ಹಾವೇರಿ:ಕಣ್ಣಿಗೆ ಕಾಣುವ ದೇವರು ಅಂದ್ರೆ ತಾಯಿ. ಅಂತಹ ತಾಯಿ ಕರೊನಾ ಸೋಂಕಿನಿಂದ ಗುಣಮುಖರಾಗಿ ಬಂದರೂ ಮಗ ಮಾತ್ರ ಮನೆಗೆ ಸೇರಿಸಿಲ್ಲ. ನೊಂದ ಆ ಜೀವ ಆತ್ಮಹತ್ಯೆ ಮಾಡಿಕೊಂಡು ಸತ್ತಿದೆ.
ಇಂತಹ ಅಮಾನವೀಯ ಘಟನೆ ಹಾವೇರಿಯಲ್ಲಿ ಸಂಭವಿಸಿದೆ. ದೇವಿಹೊಸೂರು ಗ್ರಾಮದ ಅಡಿವೆಕ್ಕ ಕಬ್ಬೂರ (80) ಮೃತ ದುರ್ದೈವಿ. ಅಡಿವೆಕ್ಕಗೆ ಇತ್ತೀಚಿಗೆ ಕರೊನಾ ಸೋಂಕು ತಗುಲಿತ್ತು. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಅಡಿವೆಕ್ಕ ಗುಣಮುಖವಾಗಿದ್ದರು. ಮೇ 8ರಂದು ಅಡಿವೆಕ್ಕಳ ಮಗಳು ದಾನೇಶ್ವರಿ ತನ್ನ ತಾಯಿಯನ್ನು ಜಿಲ್ಲಾಸ್ಪತ್ರೆಯಿಂದ ಆಟೋ ರಿಕ್ಷಾದಲ್ಲಿ ಹತ್ತಿಸಿ ತಾಯಿಯ ವಾಸದ ಮನೆಗೆ ಕಳಿಸಿದ್ದಳು. ಆದರೆ ಅಡಿವೆಕ್ಕಳ ಮಗ ಪ್ರಭು ಮತ್ತು ಸೊಸೆ‌ ಸಾವಿತ್ರಿ ಮನೆಗೆ ಸೇರಿಸಿಲ್ಲ. ‘ನಿನಗೆ ಕರೊನಾ ಇದೆ. ಮನೆ ಒಳಗೆ ಬರಬೇಡ ಹೊರಗೆ ನಿಲ್ಲು’ ಎಂದು ತಾಯಿಗೆ ಮಗ ನಿಂದಿಸಿದ್ದನಂತೆ.ಇದನ್ನೂ ಓದಿರಿಮಹಿಳೆ ಮೃತಪಟ್ಟ ಸಿಟ್ಟಿಂದ ಹಾವು ಕೊಂದ ಕುಟುಂಬಸ್ಥರಿಗೆ ಶಾಕ್​! ತಾಯಿ ಸಾವಿಗೆ ಸೇಡು ತೀರಿಸಿಕೊಂಡ ಹಾವಿನ ಮರಿಗಳು
ಅಂದು ಅಲ್ಲಿಂದ ಹೋದ ತಾಯಿ ಎಲ್ಲಿದ್ದಾರೆ ಎಂದು ಪತ್ತೆಯಾಗಲಿಲ್ಲ. ತಾಯಿ ಕಾಣೆಯಾಗಿರುವ ಬಗ್ಗೆ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆದರೆ ಮಗ-ಸೊಸೆಯ ಮಾತಿಂದ ನೊಂದ ಆ ತಾಯಿ ಹಾವೇರಿ ಹೊರವಲಯದ ಹೆಗ್ಗೇರಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೀನುಗಾರರ ಕಣ್ಣಿಗೆ ಕೆರೆಯಲ್ಲಿ ಶವ ತೇಲುತ್ತಿರುವುದು ಕಂಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದಾ್ ಇದು ಅಡಿವೆಕ್ಕ ಕಬ್ಬೂರ ಶವ ಎಂಬುದು ಗೊತ್ತಾಗಿದೆ.
ತಾಯಿಯ ಸಾವಿಗೆ ನನ್ನ ಅಣ್ಣ ಮತ್ತು ಅತ್ತಿಗೆಯೇ ಕಾರಣ ಎಂದು ಮೃತಳ ಮಗಳು ದಾನೇಶ್ವರಿ ಕಣ್ಣೀರು ಹಾಕುತ್ತಿದ್ದ ದೃಶ್ಯ ಮನಕಲಕುವಂತಿತ್ತು.
ಮಹಿಳೆ ಮೃತಪಟ್ಟ ಸಿಟ್ಟಿಂದ ಹಾವು ಕೊಂದ ಕುಟುಂಬಸ್ಥರಿಗೆ ಶಾಕ್​! ತಾಯಿ ಸಾವಿಗೆ ಸೇಡು ತೀರಿಸಿಕೊಂಡ ಹಾವಿನ ಮರಿಗಳು

ಗಂಡನ ಪ್ರಾಣ ಉಳಿಸಿಕೊಡಿ ಎಂದು ಅಂಗಲಾಚಿದ ಮಹಿಳೆಯನ್ನು ಮಂಚಕ್ಕೆ ಕರೆದ ಕೋವಿಡ್​ ಆಸ್ಪತ್ರೆ ಸಿಬ್ಬಂದಿ: ಮುಂದಾಗಿದ್ದು ದುರಂತ!

ಲೈಂಗಿಕ ಕ್ರಿಯೆ ನಡೆಸಿದ ಕೋಣೆಯಲ್ಲೇ ವಿಷ ಕುಡಿದ ಪ್ರೇಮಿಗಳು: ಸಾವಿಗೂ ಮುನ್ನ ಪಾಲಕರಿಗೆ ಬಾಲಕಿ ಹೇಳಿದ್ಲು ಸ್ಫೋಟಕ ರಹಸ್ಯ

ಕರೊನಾಗೆ ಬಾಣಂತಿ ಬಲಿ! ಅವಳ ಚಿತೆಯಲ್ಲೇ ನನ್ನನ್ನೂ ಸುಟ್ಟುಹಾಕಿ … ಎಂದವ ವಿಷ ಕುಡಿದು ಆಸ್ಪತ್ರೆ ಆವರಣದಲ್ಲೇ ಒದ್ದಾಡಿದ

ಪ್ರೀತಿ ಹೆಸರಲ್ಲಿ ಶಾಲಾ ವಿದ್ಯಾರ್ಥಿನಿ ಜತೆ ಯುವಕನ ಸೆಕ್ಸ್: ಮಾತ್ರೆ ನುಂಗಿಸಿ ಸಿಕ್ಕಿಬಿದ್ದ ಕಾಮುಕನ ಕಥೆ ಏನಾಯ್ತು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × three =
Remember me
