ಬೆಂಗಳೂರು:ಶಿವಮೊಗ್ಗದಲ್ಲಿ ಕೊಲೆಯಾದ ಭಜರಂಗದಳ ಕಾರ್ಯಕರ್ತ ಹರ್ಷನ ಮೇಲೆ ಕೊತ್ತಂಬರಿ ಸೊಪ್ಪು ತರಲು, ಹುಡುಗಿ ಜತೆ ಹೋದ ಕೇಸ್ ಇಲ್ಲ ಎಂದ ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ದೇಶದಲ್ಲಿ ಯಾರ ಹತ್ಯೆ ಆದ್ರೂ ಎಲ್ಲ ಪಕ್ಷ ಹೇಳೋದು ಒಂದೇ ಮಾತು. ಕಠಿಣ ಶಿಕ್ಷೆ ಆಗಬೇಕು ಅಂತ. ಶಿವಮೊಗ್ಗದಲ್ಲಿ ಕೊಲೆಯಾದ ಹರ್ಷನ ಸಾವಿನ ಬಳಿಕವೂ ಎಲ್ಲ ಪಕ್ಷ ಹೇಳಿದ್ದೂ ಅದೇ ಮಾತು. ಹರ್ಷನ ದೇಹದ ಮೇಲಿದ್ದ ‘ಓಂ’ ಅನ್ನೋ ಗುರುತಿನ ಮೇಲೆ ಚುಚ್ಚಿ ಚುಚ್ಚಿ ಕೊಂದಿದ್ದಾರೆ. ಹರ್ಷನ ಸಾವಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದ್ದಾರೆ.
ಹರ್ಷನ ಜೀವನವನ್ನು ನಾನು ಹತ್ತಿರದಿಂದ ನೋಡಿದ್ದೆ. ಅವನ ಮೇಲೆ ಅನೇಕ ಕೇಸ್ ಇತ್ತು. ಆದರೆ, ಅದ್ಯಾವುದೂ ವೈಯಕ್ತಿಕ ಕೇಸ್ ಅಲ್ಲ. ಹರ್ಷನ ವಿರುದ್ಧ ಕೊತ್ತಂಬರಿ ಸೊಪ್ಪು ತರಲು, ಹುಡುಗಿ ಜತೆ ಹೋದ ಕೇಸ್ ಇಲ್ಲ. ಗಣೇಶ ಮೂರ್ತಿ ಕೂರಿಸೋ ಬಗ್ಗೆ ಮಾತ್ರ ಕೇಸ್ ಇರೋದು. ಅವರ ತಾಯಿ ಆತನಿಗೆ ಮದುವೆ ಆಗು ಮಗನೇ ಅಂತಿದ್ರು. ಎಲ್ಲರೂ ಮದುವೆಯಾದ್ರೆ, ದೇಶಕ್ಕಾಗಿ ಕೆಲಸ ಮಾಡೋರು ಯಾರು ಅಂತಿದ್ದ ಹರ್ಷ. ಕೇಸರಿ ಶಾಲು ಅಲ್ಲಿಂದ, ಇಲ್ಲಿಂದ ತಂದ್ರು ಅನ್ನೋ ಮಾಹಿತಿ ಇರೋ ಕಾಂಗ್ರೆಸ್​ನವರಿಗೆ, ಹರ್ಷನ ಕೊಲೆ ಮಾಡೋ ಬಗ್ಗೆ ಮಾಹಿತಿ ಇರಲಿಲ್ವಾ? ಎಂದು ಭಾರತಿ ಶೆಟ್ಟಿ ಕಿಡಿಕಾರಿದ್ದಾರೆ. ಹರ್ಷನ ಸಾವಿಗೆ ನ್ಯಾಯ ಸಿಗಬೇಕು. ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಶಿವಮೊಗ್ಗದಲ್ಲಿ ಕೊಲೆಯಾದ ಹರ್ಷನ ಮೇಲೂ ದಾಖಲಾಗಿತ್ತು 4 ಪ್ರಕರಣ

ಹರ್ಷನ ಕುರಿತು ಮನದನೋವು ಬಿಚ್ಚಿಟ್ಟ ಅಕ್ಕ-ಅಪ್ಪ, 3ನೇ ದಿನದ ಕಾರ್ಯದಲ್ಲೂ ಮುಗಿಲುಮುಟ್ಟಿದೆ ಆಕ್ರಂದನ

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:5 × four =
Remember me
