ಕೊಪ್ಪಳ:ಸದ್ಯ ಮಾನವೀಯ ಮೌಲ್ಯಗಳು ಕುಸಿಯುತ್ತಿವೆ. ಕುಟುಂಬದವರು ತೀರಿಕೊಂಡಾಗ ಎಷ್ಟೋ ಜನ ಅಂತಿಮ ಸಂಸ್ಕಾರಕ್ಕೂ ಬಾರದೇ ನಿಷ್ಕರುಣಿಗಳಂತೆ ವರ್ತಿಸುತ್ತಾರೆ‌. ಆದರೆ, ಆಗಾಗ ಅಲ್ಪ-ಸ್ವಲ್ಪ‌ ಆಹಾರ ನೀಡಿದ‌ ಒಡತಿ ಮರಣಿಸಿದಾಗ ಆಗಮಿಸಿ ಕೋತಿಯೊಂದು ದುಃಖದಲ್ಲಿ ಭಾಗಿಯಾಗಿ ಅಂತಿಮ ಸಂಸ್ಕಾರವರೆಗು ಇದ್ದು ಎಲ್ಲರಿಗೂ ಮಾನವೀಯತೆ ಪಾಠ ಮಾಡಿದೆ‌.
ಇದನ್ನೂ ಓದಿ:ಬೆಂಗಳೂರು: ದಕ್ಷಿಣ ಭಾರತದ ಪ್ರಥಮ ಡಬ್ಬಲ್ ಡೆಕ್ಕರ್ ಮೇಲ್ಸೇತುವೆ ಲೋಕಾರ್ಪಣೆ!, ಇದರ ವಿಶೇಷತೆಗಳೇನು?
ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮದಲ್ಲಿ ವೃದ್ಧೆಯೋರ್ವಳು ಮಂಗಳವಾರ ಮೃತಪಟ್ಟಿದ್ದು, ಅಂತಿಮ ಶವ ಸಂಸ್ಕಾರದವರೆಗೆ ಕೋತಿಯೊಂದು ವೃದ್ಧೆ ಮುಂದೆ ಕುಳಿತು ಸಂತಾಪ ಸೂಚಿಸುವ ಮೂಲಕ ಅಚ್ಚರಿ ಮೂಡಿಸಿತು. ಗ್ರಾಮದ ನೀಲಮ್ಮ (86) ವಯೋಸಹಜ ಸಾವನ್ನಪ್ಪಿದ್ದಾರೆ. ಮನೆ ಮುಂದೆ ಶವ ಕೂಡಿಸಲಾಗಿದೆ. ಈ ವೇಳೆ ಎಲ್ಲಿಂದಲೋ ಬಂದ ಕೋತಿ ಶವದ ಮುಂದೆ ಕೂತು ಎಲ್ಲ ತಯಾರಿ ವೀಕ್ಷಿಸಿದೆ. ಅಷ್ಟೊಂದು ಜನರಿದ್ದರೂ ಹೆದರದೇ ದುಃಖ ಭಾವದಲ್ಲಿ ಕುಳಿತು ಶವವನ್ನೇ ನೋಡುತ್ತ ಸಮಯ ಕಳೆದಿದೆ.

ಜನರು ಓಡಿಸಲು ನೋಡಿದರೂ ಹೋಗಿಲ್ಲ. ಮನುಷ್ಯರಂತೆ ಅಜ್ಜಿಗೆ ನಮಸ್ಕಾರ ಮಾಡಿದೆ. ಅಂತಿಮ ಸಂಸ್ಕಾರಕ್ಕೆ ಮನೆಯಿಂದ ಸ್ಮಶಾನಕ್ಕೆ ಶವ ಕೊಂಡೊಯ್ಯುವವರೆಗೂ ಇದ್ದು, ಅಂತಿಮ ನಮಸ್ಕಾರ ಸಲ್ಲಿಸಿ‌ ತೆರಳುವ ಮೂಲಕ ನೋಡುಗರನ್ನು ನಿಬ್ಬೆರಗಾಗಿಸಿದೆ. ಮಗನೊಂದಿಗೆ ವಾಸವಿರುವ ಅಜ್ಜಿ ಆಗಾಗ ಬರುತ್ತಿದ್ದ ಕೋತಿಗೆ ಆಹಾರ ನೀಡುತ್ತಿದ್ದರು. ಅದಕ್ಕೆ ಅಂತಿಮ ಯಾತ್ರೆ ವೇಳೆ ಆಗಮಿಸಿ ನಮನ ಸಲ್ಲಿಸಿದೆ‌‌ ಎಂದು ನೆರೆಹೊರೆಯವರು ತಿಳಿಸಿದರು.
ಕಸ ವಿಲೇವಾರಿ ಟೆಂಡರ್​ನಲ್ಲಿ 15 ಸಾವಿರ ಕೋಟಿ ಲಂಚದ ಆರೋಪ: ಕುಮಾರಸ್ವಾಮಿಗೆ ಡಿಸಿಎಂ ಡಿಕೆಶಿ ತಿರುಗೇಟು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − eight =
Remember me
