ಕೊರಟಗೆರೆ:ನಾನು ರಾಜ್ಯದ ಉಪಮುಖ್ಯಮಂತ್ರಿಯಾಗಿದ್ದೆ, ಹಲವು ಬಾರಿ ಶಾಸಕನಾಗಿ ಮಂತ್ರಿಯಾಗಿ ಅತ್ಯುನ್ನತ ಡಾಕ್ಟರೇಟ್ ಪದವಿಯನ್ನೂ ಪಡೆದು ಹಲವು ದೇಶ ಸುತ್ತಿ ಬಂದಿರುವೆ. ಆದರೂ ಕೂಡ ನಾನು ದಲಿತ ಎಂಬ ಕಾರಣಕ್ಕೆ ದೇವಾಲಯಗಳಲ್ಲಿ ನನ್ನನ್ನು ಒಳಗೆ ಬಿಟ್ಟುಕೊಳ್ಳುವುದಿಲ್ಲ… ಎಂದು ಶಾಸಕ ಡಾ.ಜಿ.ಪರಮೇಶ್ವರ್ ಅವರು ಬಹಿರಂಗವಾಗಿಯೇ ಬೇಸರ ಹೊರಹಾಕಿದರು.
ಕೊರಟಗೆರೆ ಪಟ್ಟಣ ಪಂಚಾಯಿತಿ ಮುಂಭಾಗ ಗುರುವಾರ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಪರಮೇಶ್ವರ್​, ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ ಎಂಬುದನ್ನು ನೋವಿನಲ್ಲೇ ಬಿಚ್ಚಿಟ್ಟರು.
ನಾನು ಫಾರಿನ್​ಗೂ ಹೋಗಿ ಬಂದೆ. ನಾನು ಶಾಸಕನಾಗಿದ್ದೀನಿ, ಸಚಿವ ನಾಗಿದ್ದೀನಿ, ಕರ್ನಾಟಕದಲ್ಲಿ ನಂ 2 ಆಗಿದ್ದೀನಿ. ಆದರೆ ನನಗೇ ದೇವಸ್ಥಾನಕ್ಕೆ ಸೇರಿಸಲ್ಲ. ನಾನು ದೇವಸ್ಥಾನಕ್ಕೆ ಹೋದ್ರೆ ಸ್ವಲ್ಪ ಸ್ವಲ್ಪ ಅಲ್ಲೇ ನಿಂತುಕೊಳ್ಳಿ ಮಂಗಳಾರತಿ ತರ್ತೀನಿ ಅಂತಾರೆ. ನನ್ನ ನೋಡಿ ಅವರೇ ಮಂಗಳಾರತಿ ತಟ್ಟೆ ತಂದುಬಿಡ್ತಾರೆ. ಯಾಕಂದ್ರೆ ನಾನು ಎಲ್ಲಿ ಒಳಗೆ ಬಂದು ಬಿಡ್ತೀನೋ ಅಂತ… ಇಂತಹ ಪರಿಸ್ಥಿತಿ ಈಗಲೂ ಸಮಾಜದಲ್ಲಿ ಇದೆ ಅಂದ್ರೆ ನಾನು ಏನು ಹೇಳೋದು? ಎಂದು ಅಸಮಾಧಾನ ಹೊರಹಾಕಿದರು.
ಜ್ಯೋತಿಷಿ ಮಾತು ನಂಬಿ ಸಾವಿನ ಮನೆ ಬಿಟ್ಟು ಲಾಡ್ಜ್​ಗೆ ಹೋದ ಮಾಲೀಕನಿಗೂ-ಕುಟುಂಬಕ್ಕೂ ಕಾದಿತ್ತು ಭಾರಿ ಆಘಾತ!

ಗುತ್ತಿಗೆದಾರ ಸಂತೋಷ್ ಸಾವಿನ ಕಿಂಗ್​ಪಿನ್​ ಡಿಕೆಶಿ! ಶುದ್ಧ ತನಿಖೆ ನಡೆಸಿದ್ರೆ ಒಂದೇ ದಿನದಲ್ಲಿ ಬಯಲಾಗುತ್ತೆ: ಕಾಳಿ ಸ್ವಾಮಿ

ಸನ್ನಿ ಲಿಯೋನ್​ ಫ್ಯಾನ್ಸ್​ಗೆ ಬಂಪರ್​ ಆಫರ್​ ಕೊಟ್ಟ ಮಂಡ್ಯದ ಯುವಕ! ಆದ್ರೆ ಈ 3 ಷರತ್ತು ಪೂರೈಸಲೇಬೇಕು…

Sign in to your account
Please enter an answer in digits:eighteen − eighteen =
Remember me
