ಬೆಂಗಳೂರು:ರಾತ್ರಿ ಕೋಣೆಗೆ ಹೋದ ಪತ್ನಿ ಬೆಳಗ್ಗೆ ಎಷ್ಟು ಹೊತ್ತಾದರೂ ಹೊರಗೆ ಬಾರಲಿಲ್ಲ. ರೋಹಿಣಿ ಬಾಗಿಲು ತೆಗೆಯಮ್ಮ… ಯಾಕೆ ಇನ್ನೂ ಹೊರಗೆ ಬಂದಿಲ್ಲ, ಟೈಂ ಆಯ್ತು ಎದ್ದೇಳಮ್ಮ.. ಪಾಪು ಎಲ್ಲಿ? ಅವನೂ ನಿನ್ನ ರೂಮಲ್ಲೇ ಇದಾನಾ… ಎನ್ನುತ್ತಾ ಪತಿ ಎಷ್ಟೇ ಕೂಗಿದರೂ ಆ ಕಡೆಯಿಂದ ಪ್ರತಿಕ್ರಿಯೆ ಬಾರಲಿಲ್ಲ. ಅನುಮಾನಗೊಂಡ ಗಂಡ, ಸ್ಥಳಿಯರ ಸಹಾಯದಿಂದ ಬಾಗಿಲು ಹೊಡೆದು ಒಳ ಹೋಗುತ್ತಿದ್ದಂತೆ ಆಘಾತ ಕಾದಿತ್ತು. ನೇಣುಬಿಗಿದ ಸ್ಥಿತಿಯಲ್ಲಿದ್ದ ಪತ್ನಿ-ಮಗನ ಮೃತದೇಹ ಕಂಡು ಬೆಚ್ಚಿಬಿದ್ದಿದ್ದಾನೆ.
ಇಂತಹ ಭೀಕರ ಘಟನೆ ಬೆಂಗಳೂರಿನ ಬಸವನಪುರದ ಬಾಡಿಗೆ ಮನೆಯೊಂದರಲ್ಲಿ ಸಂಭವಿಸಿದೆ. ಮಂಗಳೂರು ಮೂಲದ ರೋಹಿಣಿ ಶೆಟ್ಟಿ (33) ಮತ್ತು ಈಕೆಯ ಪುತ್ರ ಸಿಯಾನ್​ ಶೆಟ್ಟಿ ಮೃತ ದುರ್ದೈವಿಗಳು. 12 ವರ್ಷಗಳ ಹಿಂದೆ ರೋಹಿಣಿ ಅವರ ತಾಯಿ ನೇಣಿಗೆ ಶರಣಾಗಿದ್ದರು. ಅಮ್ಮನ ಸಾವಿನ ಬಳಿಕ ಕಂಗೆಟ್ಟ ರೋಹಿಣಿ, ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು. ಆ ನಡುವೆ ಪ್ರವಿಣ್​ ಎಂಬುವರ ಜತೆ ರೋಹಿಣಿಯ ಮದುವೆ ಆಗಿತ್ತು. ದಂಪತಿಗೆ 5 ವರ್ಷದ ಮಗ ಇದ್ದ. ಮದ್ವೆಯಾದ ಬಳಿಕ ಎರಡ್ಮೂರು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದ ರೋಹಿಣಿಗೆ ವೈದ್ಯರಿಂದ ಚಿಕಿತ್ಸೆ ಸಹ ಕೊಡಸಲಾಗಿತ್ತು. ಏ.17ರ ರಾತ್ರಿ ಊಟ ಮುಗಿಸಿ ಪ್ರತ್ಯೇಕ ಕೊಠಡಿಯಲ್ಲಿ ದಂಪತಿ ಮಲಗಿದ್ದರು. ರೋಹಿಣಿ ಜತೆಗೆ ಮಗ ಕೂಡ ಮಲಗಿದ್ದ.
ಮಾರನೇ ದಿನ ಬೆಳಗ್ಗೆ ಪತ್ನಿ ಎಷ್ಟು ಹೊತ್ತಾದರೂ ಕೋಣೆಯಿಂದ ಹೊರಗೆ ಬಾರದೆ ಇದ್ದಾಗ ಅನುಮಾನಗೊಂಡ ಪ್ರವಿಣ್, ಸ್ಥಳೀಯರ ಸಹಾಯದಿಂದ ಬಾಗಿಲು ಹೊಡೆದು ಒಳಗೆ ಪ್ರವೇಶಿಸಿದಾಗ ಪತ್ನಿ-ಮಗನ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 5 ವರ್ಷದ ಮಗನನ್ನು ಕೊಲೆ ಮಾಡಿ ಅದೇ ಫ್ಯಾನಿಗೆ ನೇಣು ಬಿಗಿದುಕೊಂಡು ರೋಹಿಣಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹುಳಿಮಾವು ಠಾಣೆ ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಮೃತಳ ಸಹೋದರಿ ಮೋಹಿನಿ ದೂರು ನೀಡಿದ್ದಾರೆ.
ಫ್ರೆಂಡ್ಸ್ ಜತೆ ಲೈಂಗಿಕವಾಗಿ ಸಹಕರಿಸು… ಮೊದಲ ಪತಿಗೆ ಡಿವೋರ್ಸ್​ ಕೊಟ್ಟು ಮತ್ತೊಬ್ಬನ ಮದ್ವೆ ಆದಾಕೆ ಬಾಳಲ್ಲಿ ದುರಂತ

ಏ.26ಕ್ಕೆ ನನ್ನ ಮದ್ವೆ ಇದೆ, ದಯವಿಟ್ಟು ಎಲ್ಲಿಗಾದ್ರೂ ಓಡೋಗೋಣ… ಸಖತ್​ ವೈರಲ್​ ಆಗ್ತಿದೆ ಪ್ರಿಯತಮೆ ಸಂದೇಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 5 =
Remember me
