ಶಿವಮೊಗ್ಗ:ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾದ ತೀರ್ಥಹಳ್ಳಿ ತಾಲೂಕಿನ ಹಳ್ಳಿಯೊಂದರ ಅಪ್ರಾಪ್ತೆಯನ್ನು ಪ್ರೀತಿಸಿ ಮದುವೆಯಾಗಲು ಕರೆದುಕೊಂಡು ಹೊರಟಿದ್ದ ಯುವಕನನ್ನು ಆಕೆಯ ಪಾಲಕರೇ ಸಾರ್ವಜನಿಕರ ನೆರವಿನಿಂದ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಮೊದಲ ಪ್ರಯತ್ನದಲ್ಲಿ ಆಟೋ ಚಾಲಕನ ಮೂಲಕ ಪೊಲೀಸರ ಕೈಗೆ ಆರೋಪಿ ಸಿಕ್ಕಿಬಿದ್ದಿದ್ದ. ಆಗ ತನ್ನ ಪ್ರೀತಿಯ ಕತೆ ಹೇಳಿಕೊಂಡು ಪಾರಾಗಿದ್ದ. ಪೊಲೀಸರು ಹುಡುಗಾಟದ ವಯಸ್ಸಲ್ಲಿ ಇದೆಲ್ಲಾ ಬೇಡ ಎಂದು ಬುದ್ಧಿಮಾತು ಹೇಳಿ ಕಳುಹಿಸಿದ್ದರು. ಆದರೆ ಮತ್ತೊಂದು ಬಾರಿ ಇಂಥದ್ದೇ ಸಾಹಸಕ್ಕೆ ಕೈ ಹಾಕಿ ಅಪ್ತಾಪ್ತೆಯ ಪಾಲಕರ ಮೂಲಕ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.
ಬಳ್ಳಾರಿಯ ಮನು(21) ಕೆಲ ತಿಂಗಳ ಹಿಂದೆ ಇನ್‌ಸ್ಟಾಗ್ರಾಂನಲ್ಲಿ ಅಪ್ರಾಪ್ತೆಯನ್ನು ಪರಿಚಯ ಮಾಡಿಕೊಂಡಿದ್ದ. ಬಳಿಕ ಬಳ್ಳಾರಿಯಿಂದ ಶಿವಮೊಗ್ಗಕ್ಕೆ ಬಂದು ಅಪ್ತಾಪ್ತೆಯನ್ನು ತೀರ್ಥಹಳ್ಳಿಯಿಂದ ಶಿವಮೊಗ್ಗಕ್ಕೆ ಕರೆಸಿಕೊಂಡಿದ್ದ. ಆಗ ಅಪ್ರಾಪ್ತೆ ನಾಪತ್ತೆ ಬಗ್ಗೆ ಮಾಳೂರು ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದೇ ಸಮಯದಲ್ಲಿ ಬಳ್ಳಾರಿಯ ಮನು ಶಿವಮೊಗ್ಗದಲ್ಲಿ ಆಟೋದಲ್ಲಿ ಸಂಚರಿಸುವಾಗ ಅವನ ನಡವಳಿಕೆ ಬಗ್ಗೆ ಸಂಶಯಗೊಂಡು ಚಾಲಕರು ಆತನನ್ನು ಪೊಲೀಸರಿಗೆ ಒಪ್ಪಿಸಿದ್ದರು. ಆಗ ಮನು, ಅಪ್ರಾಪ್ತೆಯನ್ನು ಪ್ರೀತಿಸುತ್ತಿರುವುದಾಗಿ ಹೇಳಿದ್ದ. ಪೊಲೀಸರು ಬುದ್ಧಿ ಹೇಳಿ ಬಿಟ್ಟು ಕಳುಹಿಸಿದ್ದರು.
ಆದರೆ ಮತ್ತೆ ಮಾಳೂರಿಗೆ ಬಂದ ಮನು, ಅಪ್ರಾಪ್ತೆಯನ್ನು ಭೇಟಿ ಮಾಡಿ ಬಳ್ಳಾರಿಗೆ ಕರೆದೊಯ್ಯಲು ಮುಂದಾಗಿದ್ದ. ಇದನ್ನು ಗಮನಿಸಿದ್ದ ಅಪ್ರಾಪ್ತೆಯ ತಂದೆ, ಸ್ಥಳೀಯರ ನೆರವಿನಿಂದ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಇದೀಗ ಮನು ಮಾಳೂರು ಪೊಲೀಸರ ವಶದಲ್ಲಿದ್ದು ವಿಚಾರಣೆ ಮುಂದುವರಿದಿದೆ. ಅಪ್ರಾಪ್ತೆಯ ತಂದೆ, ಮನು ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ಲೈನ್‌ಮನ್‌ಗಳಾಗಿದ್ದ ತಂದೆ- ಚಿಕ್ಕಪ್ಪನ ಬಳಿಕ ಮಗನೂ ವಿದ್ಯುತ್‌ಗೆ ಬಲಿ! ಒಂದೇ ಕುಟುಂಬದ ಮೂವರು ದುರಂತ ಅಂತ್ಯ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 3 =
Remember me
