಮೂಲೆಯಿಂದ ಕಾರ್ಯಕರ್ತರು ಪಾದಯಾತ್ರೆಗೆ ಆಗಮಿಸುತ್ತಿದ್ದು, ಬಸವನಗುಡಿಯ ನ್ಯಾಷನಲ್​ ಕಾಲೇಜು ಮೈದಾನದಲ್ಲಿ ಇಂದು ಬೃಹತ್​ ಸಮಾವೇಶದೊಂದಿಗೆ ಅಂತ್ಯವಾಗಲಿದೆ.
ಇಂದು ಎಲ್ಲೆಲ್ಲಿ?:ಕಾವೇರಿ ಚಿತ್ರಮಂದಿರದಿಂದ ಸ್ಯಾಂಕಿ ಕೆರೆ, 18ನೇ ಕ್ರಾಸ್​ ಮಲ್ಲೇಶ್ವರ, ಮಾರ್ಗೊಸಾ ರಸ್ತೆ, ಕೆ.ಸಿ. ಜನರಲ್​ ಆಸ್ಪತ್ರೆ, ಲಿಂಕ್​ ರಸ್ತೆ, ಶೇಷಾದ್ರಿಪುರ, ಸಂಗೊಳ್ಳಿ ರಾಯಣ್ಣ ಪ್ರತಿಮೆ, ಕಾಟನ್​ ಪೇಟೆ ಮುಖ್ಯರಸ್ತೆ, ಬ್ರಿಯಾಂಡ್​ ವೃತ್ತ, ರಾಯನ್​ ವೃತ್ತ, ಈದ್ಗಾ ಮೈದಾನ ತಲುಪಿ, ಸಂಜೆ ಬಸವನಗುಡಿಯ ನ್ಯಾಷನಲ್​ ಕಾಲೇಜು ಮೈದಾನದಲ್ಲಿ ಮೇಕೆದಾಟು ಪಾದಯಾತ್ರೆ ಸಮಾಪನಗೊಳ್ಳಲಿದೆ.
ನ್ಯಾಷನಲ್​ ಕಾಲೇಜಿನಲ್ಲಿ ಈ ಹೋರಾಟ ಮುಗಿದರೂ ಇದು ರಾಜ್ಯದಲ್ಲಿನ ಹೋರಾಟದಲ್ಲಿನ ಮೊದಲ ಭಾಗ ಅಷ್ಟೇ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಹೇಳಿದ್ದಾರೆ.
ಮಲೆನಾಡು ಗಿಡ್ಡ ಹಿರಿಯಜ್ಜಿ ಇನ್ನಿಲ್ಲ: 36 ವರ್ಷ ಬದುಕಿ ದಾಖಲೆ ಬರೆದಿದ್ದ ಕೌಲೆ ಇನ್ನು ನೆನಪು ಮಾತ್ರ

ಶಿವಮೊಗ್ಗದ ಹರ್ಷನ ಕುಟುಂಬಕ್ಕೆ ಮಂತ್ರಾಲಯ ಮಠದಿಂದ ನೆರವು

ನಮ್​ ದೇಶಕ್ಕೆ ಯಾಕ್​ ಬಂದ್ರಿ… ರೈಫಲ್​ ಹಿಡಿದ ಸೈನಿಕನಿಗೆ ರಸ್ತೆಯಲ್ಲೇ ಪುಟ್ಟ ಬಾಲಕಿ ಆವಾಜ್! ಮನಕಲಕುತ್ತೆ ಈ ದೃಶ್ಯ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:10 + 20 =
Remember me
