ತುಮಕೂರು:ಬೇಸಿಗೆ ಆರಂಭವಾದ ಬೆನ್ನಲ್ಲೇ ಜಿಲ್ಲೆಯ ಹಾಲು ಉತ್ಪಾದಕರಿಗೆ ಭರ್ಜರಿ ಗಿಫ್ಟ್​ ಸಿಕ್ಕಿದ್ದು, ಪ್ರತಿ ಲೀಟರ್​ ಹಾಲಿಗೆ 2.50ರೂ. ಹೆಚ್ಚಿಸಿ ತುಮುಲ್​ ಆದೇಶಿಸಿದೆ. ಆದರೆ, ಗ್ರಾಹಕರು ಖರೀದಿಸುವ ಹಾಲಿನ ದರದಲ್ಲಿ ಯಾವುದೇ ವ್ಯತ್ಯಾಸವಿಲ್ಲ.
ಮಾ.16ರಿಂದಲೇ ನೂತನ ದರ ಜಾರಿಯಾಗಿದ್ದು, ಜಿಲ್ಲೆಯ 1276 ಹಾಲು ಉತ್ಪಾದಕರ ಸಂಗಳಲ್ಲಿ ಹಾಲು ಮಾರಾಟ ಮಾಡುವ ರೈತರಿಗೆ ಅನುಕೂಲವಾಗಲಿದೆ. ಪ್ರತಿದಿನ 74466 ರೈತರು ಹಾಲು ಸರಬರಾಜು ಮಾಡುತ್ತಿದ್ದಾರೆ. ಬೇಸಿಗೆ ಹಿನ್ನೆಲೆಯಲ್ಲಿ ಹಾಲು ಉತ್ಪಾದನೆ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ದರ ಹೆಚ್ಚಳ ಮಾಡಿದೆ. ತುಮಕೂರು ಸಹಕಾರಿ ಹಾಲು ಒಕ್ಕೂಟ 1276 ಸಂGಗಳಿಂದ ಪ್ರತಿದಿನ 797085 ಕೆಜಿ ಹಾಲು ಶೇಖರಣೆಯಾಗುತ್ತಿದೆ.
ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 1276 ಸಂGಗಳಲ್ಲಿ 284411 ಸದಸ್ಯರಿದ್ದು, ಪ್ರತಿದಿನ ಶೇ.6.75 ಲಕ್ಷ ಕೆಜಿ ಹಾಲು ಶೇಖರಣೆಯಾಗಿದೆ. 5.06 ಲಕ್ಷ ಲೀಟರ್​ಗಳಷ್ಟು ಹಾಲು ದ್ರವ ರೂಪದಲ್ಲಿ ಮಾರಾಟವಾಗುತ್ತಿದೆ, ಉಳಿಕೆ 1.69 ಲಕ್ಷ ಲೀ. ಹಾಲು ಪರಿವರ್ತನೆಗೆ ರವಾನಿಸಲಾಗುತ್ತಿದೆ.
ಒಕ್ಕೂಟ 2021-22ನೇ ಸಾಲಿನಲ್ಲಿ ನಷ್ಟದಿಂದಲೇ ಬಂದಿದ್ದರೂ ಹಾಲಿನ ದರ ಕಡಿಮೆ ಮಾಡದೆ ರೈತರ ಹಿತ ಕಾಯಲಾಗಿತ್ತು. ಫೆಬ್ರವರಿಯಲ್ಲಿ 4.59 ಕೋಟಿ ರೂ.ಲಾಭವಾಗಿದೆ. ಈ ಹಿನ್ನೆಲೆಯಲ್ಲಿ ರೈತರಿಗೂ ಲಾಭದ ಪಾಲು ನೀಡಲು ತುಮುಲ್​ ನಿರ್ಧರಿಸಿದೆ.
ಹಾಲಿನ ಗುಣಮಟ್ಟಕ್ಕೆ ಆದ್ಯತೆ:ಮಂಗಳವಾರ ಆಯೋಜಿಸಿದ್ದ ಆಡಳಿತ ಮಂಡಳಿ ಸಭೆಯಲ್ಲಿ ಹಾಲಿನ ದರ ಮಾ.16 ಬುಧವಾರದಿಂದ ಜಾರಿಗೆ ಬರುವಂತೆ ಉತ್ಪಾದಕರಿಗೆ ನೇರವಾಗಿ ಪ್ರತಿ ಲೀಟರ್​ ಹಾಲಿಗೆ 2.50 ರೂ. ಹೆಚ್ಚಿಸಲಾಗಿದೆ. 3.5 ಜಿಡ್ಡಿನಾಂಶ ಇರುವ ಹಾಲಿಗೆ 27.50 ರೂ., ಸಂಘಗಳಿಗೆ 28.43 ರೂ.ನಂತೆ ಹಾಗೂ ಹಾಲು ಉತ್ಪಾದಕರಿಗೆ 4.1 ಜಿಡ್ಡಿನಾಂಶ ಇರುವ ಹಾಲಿಗೆ 28.92 ರೂ., ಸಂಘಗಳಿಗೆ 29.85 ರೂ. ಲಭ್ಯವಾಗಲಿದೆ.
ಬೇಸಿಗೆ ಹಾಗೂ ಮೇವಿನ ಕೊರತೆ ಹಿನ್ನೆಲೆಯಲ್ಲಿ ಹಾಲಿನ ಉತ್ಪಾದನೆ ಕಡಿಮೆಯಾಗಿದೆ. ಈ ಸಂದರ್ಭದಲ್ಲಿ ರೈತರ ಸಂಕಷ್ಟ ಮನಗಂಡು ಮಾ.16ರಿಂದ ಪ್ರತಿ ಲೀಟರ್​ಗೆ 2.50 ರೂ. ಹೆಚ್ಚಿಸಲು ತೀರ್ಮಾನಿಸಲಾಗಿದೆ. ಆದರೆ, ಗ್ರಾಹಕರು ಖರೀದಿಸುವ ಹಾಲಿನ ದರದಲ್ಲಿ ಯಾವುದೇ ವ್ಯತ್ಯಾಸವಿಲ್ಲ.| ಸಿ.ವಿ.ಮಹಲಿಂಗಯ್ಯತುಮುಲ್​ ಅಧ್ಯಕ್ಷ
ತುಂಬಾ ದಪ್ಪಗಿದ್ದೀನಿ, ಕ್ಷಮಿಸಿ ಪಪ್ಪಾ… ತಂದೆ ಮೊಬೈಲ್​ಗೆ ಸಂದೇಶ ರವಾನೆ: ಬೆಳಗಾಗುವಷ್ಟರಲ್ಲಿ ನಡೆದೇಹೋಯ್ತು ದುರಂತ

ಹಿಂದೂ ಹುಡ್ಗೀರೇ ದಯವಿಟ್ಟು ನನ್​ ಮಾತು ಕೇಳಿ… ಲವ್​ ಜಿಹಾದ್​ಗೆ ಸಿಲುಕಿ ನರಳುತ್ತಾ ಅಪೂರ್ವ ಬಾಯ್ಬಿಟ್ಟ ಕಟು ಸತ್ಯ ಇಲ್ಲಿದೆ

ಶಾಲೆಯಲ್ಲಿ ಹಿಜಾಬ್​ ಬ್ಯಾನ್​: ​ಸಮವಸ್ತ್ರ ಆದೇಶ ಎತ್ತಿಹಿಡಿದು ಐತಿಹಾಸಿಕ ತೀರ್ಪು ಪ್ರಕಟಿಸಿದ ಹೈಕೋರ್ಟ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 10 =
Remember me
