ಬೆಂಗಳೂರು:ಹಲವು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ರಾಜ್ಯ ಪೊಲೀಸ್ ಇಲಾಖೆ ಮತ್ತಷ್ಟು ಸ್ಮಾರ್ಟ್ ಆಗಿದೆ. ಗಣಕೀಕರಣಗೊಳಿಸುವಲ್ಲಿ ದೇಶದಲ್ಲೇ ರಾಜ್ಯ ಪೊಲೀಸ್ ಇಲಾಖೆ ಮುಂಚೂಣಿಯಲ್ಲಿದ್ದು, ಕೃತಕ ಬುದ್ದಿಮತ್ತೆ (ಎಐ) ಮತ್ತು ಮೆಷಿನ್ ಲರ್ನಿಂಗ್(ಎಂಎಲ್) ಬಳಸಿಕೊಂಡು ನೂತನವಾಗಿ ಅಳವಡಿಸಿಕೊಂಡಿರುವ ಕೆಎಸ್​ಪಿ ಎ.ಐ, ಪೊಲೀಸ್ ಐ.ಟಿ.ವಿ2 ತಂತ್ರಾಂಶ, ಐಟಿಪಿಎ ಸರಳ ಮೊಬೈಲ್ ಆಪ್, ಪೊಲೀಸ್ ಮಿತ್ರ ಚಾಟ್​ಬಾಟ್, ಅನುಕಂಪ ಆಧಾರದ ನೇಮಕಾತಿ ಪೋರ್ಟಲ್, ಆರ್ಥಿಕ ಅಪರಾಧಗಳ ತನಿಖಾ ತಂತ್ರಾಂಶ, ರಾಜ್ಯ ಪೊಲೀಸ್ ಡೇಟಾಥಾನ್-2024, ರಾಜ್ಯ ಪೊಲೀಸ್ ಹ್ಯಾಕಥಾನ್-2024 ಮೂಲಕ ಇಲಾಖೆಗೆ ಅತ್ಯಾಧುನಿಕ ಸ್ಪರ್ಶ ನೀಡಿದೆ.
ಪೊಲೀಸ್ ಪ್ರಧಾನ ಕಚೇರಿಯಲ್ಲಿ ಮಂಗಳವಾರ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಆಧುನಿಕ ತಂತ್ರಜ್ಞಾನಗಳಿಗೆ ಚಾಲನೆ ನೀಡಿದರು.
ಐಟಿಪಿಎ ಸರಳ ಮೊಬೈಲ್ ಆಪ್:ಮಾನವ ಕಳ್ಳಸಾಗಣಿಕೆ ವಿರುದ್ಧ ಕಾನೂನುಗಳು ನಿರ್ಣಾಯಕವಾಗಿದೆ. ಆದ್ದರಿಂದ ಅಧಿಕಾರಿಗಳಿಗೆ ಅಗತ್ಯವಿರುವ ದಾಖಲೆಗಳು, ಕಾರ್ಯವಿಧಾನಗಳು, ಅನ್ವಯವಾಗುವ ಕಾನೂನುಗಳು ಮತ್ತು ಸಂತ್ರಸ್ಥರಿಗೆ ಆಶ್ರಯ ತಂಗುದಾಣಗಳ ಕುರಿತು ಸುಲಭವಾದ ಮಾರ್ಗದರ್ಶನ ನೀಡಲು ಸಹಕಾರಿಯಾಗಲಿದೆ. ರಾಜ್ಯ ಪೊಲೀಸ್ ಇಲಾಖೆ ವಿಹಾನ್ ಮತ್ತು ಟಾರ್ಗೆಟ್ ಸಹಯೋಗದಲ್ಲಿ ಈ ಆಪ್ ಸಿದ್ಧಪಡಿಸಲಾಗಿದೆ.
ಪೊಲೀಸ್ ಮಿತ್ರ ಚಾಟ್​ಬಾಟ್:24 ಗಂಟೆಯೂ ಸಾರ್ವಜನಿಕರ ವಿವಿಧ ಪ್ರಶ್ನೆಗಳಿಗೆ ಉತ್ತರ ನೀಡುತ್ತದೆ. ಇಲಾಖೆಯ ಅಧಿಕೃತ ಜಾಲತಾಣ ಮತ್ತು ಕೆಎಸ್​ಪಿ ಆಪ್ ಮೂಲಕ ಸಂಯೋಜಿಸಲಾಗಿದೆ. ಸೈಬರ್ ಅಪರಾಧ, ಸಂಚಾರ, ಮಹಿಳೆ, ಮಕ್ಕಳ ಮೇಲಿನ ಸಮಸ್ಯೆಗಳು ಮತ್ತು ಹಿರಿಯ ನಾಗರಿಕರ ಸಮಸ್ಯೆಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರ ನೀಡಲಿದೆ.
ಕೆಎಸ್​ಪಿ, ಎ.ಐ:ಕೆಎಸ್​ಪಿ ಎಐ ತಂತ್ರಾಂಶ ಬಳಕೆಯಿಂದ ಇಲಾಖೆಯ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಅಪರಾಧಗಳ ತನಿಖೆಯಲ್ಲಿ ಮತ್ತು ಸಾರ್ವಜನಿಕ ಸುರಕ್ಷತೆಯನ್ನು ಕಾಪಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಜತೆಗೆ ಪ್ರಕರಣದ ಸಂಕ್ಷಿಪ್ತ ಸಂಗತಿಗಳನ್ನು ಉಪ ಸಂಗತಿಗಳಾಗಿ ವಿಭಜಿಸುವ ಪ್ರಕ್ರಿಯೆಯನ್ನು ಸ್ವಯಂಚಾಲಿತಗೊಳಿಸಿಕೊಳ್ಳುವ ಮೂಲಕ ಪ್ರಕರಣದ ವಿಶ್ಲೇಷಣೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಿದೆ. ಮಾನವ ಹಸ್ತಕ್ಷೇಪವಿಲ್ಲದೆ ಕಾಯ್ದೆಗಳು, ವಿಭಾಗಗಳನ್ನು ಪರಿಣಾಮಕಾರಿಯಾಗಿ ಗುರುತಿಸಲಿದೆ.
ಆರ್ಥಿಕ ಅಪರಾಧಗಳ ತನಿಖಾ ತಂತ್ರಾಂಶ:ಆರ್ಥಿಕ ಅಪರಾಧ ಹೆಚ್ಚಾಗುತ್ತಿದ್ದು, ಅಪಾರ ಪ್ರಮಾಣದ ದತ್ತಾಂಶವನ್ನು ವಿಶ್ಲೇಷಿಸಲು ಮತ್ತು ಅಪರಾಧಕ್ಕೆ ಸಂಬಂಧಪಟ್ಟ ಕುರುಹುಗಳನ್ನು ಗುರುತಿಸಲು, ಸ್ವಯಂಚಾಲಿತ ಮಾದರಿ ಗುರುತಿಸುವಿಕೆ, ಹಣಕಾಸು ವಹಿವಾಟಿನ ಪರಸ್ಪರ ಸಂಬಂಧಗಳ ವಿಶ್ಲೇಷಣೆಯಲ್ಲಿ ಈ ತಂತ್ರಾಂಶವು ಸಹಕಾರಿಯಾಗಲಿದೆ.
ಪೊಲೀಸ್ ಡೇಟಾಥಾನ್-2024:ಇಲಾಖೆಯಲ್ಲಿ ಈಗಾಗಲೆ ಸಂಗ್ರಹಿಸಿರುವ ದತ್ತಾಂಶಗಳನ್ನು ಬಳಸಿಕೊಂಡು ಡೇಟಾ ಅನಾಲಿಸ್ಟ್, ಡೇಟಾ ದೃಶ್ಯೀಕರಣ ಮತ್ತು ಅಪರಾಧ ವಿಶ್ಲೇಷಣೆ ಮಾಡಲು ಅನುಕೂಲವಾಗುವಂತೆ ಪೊಲೀಸ್ ಡೇಟಾಥಾನ್-2024 ಆಯೋಜಿಸಿದೆ. ಇದರೊಂದಿಗೆ ರಾಜ್ಯ ಪೊಲೀಸ್ ಹ್ಯಾಕಥಾನ್-2024 ಅನ್ನು ಕೂಡ ಪೊಲೀಸ್ ಇಲಾಖೆಯ ಡಾರ್ಕ್​ವೆಬ್ ಮಾನಿಟರಿಂಗ್ ಕ್ರಿಪ್ಟೋಕರೆನ್ಸಿ ಅನಾಲಿಸಿಸ್ ಮತ್ತು ಒಎಸ್​ಐಎನ್​ಟಿ ಟೂಲ್ ಡೆವಲಪ್​ವೆುಂಟ್ ವಿಷಯಗಳ ಮೇಲೆ ಇಲಾಖೆಯಲ್ಲಿ ಪೊಲೀಸ್ ಹ್ಯಾಕಥಾನ್ ಆಯೋಜಿಲಾಗಿದೆ.
ಅನುಕಂಪ ಆಧಾರದ ನೇಮಕಾತಿ ಪೋರ್ಟಲ್:ಪೊಲೀಸ್ ಇಲಾಖೆಯ ಕರ್ತವ್ಯದಲ್ಲಿ ಪ್ರಾಣ ಕಳೆದುಕೊಂಡ ಪೊಲೀಸ್ ಅಧಿಕಾರಿ-ಸಿಬ್ಬಂದಿ ಕುಟುಂಬಗಳಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ಉದ್ದೇಶದಿಂದ ಅನುಕಂಪ ನೇಮಕಾತಿಯನ್ನು ಪಾರದರ್ಶಕವಾಗಿ ಹಾಗೂ ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಅನುವು ಮಾಡಿಕೊಡಲಾಗುತ್ತಿದೆ. ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಿದ ಕೂಡಲೇ ಅರ್ಜಿದಾರರಿಗೆ ಸಂದೇಶ ರವಾನೆಯಾಗುತ್ತದೆ. ಮುಂದಿನ ಎಲ್ಲ ಹಂತಗಳ ನೇಮಕಾತಿ ಪ್ರಕ್ರಿಯೆಗಳನ್ನು ಪೋರ್ಟಲ್ ಮೂಲಕ ಪಡೆಯಬಹುದು.
ಮಾ.2ಕ್ಕೆ ಹ್ಯಾಕಥಾನ್ ಡೇ:ಸಿಐಡಿ-ಡಿಕೋಡ್ ಶೀರ್ಷಿಕೆಯಡಿ ಹಮ್ಮಿಕೊಂಡಿರುವ ಸೈಬರ್ ಹ್ಯಾಕಥಾನ್ ನೋಂದಣಿಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. ತಂತ್ರಜ್ಞಾನ ಸಂಬಂಧಿತ ಸಮಸ್ಯೆಗಳನ್ನು ಎದುರಿಸುವಲ್ಲಿ ಸ್ವಯಂಪ್ರೇರಿತವಾಗಿ ತನಿಖಾ ಸಂಸ್ಥೆಗಳ ಸಾಮರ್ಥ್ಯವನ್ನು ವೃದ್ಧಿಗೊಳಿಸುವುದು ಇದರ ಉದ್ದೇಶವಾಗಿದೆ. ಸಿಐಡಿ, ಡೇಟಾ ಸೆಕ್ಯೂರಿಟಿ ಕೌನ್ಸಿಲ್ ಆಫ್ ಇಂಡಿಯಾ (ಡಿಎಸ್​ಸಿಐ), ಇನ್ಪೋಸಿಸ್ ಫೌಂಡೇಶನ್ ಸಹಯೋಗದೊಂದಿಗೆ ಸ್ಥಾಪಿಸಲಾಗಿರುವ ಸೆಂಟರ್ ಫಾರ್ ಸೈಬರ್ ಕ್ರೖೆಂ ಟ್ರೖೆನಿಂಗ್ ಆಂಡ್ ರಿಸರ್ಚ್(ಸಿಸಿಐಟಿಆರ್) ವತಿಯಿಂದ ಈ ಸೈಬರ್ ಹ್ಯಾಕಥಾನ್ ಆಯೋಜಿಸಲಾಗಿದೆ. ಪಿಇಎಸ್ ವಿವಿ ಈ ಕಾರ್ಯಕ್ರಮದ ಆತಿಥ್ಯ ವಹಿಸಿದೆ.
ಐ.ಟಿ.ವಿ2 ತಂತ್ರಾಂಶ:ಐ.ಟಿ.ವಿ2 ತಂತ್ರಾಂಶವನ್ನು ಆಧುನಿಕ ತಂತ್ರಜ್ಞಾನ ಬಳಸಿ ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ. ಪೂರ್ಣ ಪ್ರಮಾಣದಲ್ಲಿ ತನಿಖಾ ಪ್ರಕ್ರಿಯೆಯನ್ನು ಸಮಗ್ರವಾಗಿ ಕೈಗೊಳ್ಳಲು ಮೈಕ್ರೋಸರ್ವೀಸ್ ಆರ್ಕಿಟೆಕ್ಚರ್ ತಂತ್ರಜ್ಞಾನ ಬಳಸಲಾಗಿದೆ. ಎಫ್​ಐಆರ್ ನೋಂದಣಿಯಿಂದ ಹಿಡಿದು ಪ್ರಕರಣದ ವಿಲೇವಾರಿವರೆಗಿನ ಎಲ್ಲ ಕಾರ್ಯಚಟುವಟಿಕೆಗಳನ್ನು ತಡೆರಹಿತವಾಗಿ ನಿರ್ವಹಿಸುತ್ತದೆ. ಡಿಜಿಟಲ್ ಸಾಕ್ಷ್ಯ ನಿರ್ವಹಣೆ ಸೇರಿ ವಿವಿಧ ಸೇವೆಗಳನ್ನೊಳಗೊಂಡಂತೆ ಪೊಲೀಸ್ ಇಲಾಖೆ ಮತ್ತು ನಾಗರಿಕರಿಗೆ ಹೆಚ್ಚಿನ ಸೇವೆಗಳನ್ನು ಒದಗಿಸುವಂತೆ ವಿನ್ಯಾಸಗೊಳಿಸಲಾಗಿದೆ.
ಹಸ್ತಕ್ಷೇಪ ಮಾಡಲ್ಲ:ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಉತ್ತರಕನ್ನಡ ಕ್ಷೇತ್ರದ ಸಂಸದ ಅನಂತಕುಮಾರ ಹೆಗಡೆ ಬಂಧನದ ಕುರಿತು ಸ್ಥಳೀಯ ಪೊಲೀಸರು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಹೇಳಿದರು. ಹೆಗಡೆ ವಿರುದ್ಧ ಕುಮಟಾ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ಸ್ಥಳೀಯ ಪೊಲೀಸರು ಸಾಕ್ಷ್ಯಗಳನ್ನು ಆಧರಿಸಿ ಕ್ರಮ ತೆಗೆದುಕೊಳ್ಳುತ್ತಾರೆ. ಆದರೆ ಯಾರನ್ನಾದರೂ ಬಂಧಿಸಿ ಅಥವಾ ಬಂಧಿಸಿದವರನ್ನು ಬಿಟ್ಟುಬಿಡಿ ಎಂದು ನಾನು ಯಾವತ್ತೂ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕನ್ನಡಪರ ಹೋರಾಟಗಾರರ ಮೇಲೆ ದಾಖಲಾಗಿರುವ ಪ್ರಕರಣವನ್ನು ಹಿಂಪಡೆಯಬೇಕು ಎಂದು ಈವರೆಗೂ ಯಾರೂ ಕೇಳಿಲ್ಲ. ಒಂದು ವೇಳೆ ಈ ನಿಟ್ಟಿನಲ್ಲಿ ಬೇಡಿಕೆಗಳು ಬಂದರೆ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಹೇಳಿದರು. ಪ್ರತಿಪಕ್ಷಗಳು ಪ್ರತಿಯೊಂದು ಪ್ರಕರಣಕ್ಕೂ ಎಸ್​ಐಟಿ ರಚಿಸಿ ಸಿಬಿಐ, ಸಿಐಡಿ ತನಿಖೆ ಮಾಡಿ ಎಂದು ಹೇಳುತ್ತಿರುತ್ತಾರೆ. ಅವರು ಹೇಳಿದಂತೆಲ್ಲ ಕೇಳುತ್ತ ಕುಳಿತರೆ ನಾವು ಆಡಳಿತ ಮಾಡಲಾಗುವುದಿಲ್ಲ. ಹಿಂದೆ ನಾವು ವಿರೋಧಪಕ್ಷದಲ್ಲಿದ್ದಾಗ ಸಾಕಷ್ಟು ಬೇಡಿಕೆಗಳನ್ನು ಮುಂದಿಟ್ಟಿದ್ದೆವು. ಅದನ್ನೆಲ್ಲ ಅವರು ಈಡೇರಿಸಿದ್ದರೆ? ಜನಪರ ಆಡಳಿತ ನೀಡುವುದು ನಮ್ಮ ಆದ್ಯತೆ ಎಂದು ಡಾ.ಪರಮೇಶ್ವರ ಹೇಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + 11 =
Remember me
