ಹಾಸನ:ಹಿಜಾಬ್ ವಿವಾದದ ಹಿಂದೆ ಕೆಲ ಮುಸ್ಲಿಂ ಸಂಘಟನೆಗಳ ಕೈವಾಡವಿದೆ. ತನಿಖೆ ಬಳಿಕ ಎಲ್ಲವೂ ಎಲ್ಲವೂ ಬಯಲಾಗಲಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.
ಅರಸೀಕೆರೆಯಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಸಚಿವರು, ಸರ್ಕಾರ ಈಗಾಗಲೇ ತನಿಖೆ ನಡೆಸುತ್ತಿದೆ. ಎಲ್ಲವೂ ಬಯಲಿಗೆ ಬರಲಿದೆ. ಯಾವ ವಿಷಯ? ಯಾಕೆ ಬಂತು? ಇಷ್ಟು ದಿನ ಸಮವಸ್ತ್ರದಲ್ಲೇ ಬರುತ್ತಿದ್ದಂತಹ ಹೆಣ್ಣುಮಕ್ಕಳು ಇದ್ದಕ್ಕಿದ್ದಂತೆ ನಮಗೆ ಧರ್ಮ,‌ ಅದರ ಆಚರಣೆಯೇ ಮುಖ್ಯ ಅಂತಾ ಹೇಳಿದ್ರು. ಯಾವ್ಯಾವ ಹೆಣ್ಣುಮಕ್ಕಳು, ಯಾವ್ಯಾವ ಟ್ವೀಟ್‌ಗಳನ್ನು ರೀಟ್ವೀಟ್ ಮಾಡಿದ್ದಾರೆ ಅದೆಲ್ಲವೂ ಹೊರಗೆ ಬರುತ್ತೆ ಎಂದರು.
ಹಿಜಾಬ್ ಹಾಕಬೇಕು, ಹಾಕಬಾರದು ಎಂದು ನಾವು ಹೇಳುತ್ತಿಲ್ಲ. ಶಾಲಾ-ಕಾಲೇಜುಗಳಿಗೆ ಮಕ್ಕಳು ಸಮವಸ್ತ್ರದಲ್ಲಿ ಬರಬೇಕು ಎಂದು ಸ್ಪಷ್ಟವಾಗಿ ಹೇಳಿದ್ದೇವೆ. ಸಮವಸ್ತ್ರಕ್ಕಿಂತ ನಮಗೆ ಧರ್ಮವೇ ಮುಖ್ಯ, ಅದರ ಆಚರಣೆಯೇ ಮುಖ್ಯ ಅಂಥಾ ವಿವಾದ ಶುರು ಮಾಡಿದರು. ಶಾಲೆಗಳಿಗೆ ಹಿಜಾಬ್, ಕೇಸರಿ ಶಾಲು ಹಾಕಿಕೊಂಡು ಬರಬಾರದು ಎಂದು ಹೈಕೋರ್ಟ್ ಮುಖ್ಯ ನ್ಯಾಯಾಧೀಶರು ಸ್ಪಷ್ಟವಾಗಿ ಹೇಳಿದ್ದಾರೆ. ಅದಕ್ಕೆ ಕರ್ನಾಟಕ ಸರ್ಕಾರ ಬದ್ಧವಾಗಿರುತ್ತೆ. ಹೈಕೋರ್ಟ್ ಆದೇಶದ ಪ್ರಕಾರ ನಾಳೆ(ಸೋಮವಾರ)ಯಿಂದಲೇ 9-10ನೇ ತರಗತಿಗಳು ಆರಂಭವಾಗುತ್ತವೆ ಎಂದು ಸಚಿವ ನಾಗೇಶ್ ಹೇಳಿದರು.
ಅನವಶ್ಯಕವಾಗಿ ರಾಜ್ಯದಲ್ಲಿ ಸಮಸ್ಯೆ ಹುಟ್ಟುಹಾಕಿದ್ದಾರೆ. ರಾಜಕೀಯ ಪಕ್ಷಗಳು ಇದರೊಳಗೆ ಬಂದಿದ್ದರಿಂದ ಶಾಲಾ-ಕಾಲೇಜುಗಳಿಗೆ ರಜೆ ನೀಡಬೇಕಾಯಿತು. ಹೈಕೋರ್ಟ್ ಆದೇಶದಂತೆ ಎಲ್ಲ ಮಕ್ಕಳೂ ತರಗತಿಯಲ್ಲಿ ಇರ್ತಾರೆ, ಎಲ್ಲ ಶಾಲೆಗಳು ನಡೆಯುತ್ತೆ ಎಂಬ ವಿಶ್ವಾಸ ನನಗಿದೆ ಎಂದರು.
ಬೆಂಗಳೂರಿಗೂ ಕಾಲಿಟ್ಟ ಹಿಜಾಬ್​ ವಿವಾದ: ವಿದ್ಯಾಸಾಗರ್​ ಶಾಲೆ ಶಿಕ್ಷಕಿ ಕೆಲಸದಿಂದ ವಜಾ, ಇದಕ್ಕೆಲ್ಲ ಆ ಬರಹವೇ ಕಾರಣ?

ಟಿಪ್ಪು ಎಕ್ಸ್​ಪ್ರೆಸ್ ರೈಲಿನ ಹೆಸರು ಬದಲಾವಣೆ ಮಾಡ್ತೀವಿ: ಪ್ರತಾಪ್​ ಸಿಂಹ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × five =
Remember me
