ತುಮಕೂರು:ನಿಮ್ಮಿಂದ ನಮ್ಮ ಸರ್ಕಾರಕ್ಕೆ ಅಪಚಾರ ಆಗಿದೆ, ರಾಜೀನಾಮೆ ಕೊಡಿ ಎಂದು ಸಿಎಂ ನನಗೆ ಹೇಳಿದರೆ ಮರು ಮಾತನಾಡದೆ ಕೊಡಲು ಸಿದ್ಧನಿದ್ದೇನೆ ಎಂದು ಸಚಿವ ಮಾಧುಸ್ವಾಮಿ ಹೇಳಿದರು.
ರೈತರ ಸಮಸ್ಯೆ ಹೇಳಿಕೊಂಡು ಕರೆ ಮಾಡಿದ ವ್ಯಕ್ತಿಯೊಬ್ಬರಿಗೆ “ಸರ್ಕಾರ ನಡೀತಾ ಇಲ್ಲ, ಮ್ಯಾನೇಜ್​ ಮಾಡ್ತಾ ಇದ್ದೀವಷ್ಟೇ…’ ಎಂದು ಮಾಧುಸ್ವಾಮಿ ಹೇಳಿದ್ದಾರೆ ಎಂಬ ಆಡಿಯೋ ವೈರಲ್​ ಮೂರ್ನಾಲ್ಕು ದಿದನ ಹಿಂದೆ ವೈರಲ್​ ಆಗಿತ್ತು. ಇದು ರಾಜ್ಯ ಬಿಜೆಪಿಯಲ್ಲಿ ಬಿರುಗಾಳಿಯನ್ನೇ ಎಬ್ಬಿಸಿತ್ತು. ಸ್ವಪಕ್ಷದ ನಾಯಕರೇ ಮಾಧುಸ್ವಾಮಿ ವಿರುದ್ಧ ಕಿಡಿಕಾರಿದ್ದರು. ಅಷ್ಟೇ ಅಲ್ಲ ಅವರ ರಾಜೀನಾಮೆಗೂ ಆಗ್ರಹಿಸಿದ್ದರು. ಕೊನೆಗೂ ಈ ಸಂಬಂಧ ಮೌನ ಮುರಿದ ಮಾಧುಸ್ವಾಮಿ, ಮಂಗಳವಾರ ಚಿಕ್ಕನಾಯಕನಹಳ್ಳಿಯ ಜೆ.ಸಿ.ಪುರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಸ್ಪಷ್ಟನೆ ನೀಡಿದರು.
ನಾನು ನಮ್ಮ ಸಂಪುಟ ಸಹೋದ್ಯೋಗಿಗಳಿಗೆ ರಾಜೀನಾಮೆ ಕೊಡಬೇಕಾಗಿಲ್ಲ ಎಂದು ಹೇಳುವ ಮೂಲಕ ವಲಸಿಗ ಸಚಿವರಿಗೆ ಪರೋಕ್ಷವಾಗಿ ಟಾಂಗ್​ ಕೊಟ್ಟ ಮಾಧುಸ್ವಾಮಿ, ಸಿಎಂ ಹೇಳಿದರೆ ರಾಜೀನಾಮೆ ಕೊಡುವೆ ಎಂದರು. ಸರ್ಕಾರದಲ್ಲಿದ್ದುಕೊಂಡು ಸರ್ಕಾರ ನಡೀತಿಲ್ಲ ಅಂತ ಹೇಳಲಿಕ್ಕೆ ಆಗುತ್ತಾ? ಆಡಿಯೋ ವಿಚಾರದ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೀನಿ. ಅವರ ಬಳಿ ಯಾವುದನ್ನೂ ಮುಚ್ಚಿಟ್ಟಿಲ್ಲ. ಈ ಸಂಬಂಧ ಎಲ್ಲರಿಗೂ ಸ್ಪಷ್ಟನೆ ನೀಡಬೇಕಾದ ಅಗತ್ಯವಿಲ್ಲ. ಸಿಎಂ ಕೂಡ ನನ್ನ ಮಾತನ್ನು ಒಪ್ಪಿದ್ದು ಅಲ್ಲಿಗೆ ಈ ವಿವಾದ ಮುಗಿದಿದೆ ಅಂತ ಭಾವಿಸಿದ್ದೆ ಎಂದರು.
ತಿಳಿವಳಿಕೆ ಪಾಲಿಸುವೆ: ಆಡಿಯೋ ವೈರಲ್​ ವಿವಾದ ಸಂಬಂಧ ಸಹೋದ್ಯೋಗಿಗಳು ಈ ರೀತಿ ಏಕೆ ಪ್ರತಿಕ್ರಿಯೆ ನೀಡಿದ್ದಾರೋ ಗೊತ್ತಿಲ್ಲ. ಅವರೆಲ್ಲ ಪ್ರಬುದ್ಧರು, ಏನೇನು ತಿಳಿವಳಿಕೆ ಹೇಳಿದ್ದಾರೋ ಅದನ್ನು ಇನ್ಮುಂದೆ ಪಾಲಿಸುತ್ತೀನಿ ಎಂದು ಮಾಧುಸ್ವಾಮಿ ಹೇಳಿದ್ದಾರೆ. ಈ ವಿವಾದ ಎದ್ದ ಬಳಿಕ ಕನಿಷ್ಠ ನನಗೆ ಕರೆ ಮಾಡಿ ಮಾತನಾಡಿದ್ದರೆ ಸಹೋದ್ಯೋಗಿಗಳು ಅನ್ನುವ ಪದಕ್ಕೆ ಗೌರವ ಉಳಿಯುತ್ತಿತ್ತು. ಅವರು ಫೋನ್​ ಮಾಡಿ ಏಕೆ ಮಾಧುಸ್ವಾಮಿ ಈ ರೀತಿ ಮಾಡಿದ್ದೀರಾ ಅಂದಿದ್ದರೆ ನಾನು ಹೇಳಬಹುದಿತ್ತು. ನಾನು ಯಾರ ವಿಚಾರದಲ್ಲೂ ಏಕವಚನದಲ್ಲಿ ಮಾತನಾಡಲ್ಲ. ಆಡಿಯೋದಲ್ಲಿಯೂ ಸನ್ಮಾನ್ಯ ಸೋಮಶೇಖರ್​ ಅಂತ ಪದ ಬಳಸಿದೀನಿ. ಈ ಬೆಳವಣಿಗೆ ನನಗೆ ನೋವು ತಂದಿದೆ ಎಂದು ಬೇಸರ ಹೊರಹಾಕಿದ್ದಾರೆ.
ಈ ವಿಷಯದ ಬಗ್ಗೆ ಮಾತನಾಡಬಾರದೆಂದು ಸುಮ್ಮನಿದ್ದೆ. ಸಚಿವ ಎಸ್​.ಟಿ. ಸೋಮಶೇಖರ್​ ಕುರಿತು ನಾನು ಕೆಟ್ಟದಾಗಿ ಮಾತನಾಡಿಲ್ಲ. ಯಾರು ಅಶಕ್ತರು, ಯಾರು ಕೆಲಸ ಮಾಡಿಲ್ಲವೆಂದೂ ಹೇಳಿಲ್ಲ. ಡಿಸಿಸಿ ಬ್ಯಾಂಕ್​ನಲ್ಲಿ ಹೆಚ್ಚುವರಿ ಬಡ್ಡಿ ತೆಗೆದುಕೊಳ್ಳುತ್ತಾರೆ ಎಂದು ಹೇಳಿರುವುದು ನಿಜ. ಮುಂದುವರಿದು ಮಾತನಾಡುವಾಗ ಬೇರೆ ವಿಷಯ ಪ್ರಸ್ತಾಪವಾಗಿದೆ. ಮೂರನೇ ವ್ಯಕ್ತಿ ಜತೆ ಸರ್ಕಾರ ನಡೀತಿಲ್ಲವೆಂದು ಹೇಳೋ ಪರಿಸ್ಥಿತಿ ಇಲ್ಲ. ಅವನು ಎಲ್ಲರಿಗೂ ಗೊತ್ತಿರುವ ವ್ಯಕ್ತಿಯೇನೂ ಅಲ್ಲ. ಈ ಟನೆ ಎಷ್ಟು ದಿನದ ಕೆಳಗೆ ನಡೆದಿದೆ ಎನ್ನುವುದೂ ಗೊತ್ತಿಲ್ಲ. ಈ ಆಡಿಯೋ ಈಗ ಏಕೆ ವೈರಲ್​ ಆಗಿದೆ ಅಂತ ಅರ್ಥ ಆಗುತ್ತಿಲ್ಲ ಎಂದು ಮಾಧುಸ್ವಾಮಿ ಬೇಸರ ಹೊರಹಾಕಿದ್ದಾರೆ.
ಸಚಿವ ಮಾಧುಸ್ವಾಮಿಯವರು ಸರ್ಕಾರದ ಕುರಿತು ನೀಡಿರುವ ಹೇಳಿಕೆ ಬಗ್ಗೆ ಅಪಾರ್ಥ ಕಲ್ಪಿಸುವ ಅಗತ್ಯವಿಲ್ಲ. ಅವರ ಬಳಿ ನಾನು ಮಾತನಾಡಿದ್ದೇನೆ. ಮೂರು ತಿಂಗಳ ಹಿಂದೆ ಸಹಕಾರ ಇಲಾಖೆಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ್ದು, ಎಲ್ಲವೂ ಸರಿಯಿದೆ. ಏನೂ ತೊಂದರೆಯಿಲ್ಲ.| ಬಸವರಾಜ ಬೊಮ್ಮಾಯಿಮುಖ್ಯಮಂತ್ರಿ
ನನ್ನ ಸಹೋದ್ಯೋಗಿಗಳ ತಿಳಿವಳಿಕೆಯನ್ನ ಪಾಲಿಸ್ತೀನಿ… ಆಡಿಯೋ ವೈರಲ್ ​ಕುರಿತು ಮಾಧುಸ್ವಾಮಿ ಪ್ರತಿಕ್ರಿಯೆ

ಧರ್ಮಸ್ಥಳದಲ್ಲಿ ರೂಂ ಸಿಗಲಿಲ್ಲವೆಂದು ಸುಬ್ರಹ್ಮಣ್ಯಕ್ಕೆ ಹೊರಟಿದ್ದ ಭಿನ್ನಕೋಮಿನ ಜೋಡಿಗೆ ಮಾರ್ಗದಲ್ಲೇ ಕಾದಿತ್ತು ಶಾಕ್​

ನಾಗರಹಾವಿನ ಹೆಡೆಯಿಂದ ಕ್ಷಣಾರ್ಧದಲ್ಲಿ ಮಗನನ್ನು ರಕ್ಷಿಸಿದ ತಾಯಿ! ಮಂಡ್ಯದಲ್ಲಿ ಎದೆ ಝಲ್​ ಅನ್ನಿಸೋ ಘಟನೆ, ವಿಡಿಯೋ ವೈರಲ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + 11 =
Remember me
