|ಶಾಗ್ಯ ನಂದೀಶ್​ಹನೂರುಮಹಾಶಿವರಾತ್ರಿ ಪ್ರಯುಕ್ತ ಮಾ.3ರಂದು ಜರುಗಲಿರುವ ಮಲೆ ಮಾದಪ್ಪನ ಮಹಾರಥೋತ್ಸಕ್ಕೆ ಮಹದೇಶ್ವರಬೆಟ್ಟ ವ್ಯಾಪ್ತಿಯ ಸ್ಥಳೀಯರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಹೊರಗಿನ ಭಕ್ತರಿಗೆ ಜಿಲ್ಲಾಡಳಿತ ಹಾಗೂ ಶ್ರೀಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ನಿರ್ಬಂಧ ಹೇರಿದೆ.
ಕೋವಿಡ್​ ಹಿನ್ನೆಲೆಯಲ್ಲಿ ಮಹಾರಥೋತ್ಸವ ಸ್ಥಳೀಯರ ಸಮ್ಮುಖದಲ್ಲಿ ಸಾಂಪ್ರದಾಯಕವಾಗಿ ಜರುಗಲಿದೆ. ಮಾ.3 ರಂದು ಜರುಗಲಿರುವ ಮಹಾರಥೋತ್ಸವಕ್ಕೆ ರಾಜ್ಯ, ವಿವಿಧ ಜಿಲ್ಲೆಯ ಭಕ್ತರಿಗೆ ಅವಕಾಶವಿಲ್ಲ. ಶ್ರೀಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಿಂದ ನೀಡುವ ಪಾಸ್​ ಹೊಂದಿರುವವರು ತೇರು ಸಮೀಪದಲ್ಲಿ ಇರಲಿದ್ದಾರೆ. ಉಳಿದ ಮಹದೇಶ್ವರಬೆಟ್ಟ ವ್ಯಾಪ್ತಿಯ ಸ್ಥಳೀಯ ಜನರಿಗೆ ಬ್ಯಾರಿಕೇಡ್​ ಹೊರಗೆ ರಥೋತ್ಸವ ದರ್ಶನಕ್ಕೆ ಅವಕಾಶ ನೀಡಲಾಗಿದೆ.
ಮಹದೇಶ್ವರಬೆಟ್ಟದಲ್ಲಿ ಫೆ.27ರಿಂದ ಮಾ.2ರ ತನಕ ರಾತ್ರಿ ಭಕ್ತರು ತಂಗುವುದನ್ನು ನಿಷೇಧಿಸಲಾಗಿದ್ದು, ಸರ್ಕಾರಿ ಹಾಗೂ ಖಾಸಗಿ ವಸತಿ ಗೃಹಗಳನ್ನು ನೀಡದಂತೆ ಸೂಚನೆ ನೀಡಲಾಗಿದೆ. 2021ರ ಮಹಾಶಿವರಾತ್ರಿ ಹಬ್ಬದಲ್ಲಿಯೂ ಮಹದೇಶ್ವರಬೆಟ್ಟದ ಸ್ಥಳೀಯರ ಸಮ್ಮುಖದಲ್ಲಿ ರಥೋತ್ಸವ ಜರುಗಿತ್ತು.
ಮಹದೇಶ್ವರಬೆಟ್ಟದಲ್ಲಿ ಮಾ.3ರಂದು ಜರುಗಲಿರುವ ಮಹಾರಥೋತ್ಸವಕ್ಕೆ ಆಗಮಿಸದಂತೆ ಹೊರ ಭಕ್ತರನ್ನು ತಡೆಗಟ್ಟಲು ಪೊಲೀಸ್​ ಇಲಾಖೆಯಿಂದ ಅಲ್ಲಲ್ಲಿ ಚೆಕ್​ಪೋಸ್ಟ್​ ತೆರೆಯಲಾಗುತ್ತಿದೆ. ವಾಹನ ತಪಾಸಣೆ ಹಾಗೂ ಭಕ್ತರನ್ನು ತಡೆಗಟ್ಟಲು ಸುಮಾರು 900 ಪೊಲೀಸ್​ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಮಾ.2ರ ಮಧ್ಯಾಹ್ನದ ಬಳಿಕ ಹೊರಗಿನಿಂದ ಬರುವ ಭಕ್ತರು ಮಹದೇಶ್ವರಬೆಟ್ಟಕ್ಕೆ ಹೋಗಲು ಅವಕಾಶ ನೀಡುವುದಿಲ್ಲ. ತಮಿಳುನಾಡಿಗೆ ವಾಹನದಲ್ಲಿ ತೆರಳುವ ಪ್ರಯಾಣಿಕರಿಗೆ ಹಾಗೂ ಮಹದೇಶ್ವರಬೆಟ್ಟ ಸ್ಥಳೀಯ ಜನರಿಗೆ ಅವಕಾಶ ನೀಡಲಾಗುತ್ತದೆ. ಕೊಳ್ಳೇಗಾಲ, ಹನೂರು, ಕೌದಳ್ಳಿ, ರಾಮಾಪುರ, ತಾಳುಬೆಟ್ಟದ ಅಲ್ಲಲ್ಲಿ ಚೆಕ್​ಪೋಸ್ಟ್​ ಹಾಗೂ ವಾಹನ ದಟ್ಟಣೆಯಾಗದಂತೆ ಅನುವು ಮಾಡಲು ರಾಮಾಪುರ ಮಾರ್ಗದಲ್ಲಿ ಒನ್​ವೇ ವ್ಯವಸ್ಥೆ ಕಲ್ಪಿಸಲು ಸಿದ್ಧತೆ ಕೈಗೊಂಡಿದ್ದಾರೆ.
ಮಹಾಶಿವರಾತ್ರಿ ವಿಶೇಷ:ಮಹದೇಶ್ವರಬೆಟ್ಟದಲ್ಲಿ ಫೆ.28ರಿಂದ ಮಹಾಶಿವರಾತ್ರಿ ಪೂಜಾ ಕೈಂಕರ್ಯ ಪ್ರಾರಂಭವಾಗಲಿದೆ. ಮಾ.1ರಂದು ಮಹದೇಶ್ವರಸ್ವಾಮಿಗೆ ಎಣ್ಣೆ ಮಜ್ಜನ ವಿಶೇಷ ಸೇವೆ, ಉತ್ಸವಗಳು ಜರುಗಲಿವೆ. ಮಾ.2ರ ಅಮಾವಾಸ್ಯೆ ವಿಶೇಷ ಸೇವೆ, ಉತ್ಸವ, ಮಾ.3 ರಂದು ಬೆಳಗ್ಗೆ 8.10ರಿಂದ 8.45 ರತನಕ ಮಹಾರಥೋತ್ಸವ, ರಾತ್ರಿ ಮಹದೇಶ್ವರಸ್ವಾಮಿಗೆ ಅಭಿಷೇಕ ಪೂಜೆ ಸಲ್ಲಿಸಲಿದ್ದು ಬಳಿಕ ಕೊಂಡೋತ್ಸವ ನಡೆಯಲಿದೆ.
ಪ್ರಾಧಿಕಾರದಿಂದ ಕೌದಳ್ಳಿಯಿಂದ ಮಹದೇಶ್ವರಬೆಟ್ಟ ತನಕ 10 ಕಡೆ ಕುಡಿಯುವ ನೀರು, ಮಹದೇಶ್ವರಸ್ವಾಮಿಯ ದರ್ಶನಕ್ಕೆ ತೆರಳಲು ರಾಜಗೋಪುರದಿಂದ ಸರದಿ ಸಾಲು ನಿರ್ಮಾಣ, ನೆರಳಿನ ವ್ಯವಸ್ಥೆ, ಅನ್ನದಾಸೋಹ, ಲಾಡು ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ. ದೇವಾಲಯ ಸುತ್ತಮುತ್ತ ಹಾಗೂ ಆನೆತಲೆದಿಂಬದಿಂದ ದೇವಾಲಯತನಕ ವಿದ್ಯುತ್​ ದೀಪಾಲಂಕಾರ ಮಾಡಲಾಗಿದ್ದು, ಶೌಚಗೃಹ ವ್ಯವಸ್ಥೆ ಮಾಡಲಾಗಿದೆ. ಶ್ರೀೇತ್ರದಲ್ಲಿ ಭಕ್ತರು ಗುಂಪುಗೂಡಿ ಪರ ಮಾಡುವುದಕ್ಕೆ ಕಡಿವಾಣ ಹಾಕಲಾಗುತ್ತಿದೆ. ಮಹದೇಶ್ವರಬೆಟ್ಟ ಸುತ್ತಮುತ್ತಲಿನಲ್ಲಿರುವ ಮದ್ಯದಂಗಡಿ ಮುಚ್ಚಿಸಲು ಕ್ರಮವಹಿಸಿದ್ದು, ಮದ್ಯ ಮಾರಾಟ, ಮದ್ಯಪಾನ ತಡೆಗೆ ಅಧಿಕಾರಿಗಳು ಕ್ರಮಕೈಗೊಂಡಿದ್ದಾರೆ.
ಫೆ.27ರಿಂದ ಮಾ.2ರತನಕ ರಾತ್ರಿ ತಂಗುವುದನ್ನು ನಿಷೇಧಿಸಲಾಗಿದೆ. ಮಹಾರಥೋತ್ಸವಕ್ಕೆ ಮಹದೇಶ್ವರಬೆಟ್ಟ ವ್ಯಾಪ್ತಿಯ ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಹೊರಗಿನ ಭಕ್ತರಿಗೆ ಅವಕಾಶವಿಲ್ಲ. ಮಾ.2ರ ಮಧ್ಯಾಹ್ನದಿಂದಲೇ ಬೇರೆಡೆಯ ಭಕ್ತರನ್ನು ಸ್ವಗ್ರಾಮಕ್ಕೆ ತೆರಳುವಂತೆ ಮಾಡಲಾಗುವುದು. ಬೆಟ್ಟಕ್ಕೆ ವಿಶೇಷ ಜನಪ್ರತಿನಿಧಿಗಳು, ಆಹ್ವಾನಿತರಿಗೆ ಅವಕಾಶವಿದೆ. ಭಕ್ತರ ಅನುಕೂಲಕ್ಕಾಗಿ ಸಹಾಯವಾಣಿ&1860 4254350 ಆರಂಭಿಸಲಾಗಿದೆ.| ಜಯವಿಭವಸ್ವಾಮಿಕಾರ್ಯದರ್ಶಿ, ಶ್ರೀಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ, ಮಹದೇಶ್ವರಬೆಟ್ಟ
ಮಹದೇಶ್ವರಬೆಟ್ಟದಲ್ಲಿ ಮಾ.3ರಂದು ಜರುಗಲಿರುವ ಮಹಾರಥೋತ್ಸವಕ್ಕೆ ರಾಜ್ಯದ ವಿವಿಧ ಕಡೆಗಳಿಂದ ಆಗಮಿಸುವ ವಾಹನ ತಪಾಸಣೆಗೆ 900 ಪೊಲೀಸ್​ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪ್ರಮುಖ ಸ್ಥಳಗಳಲ್ಲಿ ಚೆಕ್​ಪೋಸ್ಟ್​ ತೆರೆಯಲಿದ್ದೇವೆ. ವಾಹನ ಸಂಚಾರಕ್ಕೆ ಅಡಚಣೆ ಆಗದಂತೆ ಅಗತ್ಯ ಕ್ರಮವಹಿಸಲಾಗುವುದು.| ಟಿ.ಪಿ.ಶಿವಕುಮಾರಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ, ಚಾಮರಾಜನಗರ
ಯೂಕ್ರೇನ್​ನಿಂದ ಸುರಕ್ಷಿತವಾಗಿ ಬೆಂಗ್ಳೂರಿಗೆ ಬಂದ 12 ವಿದ್ಯಾರ್ಥಿಗಳು! ಕುಟುಂಬಸ್ಥರ ಮೊಗದಲ್ಲಿ ಸಂತೋಷ

2 ಗಂಟೆ ಮೊದಲು ಹೊರಟಿದ್ದಕ್ಕೆ ಬಚಾವ್! ಕಜಖಸ್ತಾನ್ ಮಾರ್ಗವಾಗಿ ಭಾರತಕ್ಕೆ ಮರಳಿದ ಶಿವಮೊಗ್ಗದ ಜಯಶೀಲಾ

ಪೊಲೀಸರನ್ನೇ ಡ್ರಾಪ್ ಕೇಳಿ ಸಿಕ್ಕಿಬಿದ್ದ ಕಳ್ಳರು! ಇದು ಸಿನಿಮಾ ಕಥೆಯಲ್ಲ, ದೊಡ್ಡಬಳ್ಳಾಪುರದಲ್ಲಿ ಹಾಡಹಗಲೇ ನಡೆದ ಘಟನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 15 =
Remember me
