ಚಾಮರಾಜನಗರ:ಇಳಿ ವಯಸ್ಸು, ಅನಾರೋಗ್ಯದ ಹಿನ್ನೆಲೆಯಲ್ಲಿ ಕುಟುಂಬದವರಿಂದ ನಟ ಪುನೀತ್‌ರಾಜ್‌ಕುಮಾರ್ ಸಾವಿನ ಸುದ್ದಿ ತಿಳಿಯದ ಡಾ.ರಾಜ್ ಸಹೋದರಿ ನಾಗಮ್ಮ ಅಪ್ಪು ಜನ್ಮದಿನ ಮತ್ತು ಜೇಮ್ಸ್ ಚಿತ್ರಕ್ಕೆ ಶುಭಕೋರಿ ‘ಒಳ್ಳೇದಾಗ್ಲಿ ನನ್​ ಕಂದನಿಗೆ..’ ಎಂದು ಹರಸಿ, ಆರ್ಶೀವದಿಸಿ ಕೈಮುಗಿದಿದ್ದಾರೆ. ಈ ದೃಶ್ಯ ನೋಡಿದ್ರೆ ಮನಕಲಕುತ್ತೆ.
ದೊಡ್ಡಗಾಜನೂರಿನ ನಿವಾಸದಲ್ಲಿ ಕುಟುಂಬಸ್ಥರು ನಾಗಮ್ಮ ಅವರಿಂದ ಸೋದರ ಅಳಿಯ ಪುನೀತ್‌ಗೆ ಶುಭಾಶಯ ಹೇಳಿಸಿದ್ದಾರೆ. ಇದನ್ನು ವಿಡಿಯೋ ಮಾಡಲಾಗಿದ್ದು, ‘ಮಾ.17ರಂದು ಅಪ್ಪು ಅಣ್ಣನ ಚಿತ್ರ ತೆರೆ ಕಾಣುತ್ತಿದೆ. ಅದರ ಹೆಸರು ಜೇಮ್ಸ್ ಅಂತ. ಹುಟ್ಟುಹಬ್ಬದ ದಿನವೇ ಚಿತ್ರ ತೆರೆಕಾಣುತ್ತಿದ್ದು, ಅವರಿಗೆ ಶುಭಕೋರಿ’ ಎಂದು ನಾಗಮ್ಮಗೆ ಮೊಮ್ಮಗಳು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ನಾಗಮ್ಮ, ‘ಒಳ್ಳೆಯದಾಗಲಿ ನನ್ನ ಕಂದನಿಗೆ’ ಎನ್ನುತ್ತಾ ದೃಷ್ಟಿ ನೀವಾಳಿಸಿ, ‘ಬಹಳ ಸಂತೋಷವಾಯಿತು. ಜೇಮ್ಸ್ ಅಂತನಾ ಚಿತ್ರದ ಹೆಸರು. ನಾನು ನೋಡಿಲ್ಲ ಅಪ್ಪುಗೆ ಹುಟ್ಟುಹಬ್ಬದ ಶುಭಾಶಯ’ ಎಂದು ಹೇಳಿದ್ದಾರೆ.
95ಕ್ಕೂ ಹೆಚ್ಚು ವಯಸ್ಸಾಗಿರುವ ನಾಗಮ್ಮ ಅವರಿಗೆ ವಯೋಸಹಜ ಅನಾರೋಗ್ಯ ಕಾಡುತ್ತಿದ್ದೆ. ಇಂತಹ ಸ್ಥಿತಿಯಲ್ಲಿ ಅಪ್ಪು ಸಾವಿನ ಸುದ್ದಿ ಅವರಿಗೆ ಅಘಾತ ಉಂಟು ಮಾಡುತ್ತದೆ. ಸಾವಿನ ಸುದ್ದಿಯನ್ನು ಕೇಳುವ ಸ್ಥಿತಿಯಲ್ಲಿ ಅವರಿಲ್ಲ. ಪುನೀತ್‌ರನ್ನು ಇವರು ನೆನಪಿಸಿಕೊಂಡಾಗಲೆಲ್ಲಾ ಮನೆಯಲ್ಲಿ ಸಿನಿಮಾಗಳನ್ನು ಹಾಕಿ ತೋರಿಸಿ ಇಂದೋ ನಾಳೆಯೋ ಬರುತ್ತಾರೆ. ಚಿತ್ರೀರಕರಣದಲ್ಲಿ ಬಿಜಿ ಇದ್ದಾರೆ ಎಂದು ಹೇಳಿ ಕುಟುಂಬಸ್ಥರು ಸಮಾಧಾನ ಮಾಡುತ್ತಿದ್ದಾರೆ.
ಈಗ ವಿಡಿಯೋ ಮಾಡಿ ಹುಟ್ಟುಹಬ್ಬಕ್ಕೆ ಶುಭಾಶಯ ಹೇಳಿಸಿ ನಾಗಮ್ಮ ನೆನಪಿನಲ್ಲಿ ಅಪ್ಪು ಜೀವಂತಿಕೆಯನ್ನು ಕಾಪಾಡಿಕೊಳ್ಳಲು ಕುಟುಂಬಸ್ಥರು ಪ್ರಯತ್ನಿಸಿದ್ದಾರೆ. ನಾಗಮ್ಮ ಅಪ್ಪುಗೆ ಶುಭಕೋರಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅಪ್ಪು ಆಗಮನಕ್ಕಾಗಿ ಕಾಯುತ್ತಿದೆ ಹಿರಿಯ ಜೀವ! ಪುನೀತ್​ ಅಗಲಿರುವ ವಿಷಯವೇ ಗೊತ್ತಿಲ್ಲ… ಮನಕಲಕುತ್ತೆ ಈ ಸ್ಟೋರಿ

ಕಾಡಿತು ಅಪ್ಪು ಅಗಲಿಕೆ ನೋವು… ಜೇಮ್ಸ್​ ನೋಡಲಾಗದೆ ಕಣ್ಣೀರು ಹಾಕುತ್ತಾ ಥಿಯೇಟರ್​ನಿಂದ ಹೊರ ಬಂದ ಫ್ಯಾನ್ಸ್!

ತುಮಕೂರಿನ ಲಾಡ್ಜ್​ನಲ್ಲಿ ಹೆಂಡ್ತಿ ಕಾಲನ್ನೇ ಕತ್ತರಿಸಿದ ಗಂಡ: ನೋವಲ್ಲೂ ಆಕೆ ಬಾಯ್ಬಿಟ್ಟ ರಹಸ್ಯ ಇಲ್ಲಿದೆ


ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
Sign in to your account
Please enter an answer in digits:three × 1 =
Remember me
