ನೆಲಮಂಗಲ:ಬಾಲಕಿ ಬಳಿ ಅಸಭ್ಯವಾಗಿ ವರ್ತಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಕೋಪಗೊಂಡ ವ್ಯಕ್ತಿ ಬಾಲಕಿಯನ್ನು ಇರಿದು ಕೊಲೆ ಮಾಡಿ ತಾನೂ ಇರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರ ಸಮೀಪದ ಜಿಂದಾನ್​ ನಗರದಲ್ಲಿ ಭಾನುವಾರ ನಡೆದಿದೆ.
ಮೂಲತಃ ಉತ್ತರಾಖಂಡ ಮೂಲದ, ಬೆಂಗಳೂರು ಉತ್ತರ ತಾಲೂಕು ದಾಸನಪುರ ಹೋಬಳಿ ಜಿಂದಾನ್​ ನಗರದಲ್ಲಿದ್ದ ಲಕ್ಷ್ಮಣ್​​ಸಿಂಗ್​ ಪುತ್ರಿ ಖುಷಿಪರಗಾಯ(11) ಮೃತ ಬಾಲಕಿ. ಹರಿಯಾಣ ಮೂಲದ ನಂದಕಿಶೋರ್​(50) ಆತ್ಮಹತ್ಯೆ ಮಾಡಿಕೊಂಡವ.
20 ವರ್ಷದಿಂದ ಜಿಂದಾಲ್​ ನಗರದಲ್ಲಿ ವಾಸವಿದ್ದ ಲಕ್ಷ್ಮಣ್​ಸಿಂಗ್​, ದಾಬಸ್​ಪೇಟೆ ಬಳಿಯ ಜಿಂದಾಲ್​ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಸಹೋದ್ಯೋಗಿಯಾಗಿದ್ದ ನಂದಕಿಶೋರ್​ ತಿಂಗಳಿಂದ ಋಷಿಪರಗಾಯ ಜತೆ ಅಸಭ್ಯವಾಗಿ ವರ್ತಿಸುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಪಾಲಕರಿಗೆ ವಿಷಯ ತಿಳಿದು ಸ್ನೇಹಿತರ ನಡುವೆ ಜಗಳವಾಗಿತ್ತು. ಲಕ್ಷ್ಮಣ್​​ಸಿಂಗ್​, ಜಿಂದಾಲ್​ ನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಕ್ಕೆ ದೂರು ನೀಡಿದ್ದರಿಂದ ಸಂಘದ ಮುಖ್ಯಸ್ಥರು ನಂದಕಿಶೋರ್​ಗೆ ಮನೆ ಖಾಲಿ ಮಾಡುವಂತೆ 15 ದಿನಗಳ ಹಿಂದೆ ನೋಟಿಸ್​ ನೀಡಿದ್ದರು ಎನ್ನಲಾಗಿದೆ.
ಭಾನುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಆಟವಾಡಲು ತೆರಳುತ್ತಿದ್ದ ಬಾಲಕಿಯನ್ನು ಎದುರುಗೊಂಡ ನಂದಕಿಶೋರ್​ ಅಸಭ್ಯವಾಗಿ ವರ್ತಿಸಿ, ಚಾಕುವಿನಿಂದ ಬಾಲಕಿ ಹೊಟ್ಟೆ ಭಾಗಕ್ಕೆ ಹಿರಿದು ಕೊಲೆ ಮಾಡಿದ್ದಾನೆ. ಮಗಳ ಚೀರಾಟ ಕೇಳಿದ ತಂದೆ ಲಕ್ಷ್ಮಣ್​ಸಿಂಗ್​, ಪುತ್ರಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರೂ ಪ್ರಯೋಜನವಾಗಿಲ್ಲ. ನಂದಕಿಶೋರ್​ ಚಾಕು ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಆರೋಪಿ ಕುಟುಂಬಸ್ಥರು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗಿಲ್ಲ. ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಜ್ಜನಿಂದಲೇ ಮೊಮ್ಮಗನ ಕಿಡ್ನ್ಯಾಪ್! ಉತ್ತರ ಕನ್ನಡದಲ್ಲಿ ವಿಚಿತ್ರ ಪ್ರಕರಣ ಬೇಧಿಸಿದ ಪೊಲೀಸರು

ಬೆಳಗಾವಿಯಲ್ಲಿ ಆಪರೇಷನ್ ಚಿರತೆ ಮತ್ತೆ ವಿಫಲ: ಕಣ್ಣೆದುರೇ ಹೋದರೂ ಬಲೆಗೆ ಬೀಳದ ಚಿರತೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × five =
Remember me
