ಬೆಂಗಳೂರು:ಕಾನೂನು ಮತ್ತು ಸುವ್ಯವಸ್ಥೆ, ಸಮಾಜಕ್ಕೆ ಕಂಟಕವಾಗಿದ್ದ ಕೆಲ ಸಂಘಟನೆಗಳ‌ ವಿರುದ್ಧ ಬಿಜೆಪಿ ಅಧಿಕಾರದಲ್ಲಿದ್ದಾಗ ಕೇಸ್ ದಾಖಲಿಸಿ ಹೆಡೆಮುರಿ ಕಟ್ಟಲಾಗಿತ್ತು. ನಂತರ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಈ ಕೇಸ್​ಗಳಿಂದ ಖುಲಾಸೆಗೊಳಿಸಿ ಬಿರಿಯಾನಿ ಊಟ‌ ಹಾಕಿ ಆರಾಮವಾಗಿ ಓಡಾಡಲು ಬಿಟ್ಟರು. ಈಗ ನಮಗೆ‌‌ ಬುದ್ಧಿಮಾತು ಹೇಳುವುದು‌ ಬೇಡ, ಅಂತಹ ನೈತಿಕತೆಯೂ ಕಾಂಗ್ರೆಸ್​ಗೆ ಇಲ್ಲವೆಂದು ಕಂದಾಯ ಸಚಿವ ಆರ್.ಅಶೋಕ್ ವಾಗ್ದಾಳಿ ನಡೆಸಿದರು.
ಬಿಜೆಪಿ ಆಡಳಿತದಲ್ಲಿ ರಾಜ್ಯದ ಜನರಿಗೆ ರಕ್ಷಣೆ‌ ಇಲ್ಲದಂತಾಗಿದೆ ಎಂಬ ಕಾಂಗ್ರೆಸ್ ಟೀಕೆಗೆ ವಿಧಾನಸೌಧದಲ್ಲಿ ಶುಕ್ರವಾರ ಉತ್ತರಿಸಿದ ಅವರು, ಬಿಜೆಪಿ ಅಧಿಕಾರದಲ್ಲಿರುವ ಕಾರಣಕ್ಕೆ ಭಯೋತ್ಪಾದಕರು, ವಿಚಿದ್ರಕಾರಿ ಶಕ್ತಿಗಳು ನಿಯಂತ್ರಣದಲ್ಲಿವೆ. ಇನ್ನಷ್ಟು ಕಠಿಣ ಕ್ರಮ ವಹಿಸಬೇಕು ಎನ್ನುವ ಜನರ ಭಾವನೆಗೆ ಸರ್ಕಾರ ಸ್ಪಂದಿಸಿ ಕಾನೂನಿನ ವ್ಯಾಪ್ತಿಯಲ್ಲಿ ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಿದೆ ಎಂದರು.
ನಿಖರ ಕಾರಣ ಗೊತ್ತಿಲ್ಲ:ಸುರತ್ಕಲ್​ನಲ್ಲಿ ಫಾಜಿಲ್ ಎಂಬ ಯುವಕನ ಕೊಲೆಗೆ ನಿಖರ ಕಾರಣ ಗೊತ್ತಿಲ್ಲ. ವೈಯಕ್ತಿಕ ದ್ವೇಷ,‌ ಲವ್ ಅಫೇರ್… ಹೀಗೆ ಏನೇನೋ ಹೇಳುತ್ತಾರೆ. ತನಿಖೆಯ ನಂತರ ತಿಳಿಯಲಿದ್ದು, ಮುಖ್ಯಮಂತ್ರಿ ನಿರ್ದೇಶನದಂತೆ ದುಷ್ಕರ್ಮಿಗಳ ಪತ್ತೆ ಕಾರ್ಯ ನಡೆದಿದೆ. ಸರ್ಕಾರದ ದೃಷ್ಟಿಯಲ್ಲಿ ಹಿಂದು-ಮುಸ್ಲಿಂ ಎಲ್ಲರೂ ಒಂದೇ. ಅಮಾನವೀಯ ಕೃತ್ಯಗಳನ್ನು ಯಾವುದೇ ಕಾರಣಕ್ಕೂ ಸಹಿಸಲ್ಲ ಎಂದು ಆರ್.ಅಶೋಕ್ ಹೇಳಿದರು.
ರಾಜ್ಯಮಟ್ಟದ ಕಬ್ಬಡಿ ಪಂದ್ಯ ಆಟವಾಡುತ್ತಲೇ ಹಾರಿಹೋಯ್ತು ಆಟಗಾರನ ಪ್ರಾಣಪಕ್ಷಿ! ಮನಕಲಕುತ್ತೆ ಸಾವಿನ ಆ ದೃಶ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + five =
Remember me
