ಬೆಂಗಳೂರು:ಕಾಂಗ್ರೆಸ್​ನವರೇ ಪಾದಯಾತ್ರೆ ಬೇಡ, ತೀರ್ಥ ಯಾತ್ರೆ ಮಾಡಿ ಎಂದು ಸಚಿವ ಆರ್​. ಅಶೋಕ್​ ಲೇವಡಿ ಮಾಡಿದ್ದಾರೆ.
ಪಂಚರಾಜ್ಯ ಚುನಾವಣಾ ಫಲಿತಾಂಶ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಆರ್​. ಅಶೋಕ್​, ಬಿಜೆಪಿ ಮತ್ತೆ ಮತ್ತೆ ಜಯಬೇರಿ ಬಾರಿಸ್ತಿದೆ. 5 ರಾಜ್ಯಗಳ ಚುನಾವಣೆಯಲ್ಲಿ 4 ರಾಜ್ಯದಲ್ಲಿ ಬಿಜೆಪಿ ಜಯ ಗಳಿಸ್ತಿದೆ. ಪಂಚರಾಜ್ಯಗಳ ಪೈಕಿ ಕಾಂಗ್ರೆಸ್​ಗೆ ಪಾಲಿಗೆ ಇದ್ದದ್ದು, ಪಂಜಾಬ್ ಮಾತ್ರ. ಈಗ ಪಂಜಾಬ್​ನಲ್ಲೂ ಹೀನಾಯವಾಗಿ ಸೋತಿದ್ದಾರೆ. ಜನರ ದಿಕ್ಸೂಚಿ ಫಲಿತಾಂಶ ಇದು. ಮುಂದೆ ಕರ್ನಾಟಕದಲ್ಲೂ ಇದೇ ಫಲಿತಾಂಶ ಬರಲಿದೆ ಎಂದರು.
ಕಾಂಗ್ರೆಸ್​ನವರು ಪಂಜಾಬ್​ನಲ್ಲಿ ಅಬ್ಬರದ ಪ್ರಚಾರ ಮಾಡಿದ್ರು. ಆದರೆ ಅಲ್ಲಿನ ಮತದಾರರು ಅವರಿಗೆ ಮಣೆ ಹಾಕಲಿಲ್ಲ. ಸಾರ್ವತ್ರಿಕ ಚುನಾವಣೆ ಹತ್ತಿರ ಆಗ್ತಿದಂತೆ, ಕರ್ನಾಟಕದಲ್ಲೂ ಬಿಜೆಪಿ ಅಲೆ ಎಳಲಿದೆ. ಕಾಂಗ್ರೆಸ್​ನವರು ಮೇಕೆದಾಟು ಪಾದಯಾತ್ರೆ ಮಾಡಿ ಕರೊನಾ ಸೋಂಕು ಹೆಚ್ಚಳ, ಟ್ರಾಫಿಕ್​ ಜಾಮ್​ ಕಿರಿಕಿರಿ ಉಂಟು ಮಾಡಿದ್ದರು. ಈ ಕುರಿತು ಜನ ಕಾಂಗ್ರೆಸ್​ನವರಿಗೆ ‘ಪಾದಯಾತ್ರೆ ಬೇಡ, ತೀರ್ಥ ಯಾತ್ರೆ ಮಾಡಿ’ ಅಂತಿದ್ದಾರೆ ಎಂದು ವ್ಯಂಗ್ಯವಾಡಿದರು.
ಉತ್ತರ ಪ್ರದೇಶದಲ್ಲಿ ಫಲಿಸಲಿಲ್ಲ ಪ್ರಿಯಾಂಕಾ ಗಾಂಧಿ ತಂತ್ರಗಾರಿಕೆ, ಯೋಗಿ ಹವಾ ಮುಂದೆ ನೆಲಕ್ಕಚ್ಚಿದ ಕಾಂಗ್ರೆಸ್​

ಗೋವಾದಲ್ಲಿ ಸರಳ ಬಹುಮತದತ್ತ ಬಿಜೆಪಿ, ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವ ಖುಷಿಯಲ್ಲಿ ಕಮಲ ಪಡೆ

Sign in to your account
Please enter an answer in digits:thirteen − six =
Remember me
