ತುಮಕೂರು:ರಾಜ್ಯದಲ್ಲಿ ಸರ್ಕಾರ ನಡೀತಿಲ್ಲ, ಹೇಗೋ ಮ್ಯಾನೇಜ್​ ಮಾಡ್ತಿದ್ದೀವಿ… ಎಂಬ ಮಾತಿನ ಆಡಿಯೋ ವೈರಲ್​ ಕುರಿತು ಕೊನೆಗೂ ಸಚಿವ ಮಾಧುಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಸರ್ಕಾರದ ವಿರುದ್ಧ ಮಾಧುಸ್ವಾಮಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಇತ್ತೀಚಿಗೆ ವೈರಲ್​ ಆಗಿತ್ತು. ಈ ಕುರಿತು ಸಚಿವ ಮುನಿರತ್ನ ಸೇರಿದಂತೆ ಹಲವರು ಮಾಧುಸ್ವಾಮಿ ವಿರುದ್ಧ ಕಿಡಿಕಾರಿದ್ದರು. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆಯೂ ಆಗ್ರಹಿಸಿದ್ದರು. ಇದೀಗ ಈ ವಿವಾದ ಕುರಿತು ಸ್ವತಃ ಮಾಧುಸ್ವಾಮಿಯೇ ಪ್ರತಿಕ್ರಿಯಿಸಿದ್ದಾರೆ.
ಮಂಗಳವಾರ ತುಮಕೂರಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಮಾಧುಸ್ವಾಮಿ, ಈ ವಿಷಯದ ಬಗ್ಗೆ ಮಾತನಾಡಬಾರದು ಅಂತ ಅನ್ಕೊಂಡಿದ್ದೆ. ಇದರಲ್ಲಿ ಎರಡು ಪ್ರಮುಖ ಅಂಶ ಇದೆ. ಒಂದು ರೈಟ್ ಟು ಪ್ರೈವೇರ್ಸಿ, ಎರಡು ಟೈಮಿಂಗ್. ನಾನು ಯಾರಿಗೆ ಮಾತಾಡ್ದೆ, ಯಾವಾಗ ಮಾತಾಡ್ದೆ ಅಂತ ಗೊತ್ತಿಲ್ಲ. ಚನ್ನಪಟ್ಟಣದ ಭಾಸ್ಕರ್ ಎನ್ನುವರಿಗೆ ಈ ರೀತಿ ಮಾತನಾಡಿದ್ದಾರೆ ಅಂತ ಮಾಧ್ಯಮದಲ್ಲಿ ಸುದ್ದಿಯಾಯ್ತು. ವೈರಲ್ ಆಗಿರೋ ಆಡಿಯೋ ಬಗ್ಗೆ ಮಾತನಾಡಬಾರದು ಅಂತ‌ ಸುಮ್ನಿದ್ದೆ. ಸೋಮಶೇಖರ್ ಬಗ್ಗೆ ಕೂಡ ನಾನು ಕೆಟ್ಟದಾಗಿ ಮಾತನಾಡಿಲ್ಲ. ಯಾರು ಅಶಕ್ತರು, ಯಾರು ಕೆಲಸ ಮಾಡಿಲ್ಲ ಅಂತ ನಾನು ಹೇಳಿಲ್ಲ‌. ಡಿಸಿಸಿ ಬ್ಯಾಂಕ್​ನಲ್ಲಿ ಎಕ್ಸ್ಟ್ರಾ ಬಡ್ಡಿ ತತೋತಾರೆ ಅಂತ ಹೇಳಿದ್ದು ನಿಜ. ಮುಂದಕ್ಕೆ ಮಾತನಾಡೋ ಸಂದರ್ಭದಲ್ಲಿ ಏನಾದ್ರು ಇಂಟ್ರ್ಯಾಕ್ ಮಾಡಿರಬಹುದು ನಿಜ. ನೀವು ಸರ್ಕಾರ ನಡೆಸ್ತಿಲ್ಲ ಅಂತ ಅವನು ಕೇಳಿರಬಹುದು ನಿಜ. ಆಗ ಮಾತನಾಡಿರಬಹುದು. ಸರ್ಕಾರ‌ ನಡೀತಿಲ್ಲ ಅಂತ ಮೂರನೇ ವ್ಯಕ್ತಿ ಜತೆ ಹೇಳೋ ಪರಿಸ್ಥಿತಿ ಇಲ್ಲ. ಅವನು ಅನಾಮಿಕ ಎಂದರು.
ಎಷ್ಟು ದಿನದ ಕೆಳಗೆ ನಡೆದಿದೆ ಈ ಘಟನೆ ಅಂತ ಕೂಡ ನನಗೆ ಗೊತ್ತಿಲ್ಲ. ಈಗ ಯಾಕೆ ಆಡಿಯೋ ವೈರಲ್ ಆಗಿದೆ ಅಂತ ಅರ್ಥ ಆಗ್ತಿಲ್ಲ. ನಾನು ಸಿಎಂ ಜತೆ ಮಾತನಾಡಿದ್ದೀನಿ‌. ಸರ್ಕಾರದ ಬಗ್ಗೆ ಗೌರವ ಇಟ್ಕೊಂಡಿರೋ ಮನುಷ್ಯ ನಾನು. ನನ್ನ ಜತೆ ವಾದ ಮಾಡ್ಬೇಕಾದ ಸಂದರ್ಭದಲ್ಲಿ ಅವನಿಗೆ ಹೌದು ನಾವು ಮ್ಯಾನೇಜ್ ಮಾಡ್ತಿದ್ದೀವಿ ಕಣಯ್ಯ ಅಂತ ಹೇಳಿರಬಹುದು. ಸರ್ಕಾರದಲ್ಲಿ ಇದ್ದುಕೊಂಡು ಸರ್ಕಾರ ನಡೀತಿಲ್ಲ ಅಂತ ಹೇಳೋಕೆ ಆಗುತ್ತಾ? ಸಿಎಂ ನನ್ನ ಮಾತಿಗೆ ಕನ್ವೆನ್ಸ್ ಆದ್ರು. ಸಿಎಂಗೆ ಹೇಳಿದ ಬಳಿಕ ಅಲ್ಲಿಗೆ ಮುಗಿಯಿತು ಅಂತ ನಾನು ಭಾವಿಸಿದ್ದೆ. ಸಿಎಂ ನಮ್ಮ ನಾಯಕರು. ನಾನೇನಾದ್ರು ಸ್ಪಷ್ಟನೆ ಕೊಡೋದಾದ್ರೆ ಸಿಎಂಗೆ ಕೊಡ್ಬೇಕು. ಅವರಿಗೆ ಸ್ಪಷ್ಟನೆ ಕೊಟ್ಟಿದ್ದೀನಿ ಎಂದು ಸಹೋದ್ಯೋಗಿಗಳ ಬಗ್ಗೆ ಅಸಮಾಧಾನ ಹೊರಹಾಕಿದರು.
ನಮ್ಮ ಸಹೋದ್ಯೋಗಿಗಳು ಈ ರೀತಿ ಯಾಕೆ ರಿಯಾಕ್ಟ್​ ಮಾಡಿದ್ರೋ ನನಗೆ ಗೊತ್ತಿಲ್ಲ. ಅವರೆಲ್ಲ ಪ್ರಬುದ್ಧರು, ಅವರು ಏನೇನು ತಿಳಿವಳಿಕೆ ಹೇಳಿದ್ದಾರೋ ಅದನ್ನ ಇನ್ಮುಂದೆ ಪಾಲಿಸ್ತೀನಿ. ನಾನು ಹೇಗಿರಬೇಕು, ಏನ್ ಮಾಡ್ಬೇಕು ಅಂತ ಹೇಳಿದ್ದಾರೆ, ಅದನ್ನು ಮುಂದೆ ಪಾಲನೆ ಮಾಡ್ತೀನಿ. ಕನಿಷ್ಠ ನನಗೆ ಒಂದು ಫೋನ್ ಮಾಡಿ ಕೇಳಿ ಮಾತಾಡದಿದ್ರೆ ಸಹೋದ್ಯೋಗಿಗಳು ಅನ್ನೋ ಪದಕ್ಕೆ ಒಂದು ಗೌರವ ಉಳಿಯುತ್ತಿತ್ತು. ಇದು ನನಗೆ ನೋವು ತಂದಿದೆ. ಅವರು ಫೋನ್ ಮಾಡಿ, ‘ಯಾಕೆ ಮಾಧುಸ್ವಾಮಿ ಈ ರೀತಿ ಮಾಡಿದ್ದೀರಾ?’ ಅಂದಿದ್ರೆ ನಾನು ಹೇಳಬಹುದಿತ್ತು. ನಾನು ಯಾರ ವಿಚಾರದಲ್ಲೂ ಏಕವಚನದಲ್ಲಿ ಮಾತನಾಡಲ್ಲ. ಆಡಿಯೋದಲ್ಲೂ ಸನ್ಮಾನ್ಯ ಸೋಮಶೇಖರ್ ಅಂತ ಪದ ಬಳಸಿದ್ದೀನಿ ಎಂದರು.
ರಾಜ್ಯದಲ್ಲಿ ಸರ್ಕಾರ ನಡೀತಿಲ್ಲ, ಹೇಗೋ ಮ್ಯಾನೇಜ್​ ಮಾಡ್ತಿದ್ದೀವಿ… ಮಾಧುಸ್ವಾಮಿ ಸ್ಫೋಟಕ ಹೇಳಿಕೆ? ಆಡಿಯೋ ವೈರಲ್​

ನಾಗರಹಾವಿನ ಹೆಡೆಯಿಂದ ಕ್ಷಣಾರ್ಧದಲ್ಲಿ ಮಗನನ್ನು ರಕ್ಷಿಸಿದ ತಾಯಿ! ಮಂಡ್ಯದಲ್ಲಿ ಎದೆ ಝಲ್​ ಅನ್ನಿಸೋ ಘಟನೆ, ವಿಡಿಯೋ ವೈರಲ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + fifteen =
Remember me
