ಬೆಂಗಳೂರು:ಅಪ್ಪ- ಅಮ್ಮ ಸುಂದರ ಹುಡುಗಿಯನ್ನು ನೋಡಿ ಮದುವೆ ಮಾಡ್ತಾರೆ. ಮಗ ಸರಿಯಾಗಿ ಬಳಸಿಕೊಳ್ಳದಿದ್ದರೆ ಅದು ಅವನ ತಪ್ಪೇ ಹೊರತು ಅಪ್ಪ-ಅಮ್ಮ ಹೇಗೆ‌ ಹೊಣೆಗಾರರಾಗುತ್ತಾರೆ? ಸ್ವಚ್ಛ ಭಾರತ ಯೋಜನೆಯಡಿ ನಿರ್ಮಿಸಿದ ಶೌಚಗೃಹ ಬಳಕೆ ಕುರಿತು ಕೇಳಿದ ಪ್ರಶ್ನೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಈ ರೀತಿ ಉತ್ತರಿಸಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.
ಪಕ್ಷದ ರಾಜ್ಯ ಕಚೇರಿಯಲ್ಲಿ ಶನಿವಾರ ಕರೆದ ಮಾಧ್ಯಮಗೋಷ್ಠಿಯಲ್ಲಿ ಸ್ವಚ್ಛ ಭಾರತ ಮಿಷನ್​ನಡಿ ರಾಜ್ಯದಲ್ಲಿ ಒಟ್ಟು 12.62 ಲಕ್ಷ ವೈಯಕ್ತಿಕ ಶೌಚಗೃಹಗಳನ್ನು ನಿರ್ಮಿಸಲಾಗಿದೆ ಎಂದು ಸಚಿವ ಈಶ್ವರಪ್ಪ ತಿಳಿಸಿದರು. ಕಟ್ಟಿಸಿದ ಎಲ್ಲ ಶೌಚಗೃಹಗಳು ಬಳಕೆಯಾಗುತ್ತಿವೆಯೇ? ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಈ ಪ್ರಶ್ನೆಗೆ ಉತ್ತರಿಸುವುದು‌ ಕಷ್ಟ ಸಾಧ್ಯ. ಬಯಲು ಬಹಿರ್ದೆಸೆ ತಡೆಯಲು ಶೌಚಗೃಹ ಬಳಕೆಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ ಎಂದರು. ಹಾಗಿದ್ದರೆ ಯೋಜನೆ ವಿಫಲವಾದಂತಲ್ಲವೆ? ಎಂದು ಮರು ಪ್ರಶ್ನಿಸಿದಾಗ, ‘ಸುಂದರ ಹುಡುಗಿ ಮದುವೆ ಪ್ರಸಂಗ ಉದಾಹರಿಸಿ, ಶೌಚಗೃಹವನ್ನು ಜನರು ಚೆನ್ನಾಗಿ ಬಳಸಿಕೊಳ್ಳದಿದ್ದರೆ ಸರ್ಕಾರ ಹೇಗೆ ಹೊಣೆಯಾಗುತ್ತದೆ? ಎಂದು ಈಶ್ವರಪ್ಪ ಮರು ಪ್ರಶ್ನಿಸಿದರು.
ನೀರಿನ ಕೊರತೆಯತ್ತ ಗಮನಸೆಳೆದಾಗ ತಂಬಿಗೆಯಲ್ಲಿ ತಗೊಂಡು ಹೋಗೋಕೆ‌ ನೀರು ಸಿಗುತ್ತದಲ್ಲ. ಆದರೂ ಕೆಲವು ಭಾಗಗಳಲ್ಲಿ ತಂಬಿಗೆ ತಗೊಂಡು‌ ಹೋಗಬೇಕು. ಪರಸ್ಪರ ಮಾತಾಡಬೇಕು, ಕಷ್ಟ-ಸುಖ ವಿಚಾರಿಸಿಕೊಳ್ಳಬೇಕು‌. ಅದರಲ್ಲೇ ಅವರಿಗೆ ಆನಂದವೆಂದು‌ ಲಘು ಧಾಟಿಯಲ್ಲಿ ಈಶ್ವರಪ್ಪ ಮಾತು ತೇಲಿಸಿದರು.
ಇಲಾಖೆಯಲ್ಲಿ ಸಾಧಿಸಿದ ಪ್ರಗತಿ ವರದಿಯನ್ನು ಜನರ ಮುಂದಿಡುತ್ತಿದ್ದೇವೆ. ವರಿಷ್ಠರ ಸೂಚನೆ ಪಾಲಿಸುತ್ತಿದ್ದೇವೆ. ಪ್ರತಿಪಕ್ಷಗಳು ಹಿಂದು, ಮುಸ್ಲಿಂ ವಿವಾದ ಎಬ್ಬಿಸಿ ಅಭಿವೃದ್ಧಿ ಕಾರ್ಯಗಳನ್ನು ಮರೆಮಾಚಲು‌ ಹವಣಿಸುತ್ತಿವೆ ಎಂದು ಈಶ್ವರಪ್ಪ ಟೀಕಿಸಿದರು.
ಸಚಿವ ಸಂಪುಟ ಪುನಾರಚನೆ, ರಾಜಕೀಯ ಪ್ರಶ್ನೆಗಳಿಗೆ ಈಗ ಉತ್ತರಿಸಲ್ಲ. ನಾಳೆ ನಾನು ದೆಹಲಿಗೆ ಹೋಗುತ್ತಿದ್ದೇನೆ. ಅಭಿವೃದ್ಧಿ ಯೋಜನೆಗಳ ಪ್ರಸ್ತಾವನೆಗಳನ್ನು ಕೊಂಡೊಯ್ಯುತ್ತಿರುವೆ. ಈ ಭೇಟಿಗೆ ಬೇರೆ ಅರ್ಥ‌ ಕಲ್ಪಿಸುವ ಸಾಧ್ಯತೆಗಳಿವೆ ಎಂದು ಈಶ್ವರಪ್ಪ ವ್ಯಾಖ್ಯಾನಿಸಿದರು.
ಖಾಸಗಿ ವಾಹನಕ್ಕೆ ಸರ್ಕಾರಿ ಲಾಂಛನ-ನಾಮಫಲಕ ಹಾಕಿಕೊಂಡು ಪ್ರವಾಸಕ್ಕೆ ಬಂದ ಗ್ರಾಪಂ ಅಧ್ಯಕ್ಷ!

ಬಿದನಗೆರೆಯಲ್ಲಿ ಮೊಳಗಿದೆ ಹನುಮ ನಾಮ ಸ್ಮರಣೆ: 161 ಅಡಿ ಎತ್ತರದ ಪಂಚಮುಖಿ ಆಂಜನೇಯ ವಿಗ್ರಹ ಲೋಕಾರ್ಪಣೆ ನಾಳೆ

BJP ಸರ್ಕಾರದಲ್ಲಿ HDK ಅವರೇ ಪ್ರಭಾವಿ? ತಹಸೀಲ್ದಾರ್​ ಎತ್ತಂಗಡಿಗೆ ಕೈ ಹಾಕಿದ CPYಗೆ ಕೆಲವೇ ಗಂಟೆಯಲ್ಲಿ ಶಾಕ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 5 =
Remember me
