ಹೊಸಪೇಟೆ:ಕೃಷಿಯಲ್ಲಿ ಯಾರೂ ಉದ್ಧಾರವಾಗಲ್ಲ, ಹಾಕಿದ ಬಂಡವಾಳವೂ ಬರಲ್ಲ ಎನ್ನುವ ರೈತರಿಗೆ ತಾಲೂಕಿನ ಕಡ್ಡಿರಾಂಪುರ ಗ್ರಾಮದ ಎಸ್​. ಎಚ್. ಎಂ. ಬಸಯ್ಯಸ್ವಾಮಿ ಉತ್ತರವಾಗಿದ್ದಾರೆ. ಮೂರು ಎಕರೆ ಜಮೀನಿನಲ್ಲಿ 18 ವರ್ಷಗಳಿಂದ ವೈಜ್ಞಾನಿಕವಾಗಿ ಸಾವಯುವ ಕೃಷಿ ಮಾಡುತ್ತಿದ್ದಾರೆ. ಮಿಶ್ರಬೆಳೆ ಪದ್ಧತಿ ಆರ್ಥಿಕವಾಗಿ ಕೈಹಿಡಿದಿದ್ದು, ಇದರಿಂದಲೇ ತಮ್ಮಿಬ್ಬರು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿದ್ದಾರೆ. ಇವರ ಕೃಷಿ ಕೆಲಸಕ್ಕೆ ಪತ್ನಿ ಕೂಡ ಸಾಥ್ ನೀಡುತ್ತಿದ್ದಾರೆ.
ಇದನ್ನೂ ಓದಿ:ಏಕದಿನ ಸರಣಿಯಲ್ಲಿ ಗಾಯಗೊಂಡ ಋತುರಾಜ್​ ಗಾಯಕ್ವಾಡ್​ ಟೆಸ್ಟ್​ ಸರಣಿಯಿಂದ ಔಟ್​!
ಮುಕ್ಕಾಲು ಎಕರೆ ಜಮೀನಿನಲ್ಲಿ ರಾಮಫಲ, ಹನುಮಫಲ, ಲಕ್ಷ್ಮಣಫಲ, ಸೀತಾಫಲ, ಮೆಣಸು, ನುಗ್ಗೆ, ಎಲೆಬಳ್ಳಿ 15 ತಳಿಯ ಔಷಧ ಸಸ್ಯಗಳು, ತೇಗ, ಹುಣಸೆ, ಆಲೂಗಡ್ಡೆ ಬಳ್ಳಿ, ಗೋಲ್ಡನ್ ಬಂಬು, ಹೂವು ಮತ್ತು ಇತರ ತೋಟಗಾರಿಕೆ ಬೆಳೆ ಜತೆ ಅರಣ್ಯ ಕೃಷಿಯನ್ನೂ ಮಾಡಿದ್ದಾರೆ
ನರ್ಸರಿಯಲ್ಲೂ ಸಸಿಗಳನ್ನು ಮಾಡಿ, ಮಾರಾಟ ಮಾಡುತ್ತಾರೆ. ಉಳಿದ ಜಮೀನಿನಲ್ಲಿ 25ರಿಂದ 40 ಚೀಲ ಭತ್ತ ಬೆಳೆದು ಅಂದಾಜು 25-30 ಕ್ವಿಂಟಾಲ್ ಅಕ್ಕಿ ತೆಗೆಯುತ್ತಾರೆ. ಕ್ವಿಂಟಾಲ್​ಗೆ ಆರು ಸಾವಿರ ರೂ.ಗಳಂತೆ ಮಾರಾಟ ಮಾಡಿದರೆ 1.50 ಲಕ್ಷ ರೂ. ಆದಾಯ ಬರುತ್ತದೆ. 30 ಸಾವಿರ ರೂ. ಖರ್ಚು ಮಾಡಿ ಕಬ್ಬು ಬೆಳೆಯುವ ಇವರು, 20 ಕ್ವಿಂಟಾಲ್ ಸಾವಯುವ ಬೆಲ್ಲ ತಯಾರಿಸಿ 1.50 ಲಕ್ಷ ರೂ.ಗಿಂತ ಹೆಚ್ಚಿನ ಲಾಭ ಪಡೆಯುತ್ತಿದ್ದಾರೆ. ಉಳಿದ ಅರ್ಧ ಕಬ್ಬನ್ನು ಇತರ ಕೃಷಿಕರಿಗೆ ಮಾರಾಟ ಮಾಡಿ 70-80 ಸಾವಿರ ರೂ. ಆದಾಯ ಗಳಿಸುತ್ತಿದ್ದಾರೆ.
ಇದನ್ನೂ ಓದಿ:ದಕ್ಷಿಣ ಆಫ್ರಿಕಾದಲ್ಲಿ ಏಕದಿನ ಸರಣಿ ಗೆದ್ದ ಅನನುಭವಿಗಳ ಬಳಗವನ್ನು ಶ್ಲಾಘಿಸಿದ ಕೆಎಲ್​ ರಾಹುಲ್​
ಜೇನು ಸಾಕಾಣಿಕೆಯಲ್ಲೂ ಪರಿಣಿತಿ ಹೊಮದಿರುವ ಇವರು, ವರ್ಷಕ್ಕೆ ಎರಡು ಲಕ್ಷ ರೂ.ವರೆಗೆ ಜೇನು ಮಾರಾಟದಲ್ಲಿ ಲಾಭ ಕಾಣುತ್ತಿದ್ದಾರೆ. ಇದರ ನಡುವೆ ಗೋಬರ್‌ ಗ್ಯಾಸ್, ಎರೆಹುಳು ತೊಟ್ಟಿ ನಿರ್ಮಿಸಿದ್ದಾರೆ, ಹೈನುಗಾರಿಕೆ ಇವರ ಉಪಕಸುಬಾಗಿದೆ. ಬೆಳೆಗಳಿಗೆ ಕಾಡುವ ಕಾಡುಪ್ರಾಣಿಗಳನ್ನು ಓಡಿಸಲು ಸ್ವತಃ ದೇಸಿ ಬಂದೂಕು ತಯಾರಿಸುವ ಕಲೆಯಲ್ಲೂ ಖ್ಯಾತಿ ಪಡೆದಿದ್ದಾರೆ.
ಈವರೆಗೆ ಸಾವಿರಾರು ಬಂದೂಕುಗಳನ್ನು ಮಾರಾಟ ಮಾಡಿದ್ದಾರೆ. ಬಸಯ್ಯಸ್ವಾಮಿಗೆ ರಾಯಚೂರು ವಿವಿ ಸಾವಯುವ ಕೃಷಿ ಪ್ರಶಸ್ತಿ, ಬಾಗಲಕೋಟೆ ವಿವಿ ತೋಟಗಾರಿಕೆ ಪ್ರಶಸ್ತಿ, ಜಿಲ್ಲಾಡಳಿತದಿಂದ ಸಾವಯವ ಕೃಷಿ ಪ್ರಶಸ್ತಿಗಳು ಸೇರಿದಂತೆ ಸಂಘ ಸಂಸ್ಥೆಗಳಿಂದ ಗೌರವ, ಸನ್ಮಾನ ಸಂದಿವೆ.
ಇದನ್ನೂ ಓದಿ:ಆ ನಿರ್ದೇಶಕ, ನನ್ನ ಮಾತು ಕೇಳಿದರೆ ದೊಡ್ಡ ಸ್ಟಾರ್​ ಮಾಡುತ್ತೇನೆ ಎಂದಿದ್ದ – ನಟಿಯ ಶಾಕಿಂಗ್​ ಹೇಳಿಕೆ
ಪಾಠ ಮಾಡುವ ಶಿಕ್ಷಕ: ಎಸ್.ಎಚ್.ಎಂ. ಬಸಯ್ಯಸ್ವಾಮಿ ಓದಿದ್ದು ಒಂಬತ್ತನೇ ತರಗತಿ. ಆದರೂ, ಕೃಷಿ-ತೋಟಗಾರಿಕೆಯಲ್ಲಿನ ಅಪಾರ ಅನುಭವದಿಂದಾಗಿ ಕಾರ್ಯಕ್ರಮಗಳಲ್ಲಿ ಉಪನ್ಯಾಸ ನೀಡುತ್ತಾರೆ. ವಿಶ್ವವಿದ್ಯಾಲಯದ ಮಟ್ಟದಲ್ಲೂ ಪಾಠ ಮಾಡುತ್ತಾರೆ. ಇವರ ಮನೆ-ಜಮೀನಿಗೆ ಕೃಷಿ ವಿದ್ಯಾರ್ಥಿಗಳು, ಅಧಿಕಾರಿಗಳು ಭೇಟಿ ನೀಡಿ ಅಧ್ಯಯನ ಮಾಡುತ್ತಾರೆ.
ಮೈಚಾಂಗ್ ಚಂಡಮಾರುತ: ವಿಪತ್ತು ಪರಿಹಾರ ವಿಚಾರಕ್ಕೆ ವಿತ್ತ ಸಚಿವೆ ಮತ್ತು ಡಿಎಂಕೆ ಸರ್ಕಾರ ವಿರುದ್ಧ ಮಾತಿನ ಸಮರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 15 =
Remember me
