ಬೆಂಗಳೂರು:ರೂಪದರ್ಶಿ ಮೇಲೆ ಪ್ರಿಯಕರನಿಂದಲೇ ಅತ್ಯಾಚಾರ ನಡೆದಿದ್ದು, ಖಾಸಗಿ ವಿಡಿಯೋ ಇಟ್ಟುಕೊಂಡ ಪ್ರಿಯಕರ ಬ್ಲ್ಯಾಕ್​ಮೇಲ್​ ಮಾಡುತ್ತಾ ಹಲವು ಬಾರಿ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂದು ಯಶವಂತಪುರ ಪೊಲೀಸ್ ಠಾಣೆಯಲ್ಲಿ ಕೇಸ್​ ದಾಖಲಾಗಿದೆ.
ನಗರದಲ್ಲಿ ವಾಸವಿರುವ ಯುವತಿಯೊಬ್ಬಳು ಮಾಡೆಲ್​ನಲ್ಲಿ ಗುರುತಿಸಿಕೊಂಡಿದ್ದಾಳೆ. ಈಕೆಗೆ ಕಳೆದ ವರ್ಷ ಫೇಸ್​ಬುಕ್​ನಲ್ಲಿ ಪ್ರಮೋದ್​ ಎಂಬ ಯುವಕನ ಪರಿಚಯವಾಗಿದ್ದು, ಸ್ನೇಹ ಬೆಳೆದಿದೆ. ಕೊನೆಗೆ ಪ್ರೀತಿಯ ಬಲೆಗೆ ಬೀಳಿಸಿಕೊಂಡು ಮದುವೆ ಆಗುವುದಾಗಿ ಹೇಳಿದ್ದ. ಆಕೆಯೂ ಆತನನ್ನ ನಂಬಿದ್ದಳು. ಮದುವೆ ಆಗಲು ನಿರ್ಧರಿಸಿದ್ದಳು. ಈ ನಡುವೆ ಜ್ಯೂಸ್​ನಲ್ಲಿ ಮತ್ತು ಬರುವ ಮಾತ್ರೆ ಬೆರೆಸಿ ತನ್ನ ಪ್ರೇಯಸಿಗೆ ಕುಸಿಡಿದ ಪ್ರಮೋದ್​, ಆಕೆ ಮೇಲೆ ಅತ್ಯಾಚಾರವೆಸಗಿದ್ದಾನೆ. ಖಾಸಗಿ ವಿಡಿಯೋ ಸೆರೆ ಹಿಡಿದು ಆಕೆಯನ್ನ ಬೆದರಿಸಿದ್ದಲ್ಲದೆ, ಆತನ ಗೆಳೆಯ ಧನಂಜಯನನ್ನೂ ಕರೆತಂದು ಪ್ರಿಯತಮೆ ಮೇಲೆ ಅತ್ಯಾಚಾರವೆಸಗಿದ್ದಾನೆ.
ಪ್ರಿಯತಮೆಯ ಖಾಸಗಿ ವಿಡಿಯೋ ಮತ್ತು ಫೋಟೋ ಇಟ್ಟುಕೊಂಡ ಪ್ರಮೋದ್​, ನಾನು ಕರೆದಾಗಲೆಲ್ಲ ನೀನು ಬರಬೇಕು. ಇಲ್ಲವಾದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ನಿನ್ನ ಖಾಸಗಿ ವಿಡಿಯೋ ವೈರಲ್ ಮಾಡ್ತೀನಿ. ನಿನ್ನ ತಂದೆ-ತಾಯಿಗೆ ತೋರಿಸ್ತೀನಿ ಎಂದು ಬೆದರಿಕೆ ಹಾಕಿ 16 ಬಾರಿ ಲೈಂಗಿಕ ಕಿರುಕುಳ ಕೊಟ್ಟಿದ್ದಾನೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.
ರೌಡಿಶೀಟರ್ ಪತ್ನಿ ಜತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪ್ರಿಯಕರ! ಮುಂದೆ ಆಗಿದ್ದೆಲ್ಲವೂ ಅವಾಂತರ

ಪ್ರೇಮಿಗಳ ಮಧ್ಯೆ ಹುಳಿ ಹಿಂಡಿದ್ಲಾ ಆಕೆ? ಆತ್ಮಹತ್ಯೆ ಯತ್ನಕ್ಕೂ ಮುನ್ನ ಮನದ ನೋವನ್ನು ಅಕ್ಷರಕ್ಕಿಳಿಸಿದ ಚೈತ್ರಾ ಕೋಟೂರ್​

ರಮೇಶ್ ಜಾರಕಿಹೊಳಿ ಅಪಾರ್ಟ್​ಮೆಂಟ್​ನಲ್ಲಿದೆ ಸೀಕ್ರೆಟ್​ ಡೋರ್​! ಸ್ಫೋಟಕ ರಹಸ್ಯ ಬಯಲು

ಕೋಡಿಹಳ್ಳಿ ಚಂದ್ರಶೇಖರ್​ಗೆ ಗಡಿಪಾರು!

ಪಾರ್ಟಿಗೆ ಹೋಗ್ಬೇಕು ಚಪಾತಿ ಮಾಡಮ್ಮ ಎಂದ ಮಗ ಶವವಾಗಿ ಪತ್ತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + three =
Remember me
