ವಿಜಯಪುರ: ‘ಸಾಹೇಬ್ರ ನನಗೆ ಎರಡೂ ಕಣ್ಣು ಕಾಣಲ್ಲರೀ, ವಯಸ್ಸಾಗೇದ, ನೋಡಿಕೊಳ್ಳೋರು ಯಾರೂ ಇಲ್ಲ, ಹೆಂಗಾರ ಮಾಡಿ ಪಿಂಚಣಿ ಕೊಡಿಸಿ ಪುಣ್ಯ ಕಟ್ಟಿಕೊಳ್ರೀ ಯಪ್ಪಾ…’ ಎಂದು ಅಂಗಲಾಚಿದ್ದ ವೃದ್ಧೆಗೆ ಎರಡೇ ದಿನದಲ್ಲಿ ಪಿಂಚಣಿ ಸೌಲಭ್ಯ ಕಲ್ಪಿಸಿ ಮಂಜೂರಾತಿ ಆದೇಶ ನೀಡುವ ಮೂಲಕ ಶಾಸಕ ಡಾ.ದೇವಾನಂದ ಚವಾಣ್ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಇಲ್ಲಿನ ಕೆಎಚ್‌ಬಿ ಕಾಲನಿಯಲ್ಲಿರುವ ತಮ್ಮ ಸ್ವಗೃಹದಲ್ಲಿ ಆ.23 ರಂದು ಶಾಸಕ ದೇವಾನಂದ ಚವಾಣ್ ಜನಸಂಪರ್ಕ ಸಭೆ ನಡೆಸಿದ್ದರು. ಈ ವೇಳೆ ಕೈಯಲ್ಲಿ ಕೋಲು ಹಿಡಿದು ಬಂದಿದ್ದ ವೃದ್ಧೆ ಉಮಾಬಾಯಿ ಈರಯ್ಯ ವಸ್ತ್ರದ, ತಮಗೆ ಹೇಗಾದರೂ ಮಾಡಿ ಪಿಂಚಣಿ ಕೊಡಿಸಿ ಎಂದು ಅಂಗಲಾಚಿದ್ದರು. ವೃದ್ಧೆಯ ಸ್ಥಿತಿಗೆ ಮರುಗಿದ್ದ ಶಾಸಕರು ಅಧಿಕಾರಿಗಳನ್ನು ಕರೆಯಿಸಿ ತರಾಟೆಗೆ ತೆಗೆದುಕೊಂಡಿದ್ದರು.
ಶುಕ್ರವಾರ ತಾವೇ ಖುದ್ದಾಗಿ ಅಜ್ಜಿಯ ಮನೆಗೆ ಹೋಗಿ ಸಂಧ್ಯಾ ಸುರಕ್ಷಾ ಯೋಜನೆಯಡಿ ಮಂಜೂರಿಸಿದ ಪಿಂಚಣಿಯ ಪ್ರತಿ ನೀಡಿದರು. ಮಾತ್ರವಲ್ಲ ಉಪಜೀವನಕ್ಕೆ ವೈಯಕ್ತಿಕ ಧನಸಹಾಯ ಮಾಡಿದರು. ಶಾಸಕರ ಕಾರ್ಯಕ್ಕೆ ವೃದ್ಧೆ ಉಮಾಬಾಯಿ ಕಂಬನಿಗರಿದರಲ್ಲದೇ ಶಾಸಕರಿಗೆ ಮನಃತುಂಬಿ ಹರಸಿದರು.
ತಂದೆ ಜತೆ ದೂರು ನೀಡಲು ಬಂದಿದ್ದ ಪತ್ನಿ, ಮೈಮೇಲೆ ಪೆಟ್ರೋಲ್​ ಸುರಿದುಕೊಂಡು ಬೆಂಕಿ ಹಚ್ಕೊಂಡು ಠಾಣೆಗೆ ನುಗ್ಗಿದ ಪತಿ!

ಅತ್ಯಾಚಾರ ಆರೋಪಿಯನ್ನೇ ಮದ್ವೆಯಾದ ಯುವತಿ! ಪೋಕ್ಸೋ ಪ್ರಕರಣ ರದ್ದುಪಡಿಸಿದ ಹೈಕೋರ್ಟ್​

ಪರಸ್ತ್ರೀಗಾಗಿ ಕೋಮುಗಲಭೆ ನಾಟಕ! ಶಿವಮೊಗ್ಗ ಪೊಲೀಸರನ್ನೇ ಬೆಚ್ಚಿಬೀಳಿಸಿದ್ದ ಪತ್ರ, ತನಿಖೆಯಲ್ಲಿ ಬಯಲಾಯ್ತು ಸ್ಫೋಟಕ ರಹಸ್ಯ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:6 + 6 =
Remember me
