ದಾವಣಗೆರೆ:ಸಾರ್ವಜನಿಕರ ಗಮನವನ್ನು ಬೇರೆಡೆ ಸೆಳೆದು ಲಕ್ಷಾಂತರ ರೂ. ನಗದು ದೋಚುತ್ತಿದ್ದ ಇಬ್ಬರು ಅಂತಾರಾಜ್ಯ ಕಳ್ಳರನ್ನು ಜಿಲ್ಲೆಯ ಪೊಲೀಸರು ಬಂಧಿಸಿ 21 ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದಾರೆ. ಚೆನ್ನೈ ಮೂಲದ ನರೇಶ ಮತ್ತು ಲೋಂಡಾ ಮೂಲದ ಮಹಮದ್​ ಹುಸೇನ್​ ಅಲಿಯಾಸ್​ ಮುಲ್ಲಾ ಬಂಧಿತರು.
ಆರೋಪಿಗಳು ದಾವಣಗೆರೆ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಇಂಥ ಕೃತ್ಯಗಳಲ್ಲಿ ತೊಡಗುತ್ತಿದ್ದರು. ನೋಟನ್ನು ಕೆಳಗೆ ಬಿಸಾಕಿ “ನಿಮ್ಮ ಹಣ ಬಿದ್ದಿದೆ ತೆಗೆದುಕೊಳ್ಳಿ” ಎಂದು ಹೇಳಿ ಜನರ ಗಮನ ಆ ಕಡೆಗೆ ಹೋಗುವಂತೆ ಮಾಡಿ, ಅಷ್ಟರಲ್ಲಿ ಜನರ ಬಳಿ ಹಣ ತೆಗೆದುಕೊಂಡು ಪರಾರಿಯಾಗುತ್ತಿದ್ದರು. ಬ್ಯಾಂಕಿನಿಂದ ಹಣ ಬಿಡಿಸಿಕೊಂಡು ಹೊರ ಬರುವ ಗ್ರಾಹಕರನ್ನು ಗುರಿಯಾಗಿಸಿಕೊಳ್ಳುತ್ತಿದ್ದರು. ವೃದ್ಧರು, ಒಬ್ಬಂಟಿಯಾಗಿ ಬಂದವರು ವಂಚನೆಗೆ ಒಳಗಾಗುತ್ತಿದ್ದರು. ಕಾರಿಗೆ ಪೆಟ್ರೋಲ್​ ಹಾಕಿಸಿಕೊಳ್ಳಲು ಹೋದ ಸಮಯದಲ್ಲೂ ಆರೋಪಿಗಳು ಕರಾಮತ್ತು ತೋರಿಸುತ್ತಿದ್ದರು ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್​ ತಿಳಿಸಿದ್ದಾರೆ.
ಆರೋಪಿಗಳಿಂದ ದಾವಣಗೆರೆ ವಿದ್ಯಾನಗರ ಠಾಣೆಯ 2 ಪ್ರಕರಣಗಳಲ್ಲಿ 6 ಲಕ್ಷ, ಹರಿಹರ ನಗರ ಪೊಲೀಸ್​ ಠಾಣೆಯ 1 ಪ್ರಕರಣದಲ್ಲಿ 2 ಲಕ್ಷ ರೂ, ಹಾವೇರಿ ಜಿಲ್ಲೆಯ ಹಾನಗಲ್​ ಪೊಲೀಸ್​ ಠಾಣೆಯ 1 ಪ್ರಕರಣದಲ್ಲಿ 13 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕನ್ನಡದ ಕೋಟ್ಯಧಿಪತಿ ಖ್ಯಾತಿಯ ಲೈನ್​ಮನ್ ಆತ್ಮಹತ್ಯೆ! ಗೃಹಪ್ರವೇಶಕ್ಕೂ 2 ದಿನ ಮೊದಲೇ ದುರಂತ, ಆ ರಾತ್ರಿ ತೋಟದಲ್ಲಿ…

ನಾದಿನಿ ಜತೆ ಸರಸವಾಡಲು ಪತ್ನಿಯನ್ನೇ ಕೊಂದ! ವಿಚಾರಣೆ ವೇಳೆ ಬಯಲಾಯ್ತು ಅಸಹ್ಯ… ನೆಲಮಂಗಲದಲ್ಲಿ ಹೀನ ಕೃತ್ಯ

ಪತ್ನಿಯ ಕೊಲೆ ಕೇಸ್​ನಲ್ಲಿ ಗಂಡನಿಗೆ ಜೈಲುಶಿಕ್ಷೆ, ಅತ್ತ ಪ್ರಿಯಕರನೊಂದಿಗೆ ಪ್ರತ್ಯಕ್ಷವಾದ ಪತ್ನಿ! ದುಡುಕಿಬಿಟ್ಟ ಮಾವ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + 12 =
Remember me
