ಬೆಂಗಳೂರು:ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಲು ಆನಂದ್ ಸಿಂಗ್ ನಿರ್ಧರಿಸಿದ್ದಾರೆ. ಈಗಾಗಲೇ ಸ್ಪೀಕರ್ ಭೇಟಿಗೆ ಅವಕಾಶ ಕೇಳಿದ್ದು, ಇನ್ನು ಕೆಲವೇ ಗಂಟೆಯಲ್ಲಿ ಬೆಂಗಳೂರಿಗೆ ಆಗಮಿಸಿ ರಾಜೀನಾಮೆ ಘೋಷಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ಮಾತ್ರವಲ್ಲ, ರಾಜಕೀಯಕ್ಕೂ ನಿವೃತ್ತಿ ಘೋಷಣೆ ಮಾಡಲಿದ್ದಾರೆ. ಬೈ ಎಲೆಕ್ಷನ್ ನಡೆದರೂ ಅದಕ್ಕೂ ನಿಲ್ಲದಿರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಆನಂದ್​ ಸಿಂಗ್​ಗೆ ಪ್ರವಾಸೋದ್ಯಮ ಖಾತೆ ಸಿಕ್ಕಿದೆ. ತಾನು ಕೇಳಿದ್ದ ಖಾತೆಯನ್ನು ಕೊಟ್ಟಿಲ್ಲ ಎಂದು ಅಮಾಧಾನ ಗೊಂಡಿರುವ ಆನಂದ್​ ಸಿಂಗ್​, ಖಾತೆ ಬದಲಾವಣೆಗೆ ಪಟ್ಟು ಹಿಡಿದಿದ್ದರು. ಇದುವರೆಗೂ ಇದಕ್ಕೆ ಸಿಎಂ ಬೊಮ್ಮಾಯಿ ಅಸ್ತು ಎಂದಿಲ್ಲ. ಇನ್ನಷ್ಟು ಅಸಮಾಧಾನಗೊಂಡ ಆನಂದ್​ಸಿಂಗ್​, ಕಳೆದ ಮೂರು ದಿನಗಳಿಂದ ಎಸ್ಕಾರ್ಟ್ ಇಲ್ಲದೆ ಓಡಾಡುತ್ತಿದ್ದಾರೆ. ಹೊಸಪೇಟೆಯ ಶ್ರೀ ವೇಣುಗೋಪಾಲ ಸ್ವಾಮಿ ದೇವಾಲಯದಲ್ಲಿ ಮೂರು ದಿನದಿಂದ ಪೂಜೆ ಸಲ್ಲಿಸಿದ್ದಾರೆ. ಮನೆಯಿಂದ- ದೇವಾಲಯ ಮತ್ತು ದೇವಾಲಯದಿಂದ-ಮನೆಗೆ ಬರಬೇಕಾದ್ರೆ ಖಾಸಗಿ ವಾಹನದಲ್ಲಿ ಓಡಾಡಿದ್ದಾರೆ. ಇದು ಕುಟುಂಬ ಹಮ್ಮಿಕೊಂಡಿರುವ ಪೂಜೆ ಎಂದು ಆನಂದ್​ ಸಿಂಗ್​ ಹೇಳಿದ್ದಾರೆ. ಇನ್ನು ಶಾಸಕರ ಕಚೇರಿಯಲ್ಲಿದ್ದ ಬೋರ್ಡ್​ ಅನ್ನು ನಿನ್ನೆ ತೆರವು ಮಾಡಲಾಗಿದೆ. ನಿತ್ಯ ಬೆಳಗ್ಗೆ 10ಕ್ಕೆ ಆಗಮಿಸುತ್ತಿದ್ದ ಕಾರ್ಯಾಲಯದ ಸಿಬ್ಬಂದಿ, ಇಂದು ಕಚೇರಿಯ ಬಾಗಿಲು ತೆರೆದಿರಲಿಲ್ಲ. ಕಚೇರಿಗೆ ಯಾರೂ ಹೋಗಬೇಡಿ ಎಂದು ಆನಂದ್​ ಸಿಂಗ್ ಸೂಚನೆ ಕೊಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇಂದು ಪೂಜೆ ಬಳಿಕ ಬೆಂಗಳೂರಿಗೆ ಆಗಮಿಸಲಿರುವ ಆನಂದ್​ ಸಿಂಗ್​, ಸ್ಪೀಕರ್​ ಅನ್ನು ಭೇಟಿ ಮಾಡಲಿದ್ದಾರೆ ಎನ್ನಲಾಗಿದೆ.
ಸಿಎಂ ವಿರುದ್ಧ ಅತ್ತ ಪ್ರೀತಂಗೌಡ, ಇತ್ತ ಆನಂದ್​ ಸಿಂಗ್​ ಆಕ್ರೋಶ! ಇಬ್ಬರಿಗೂ ಬೇಸರ ಆಗಿರೋದು ನಿಜ ಎಂದ ಬೊಮ್ಮಾಯಿ

ನನ್ನ ತಾಯಾಣೆ.. ಅಷ್ಟೊಂದು ಹಣವನ್ನು ಜೀವನದಲ್ಲಿ ನೋಡಿಯೇ ಇರಲಿಲ್ಲ: ಮಂಜು ಪಾವಗಡ

ಮದ್ವೆಯಾದ 23 ದಿನಕ್ಕೇ ನವದಂಪತಿ ದುರಂತ ಸಾವು! ಅತ್ತಿಗೆಯ ಪ್ರಾಣವೂ ಹೋಯ್ತು…

ಅಮ್ಮನ ಮಾತು ಕೇಳಿದ್ದರೆ ವಿವೇಕ್​ ಸಾಯುತ್ತಲೇ ಇರಲಿಲ್ಲ..! ಮುಗಿಲುಮುಟ್ಟಿದೆ ಹೆತ್ತವ್ವನ ಆಕ್ರಂದನ

ವಿವೇಕ್​ ಸಾವು ಪ್ರಕರಣ: ಕೇಸ್​ ದಾಖಲಿಸ್ತೀವಿ ಅಂದವರು ಆ ಒಂದು ಫೋನ್​ ಕಾಲ್​ಗೆ ಸುಮ್ಮನಾದ್ರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × four =
Remember me
