ಬೆಂಗಳೂರು:ವಿವಾದಿತ ಚಾಮರಾಜಪೇಟೆ ಆಟದ ಮೈದಾನದಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಲಾಗುತ್ತೆ. ತಿರಂಗ ಹಾರಾಟ ಹೊರತಾಗಿ ಯಾವುದೇ ಧಾರ್ಮಿಕ ಆಚರಣೆಗೆ ಅವಕಾಶವಿಲ್ಲ. ಈ ಸ್ವತ್ತು ಕಂದಾಯ ಇಲಾಖೆಯದ್ದು ಆಗಿರುವುದರಿಂದ ಕಂದಾಯ ಇಲಾಖೆ ವತಿಯಿಂದಲೇ ರಾಷ್ಟ್ರಧ್ವಜಾರೋಹಣ ಮಾಡಲಾಗುತ್ತೆ ಎಂದು ಸಚಿವ ಆರ್​.ಅಶೋಕ್​ ಹೇಳಿದರು.
ವಿಧಾನಸೌಧದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಆರ್​.ಅಶೋಕ್​, ಚಾಮರಾಜಪೇಟೆ ಮೈದಾನದಲ್ಲಿ ಭಾರತ ಮಾತಾಕೀ ಜೈ, ವಂದೇ ಮಾತರಂ, ಸ್ವಾತಂತ್ರ್ಯ ಯೋಧರ ಹೆಸರು ಘೋಷಣೆ ಮಾತ್ರ ಕೂಗಬೇಕು. ಇದರ ಹೊರತಾಗಿ ಬೇರೆ ಏನನ್ನೂ ಘೋಷಣೆ ಹಾಕುವಂತಿಲ್ಲ ಎಂದು ಸೂಚಿಸಿದರು.
ಬೆಂಗಳೂರು ಉತ್ತರ ಎಸಿ ಅವರು ಧ್ವಜಾರೋಹಣ ಮಾಡ್ತಾರೆ. ಇದರಲ್ಲಿ ಕ್ಷೇತ್ರದ ಶಾಸಕರು, ಸಂಸದರು ಸೇರಿದಂತೆ ಸಾರ್ವಜನಿಕರು ಪಾಲ್ಗೊಳ್ಳಬಹುದು. ರಾಷ್ಟ್ರಧ್ವಜಕ್ಕೆ ಗೌರವ, ರಾಷ್ಟ್ರಧ್ವಜಕ್ಕೆ ಜೈಕಾರ ಮಾಡಬೇಕು. ಯಾವುದೇ ಧಾರ್ಮಿಕ ಘೋಷಣೆ ಹಾಕುವಂತಿಲ್ಲ ಎಂದ ಅಶೋಕ್​, ವೇದಿಕೆ ಮೇಲೆ ಚುನಾಯಿತ ಪ್ರತಿನಿಧಗಳು ಇರುತ್ತಾರೆ. ಯಾವುದೇ ಸಂಘಟನೆಗಳಿಗೆ ವೇದಿಕೆಗೆ ಅವಕಾಶ ಇಲ್ಲ ಎಂದರು.
ಪ್ರವೀಣ್ ಹತ್ಯೆ: ಪ್ರಮುಖ ಮೂವರು ಆರೋಪಿಗಳ ಬಂಧನದ ರೋಚಕ ಮಾಹಿತಿ ಬಿಚ್ಚಿಟ್ಟ ಅಲೋಕ್​ ಕುಮಾರ್​

ಕುಂದಾಪುರದಲ್ಲಿ ದೇವಸ್ಥಾನಕ್ಕೆ ಕನ್ನ ಹಾಕಲು ಹಾಡಹಗಲೇ ಬಂದು ಸಿಕ್ಕಿಬಿದ್ದ ದಂಪತಿಯ ಮದ್ವೆ ರಹಸ್ಯ ಬಯಲು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + one =
Remember me
