ಬೆಂಗಳೂರು:ಮೆಜೆಸ್ಟಿಕ್ ರೈಲು ನಿಲ್ದಾಣ(ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ)ದಲ್ಲೇ ಮಸೀದಿ ತಲೆ ಎತ್ತಿದೆ. ರೈಲ್ವೆ ನಿಲ್ದಾಣದ ಪ್ಲಾಟ್ ಫಾರ್ಮ್​ ನಂಬರ್​ 5ರಲ್ಲಿ ಕೂಲಿ ಕಾರ್ಮಿಕರ ರೆಸ್ಟ್ ರೂಂ ಅನ್ನೇ ಪ್ರಾರ್ಥನೆ ಮಾಡಲು ಮಸೀದಿಯನ್ನಾಗಿ ಮಾರ್ಪಾಡು ಮಾಡಲಾಗಿದೆ.
ಮೆಜೆಸ್ಟಿಕ್ ರೈಲು ನಿಲ್ದಾಣದ ಕೂಲಿ ಕಾರ್ಮಿಕರ ರೆಸ್ಟ್ ರೂಂ ಅನ್ನೇ ಮಸೀದಿಯನ್ನಾಗಿ ಮಾರ್ಪಾಡಿಸಿದ್ದಾರೆ ಎಂದು ಮಲೆಯಾಳಂ ಭಾಷೆಯಲ್ಲಿ ಹೇಳುತ್ತಿರುವ ವಿಡಿಯೋ ವೈರಲ್​ ಆಗಿದೆ.

ಸರ್ಕಾರಿ ಕಚೇರಿಗಳು ಈ ರೀತಿಯಲ್ಲಿ ದುರ್ಬಳಕೆ ಆಗಬಾರದು. ರಾಜ್ಯದ ಅತ್ಯಂತ್ಯ ಪ್ರಮುಖ ರೈಲ್ವೆ ನಿಲ್ದಾಣದ ಕೂಲಿ ಕಾರ್ಮಿಕರ ರೂಂ ಅನ್ನೇ ಮಸೀದಿಯನ್ನಾಗಿ ಮಾಡಿಕೊಂಡಿರುವುದು ಎಷ್ಟರ ಮಟ್ಟಿಗೆ ಸರಿ? ಇದು ಅಲ್ಲಿನ ಮುಖ್ಯಸ್ಥರಿಗೆ ತಿಳಿದಿಲ್ಲವೇ? ರೈಲ್ವೆ ಅಧಿಕಾರಿಗಳು ಏಕೆ ಸುಮ್ಮನಿದ್ದಾರೆ? ಕೇಂದ್ರ ರೈಲ್ವೆ ಸಚಿವರು ಮತ್ತು ಆರ್​ಎಸ್​ಎಸ್​ ಮೂಲದವರೇ ಆದ ಗೃಹ ಸಚಿವರ ಗಮನಕ್ಕೆ ಇದು ಬಂದಿಲ್ಲವೇ? ಎಂದು ಹಿಂದು ಜನ ಜಾಗೃತಿ ವೇದಿಕೆ ರಾಜ್ಯ ವಕ್ತಾರ ಮೋಹನ್​ ಗೌಡ ಪ್ರಶ್ನಿಸಿದ್ದಾರೆ.

ಮೆಜೆಸ್ಟಿಕ್​ ಬಳಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ(ಕೆಎಸ್ಆರ್​​) ರೈಲ್ವೆ ನಿಲ್ದಾಣದಲ್ಲಿನ ಕಾರ್ಮಿಕರ ರೆಸ್ಟ್​ ರೂಂ ನಲ್ಲಿ 35 ವರ್ಷದಿಂದ ಮುಸ್ಲಿಂ ಸಮುದಾಯದವರು ಪ್ರತಿದಿನ ಬೆಳಗ್ಗೆ 5 ಗಂಟೆಗೆ ನಮಾಜ್ ಮಾಡಿಕೊಂಡು ಬರುತ್ತಿದ್ದಾರೆ ಎನ್ನಲಾಗಿದೆ. ಶೇ.70 ಮುಸ್ಲಿಂ ಕೆಲಸಗಾರರು ಇದ್ದಾರೆ. ಮುಸ್ಲಿಂ ಸಮುದಾಯದವರಿಗೆಂದೇ ಈ ರೆಸ್ಟ್ ರೂಂ ಇದೆ ಎನ್ನಲಾಗಿದೆ.
ಭ್ರಷ್ಟಾಚಾರ ಆರೋಪ: ಕೊನೆಗೂ ಮೌನ ಮುರಿದ ರವಿ ಚನ್ನಣ್ಣನವರ್! ​ಎಳೆಎಳೆಯಾಗಿ ಬಿಚ್ಚಿಟ್ಟ ಅವರ ಸತ್ಯ ಇಲ್ಲಿದೆ

ಹೆದರಿ ಓಡಿ ಹೋಗಲು ನಾನು ಸಂಸದೆ ಸುಮಲತಾ ಅಲ್ಲ… ರವೀಂದ್ರ ಶ್ರೀಕಂಠಯ್ಯ ವಿರುದ್ಧ ಕಾಳಿ ಮಠದ ಸ್ವಾಮಿ ಆಕ್ರೋಶ

Sign in to your account
Please enter an answer in digits:19 − 12 =
Remember me
