ಪರಶುರಾಮ ಭಾಸಗಿ, ವಿಜಯಪುರ
ವಿಶ್ವದ ಎರಡನೇ ಅತಿ ದೊಡ್ಡ ಮಾನವ ನಿರ್ಮಿತ ಗುಮ್ಮಟ ಖ್ಯಾತಿಯ ಐತಿಹಾಸಿಕ ಗೋಳಗುಮ್ಮಟ ಸೇರಿದಂತೆ ಒಟ್ಟು 93 ಪುರಾತನ ಸ್ಮಾರಕಗಳು, 24 ಪ್ರಸಿದ್ಧ ಪ್ರವಾಸಿ ತಾಣಗಳು, ಹಿಂದು, ಮುಸ್ಲಿಂ, ಜೈನ್ ಮತ್ತಿತರ ಧಾರ್ಮಿಕ, ಸಾಂಸ್ಕೃತಿಕ, ಸಾಹಿತ್ಯಿಕ ಐತಿಹ್ಯಗಳನ್ನು ಹೊಂದಿದ ಐತಿಹಾಸಿಕ ವಿಜಯಪುರ ಜಿಲ್ಲೆಯ ಪ್ರವಾಸೋದ್ಯಮದ ಅಭಿವೃದ್ಧಿ ದೃಷ್ಠಿಯಿಂದ ಜಾರಿಗೊಂಡ ‘ಪ್ರವಾಸಿ ವ್ಯಾಖ್ಯಾನ’ ಕೇಂದ್ರಕ್ಕೆ ಅಂತಿಮ ಸ್ಪರ್ಶ ನೀಡಲಾಗುತ್ತಿದೆ. ಪಾಳುಬಿದ್ದ ಸ್ಮಾರಕವೊಂದು ಆಧುನಿಕ ಸ್ಪರ್ಶದೊಂದಿಗೆ ಝಗಮಗಿಸುತ್ತಿದ್ದು, ಕಾರ್ಯಾರಂಭಕ್ಕೆ ಕಾತರಿಸುತ್ತಿದೆ. ಆ ಕುರಿತ ಸಮಗ್ರ ಮಾಹಿತಿ ಇಲ್ಲಿದೆ.

ಪ್ರವಾಸಿ ವ್ಯಾಖ್ಯಾನ ಕೇಂದ್ರ ಸ್ಥಾಪನೆಗೆ ಸಿದ್ಧತೆಒಂದೇ ಸೂರಿನಡಿ ಸಕಲ ಮಾಹಿತಿ ಸೌಲಭ್ಯಪ್ರವಾಸಿಗರ ಅನುಕೂಲಕ್ಕಾಗಿ ವಿನೂತನ ಯೋಜನೆಐದು ಕೋಟಿ ವೆಚ್ಚದಲ್ಲಿ ಕಾಮಗಾರಿ ಪೂರ್ಣನೂತನ ಮ್ಯೂಸಿಯಂ-ಗ್ಯಾಲರಿ ಸಹ ನಿರ್ಮಾಣ
ಪ್ಯಾಲೇಸ್ ಆಫ್ ಡಿಲೈಟ್ಸ್‌ಗೆ ಆಧುನಿಕ ಸ್ಪರ್ಶ, ಝಗಮಗಿಸುತ್ತಿದೆ ಐತಿಹಾಸಿಕ ‘ಆನಂದ ಮಹಲ್’ :‘ಪ್ಯಾಲೇಸ್ ಆಫ್ ಡಿಲೈಟ್ಸ್’ ಎಂದೇ ಖ್ಯಾತಿ ಪಡೆದ ಐತಿಹಾಸಿಕ ಆನಂದ ಮಹಲ್ ಕಟ್ಟಡಕ್ಕೆ ಆಧುನಿಕ ಸ್ಪರ್ಶ ನೀಡಲಾಗಿದ್ದು, ನಿಗದಿತ ಪ್ರವಾಸೋದ್ಯಮ ವ್ಯಾಖ್ಯಾನ ಕೇಂದ್ರದ ಕನಸ ಸಾಕಾರಗೊಳ್ಳುತ್ತಿದೆ. ನಗರದ ಹೃದಯ ಭಾಗದಲ್ಲಿರುವ ಅರೆಕಿಲ್ಲಾದ ಒಳಗಿನ ಗಗನ ಮಹಲ್ ಪಕ್ಕದ ಐತಿಹಾಸಿಕ ಕಟ್ಟದ ಇದೀಗ ಪ್ರವಾಸಿಗರ ಗಮನ ಸೆಳೆಯುತ್ತಿದೆ. ಜಿಲ್ಲಾ ಪಂಚಾಯಿತಿ, ರೇಷ್ಮೆ ಇಲಾಖೆ, ಸಂಸದರ ಕಚೇರಿ ಹೀಗೆ ಹತ್ತು ಹಲವು ಕಚೇರಿಗಳಿಗೆ ಆಶ್ರಯ ತಾಣವಾಗಿದ್ದಲ್ಲದೇ ಪಾಳು ಬಿದ್ದಿದ್ದ ಸುಂದರ ಸ್ಮಾರಕ ಹೊಸ ರೂಪ ಪಡೆದಿದೆ. ಮೂಲ ಸ್ಮಾರಕಕ್ಕೆ ಧಕ್ಕೆಯಾಗದ ರೀತಿಯಲ್ಲಿಯೇ ಕಟ್ಟಡವನ್ನು ಮರು ವಿನ್ಯಾಸಗೊಳಿಸಿದ್ದು ಇದೀಗ ಝಗಮಗಿಸುತ್ತಿದೆ.

ಸ್ಮಾರಕದ ವಿಶೇಷ:ಆದಿಲ್ ಶಾಹಿ ಸುಲ್ತಾನರ ಕಾಲದ ಅತ್ಯಂತ ಸುಂದರ ಸ್ಮಾರಕಗಳಲ್ಲಿ ಆನಂದ ಮಹಲ್ ಕಟ್ಟಡ ಕೂಡ ಒಂದು. ಡೆಕ್ಕನ್ ಟ್ರಾೃಪ್ ಕಲ್ಲಿನಲ್ಲಿ ಕಟ್ಟಲಾದ ನಾಲ್ಕು ಅತಂಸ್ತಿನ ಈ ಮಹಲ್ ಸುಂದರ, ಅಲಂಕಾರಿಕ ಹಾಗೂ ಕಣ್ಣಿಗೆ ಆಹ್ಲಾದಕರವಾದ ವಾಸ್ತು ಶಿಲ್ಪದಿಂದ ಕೂಡಿದೆ. ಅಂತೆಯೇ ಇದನ್ನು ‘ಪ್ಯಾಲೇಸ್ ಆಫ್ ಡಿಲೈಟ್ಸ್’ ಎಂದು ಕರೆಯಲಾಗುತ್ತದೆ. ಕ್ರಿಶ 1589ರಲ್ಲಿ ಎರಡನೇ ಇಬ್ರಾಹಿಂ ಕಟ್ಟಿಸಿದ ಈ ಅರಮನೆಯಲ್ಲಿ ಸಾಂಪ್ರದಾಯಿಕ ಹೆಣ್ಣು ಮಕ್ಕಳು ವಾಸವಾಗುತ್ತಿದ್ದರು. ಅಲಂಕೃತ ಗೋಡೆಗಳು, ಸುಂದರ ಕೋಣೆಗಳು, ವೈಭವದ ಸಭಾಂಗಣ ಅಷ್ಟೇ ಅಲ್ಲದೇ ಸುಂದರ ಅಂಗಳ, ಮೇಲ್ಛಾವಣಿಯಿಂದ ಕೂಡಿದ ಈ ಅರಮನೆಯ ಕುಸುರಿ ಕೆಲಸ ಎಂಥವರನ್ನೂ ನಿಬ್ಬೆರಗಾಗಿಸುತ್ತದೆ.
ಇಂಥ ಅಪರೂಪದ ಕಟ್ಟಡದಲ್ಲಿ ಸರ್ಕಾರಿ-ಅರೆ ಸರ್ಕಾರಿ ಕಚೇರಿಗಳನ್ನು ನಡೆಸುತ್ತಿದ್ದ ಕಾರಣ ಮೂಲ ಸ್ವರೂಪ ಕಳೆದುಕೊಂಡಿತ್ತು. ಹೀಗಾಗಿ ಪುರಾತತ್ವ ಇಲಾಖೆ ಈ ಸ್ಮಾರಕದ ಪುನರುಜ್ಜೀವನ ಕಾರ್ಯ ಕೈಗೊಳ್ಳುವ ವಿಶೇಷ ಯೋಜನೆ ರೂಪಿಸಿತು. ಪರಿಣಾಮ ಇಂದು ಆನಂದ ಮಹಲ್‌ದ ಗತವೈಭವ ಮರಳಿದಂತಾಗಿದೆ.

ಆಧುನಿಕ ಸ್ಪರ್ಶ:ಐದು ಕೋಟಿ ರೂ. ವೆಚ್ಚದಲ್ಲಿ ಅರಮನೆಯನ್ನು ಪುನರುಜ್ಜೀವನಗೊಳಿಸುವ ಕಾಮಗಾರಿ ಕೈಗೊಳ್ಳಲಾಗಿದೆ. ಕಲುಷಿತಗೊಂಡಿದ್ದ ವಾತಾವರಣ, ಬಿರುಕು ಬಿಟ್ಟ ಗೋಡೆಗಳು, ಕಿತ್ತು ಹೋಗಿದ್ದ ಕಿಟಕಿಗಳು, ಮಸುಕಾಗಿದ್ದ ಬಣ್ಣ, ಅಂದ ಕಳೆದುಕೊಂಡಿದ್ದ ಕುಸುರಿ ಕಲೆಗಳು, ಹಾಳಾಗಿದ್ದ ಕಮಾನು-ಮೆಟ್ಟಿಲುಗಳನ್ನು ಸರಿಪಡಿಸಿ ಸುಂದರ ಹಾಗೂ ಸುಸಜ್ಜಿತವಾಗಿ ಮರುವಿನ್ಯಾಸಗೊಳಿಸಲಾಗಿದೆ.
ಪ್ರವಾಸೋದ್ಯಮ ಇಲಾಖೆ ಅನುದಾನದಡಿ ಬೆಳಗಾವಿ ವೃತ್ತದ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲ ಸಾರಿಗೆಯಿಂದ 2018-19ನೇ ಸಾಲಿನ ದರ ಆಧರಿಸಿ ಭಾರತೀಯ ಪುರಾತತ್ವ ಇಲಾಖೆ ಹಾಗೂ ರಾಜ್ಯ ಪುರಾತತ್ವ ಇಲಾಖೆಯ ಪ್ರಥಮ ದರ್ಜೆ ಗುತ್ತಿಗೆದಾರ ಡಿ.ಪಿ. ಜಾಧವ ಕಾಮಗಾರಿ ಕೈಗೊಂಡಿದ್ದಾರೆ. ಸ್ಮಾರಕದ ಒಳಭಾಗದಲ್ಲಿ ಸಂಪೂರ್ಣ ಪೇಂಟಿಂಗ್ ಮಾಡಲಾಗಿದ್ದು, ಕಿಟಕಿಗಳಿಗೆ ಹೊಸದಾಗಿ ಮಾಸ್ಕಿಟೋ ಮೆಶ್ ಅಳವಡಿಸಲಾಗಿದೆ. ಸ್ಮಾರಕದ ಮೇಲ್ಭಾಗದಲ್ಲಿ ನೀರು ಪ್ರವೇಶವಾಗದಂತೆ ಹೆಡ್ ರೂಂ ಕಟ್ಟಲಾಗಿದೆ. ಈ ಹಿಂದಿನ ಆನಂದ ಮಹಲ್‌ಗೂ ಈಗಿನ ಆನಂದ ಮಹಲ್‌ಗೂ ಅಜಗಜಾಂತರ ವ್ಯತ್ಯಾಸ ಎನ್ನುವಂತೆ ಆಕರ್ಷಣೀಯಗೊಳಿಸಲಾಗಿದ್ದು, ಪ್ರವಾಸಿಗರನ್ನು ಹುಬ್ಬೇರಿಸುವಂತೆ ಮಾಡಿದೆ. ಇದೇ ಕಟ್ಟಡದಲ್ಲಿ ಮ್ಯೂಸಿಯಂ ಮತ್ತು ಗ್ಯಾಲರಿ ನಿರ್ಮಾಣಕ್ಕೂ ಬಜೆಟ್‌ನಲ್ಲಿ ಅನುಮೋದನೆ ನೀಡಲಾಗಿದೆ.

ರಾಜ್ಯ ಪುರಾತತ್ವ ಇಲಾಖೆಯಿಂದ ಆನಂದ ಮಹಲ್ ಕಾಮಗಾರಿ ಕೈಗೊಳ್ಳಲಾಗಿದೆ. ಕಟ್ಟಡ ಹಸ್ತಾಂತರ ಪ್ರಕ್ರಿಯೆ ಬಳಿಕ ಪ್ರವಾಸಿ ವ್ಯಾಖ್ಯಾನ ಕೇಂದ್ರ ಆರಂಭಿಲಾಗುವುದು. ಈ ಮಧ್ಯೆ ಮ್ಯೂಸಿಯಂ ಮತ್ತು ಗ್ಯಾಲರಿ ನಿರ್ಮಾಣಕ್ಕೂ ಬಜೆಟ್‌ನಲ್ಲಿ ಘೋಷಣೆಯಾಗಿದ್ದು, ಆ ಬಗ್ಗೆ ಇನ್ನೂ ಸ್ಪಷ್ಟ ಮಾರ್ಗಸೂಚಿ ಬರಬೇಕಿದೆ.


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 15 =
Remember me
