ಮೈಸೂರು:ಅಪರಿಚಿತ ಮಹಿಳೆಯೊಬ್ಬರು 9 ತಿಂಗಳ ಹೆಣ್ಣು ಮಗುವನ್ನು ಬಸ್​ ನಿಲ್ದಾಣದಲ್ಲಿ ಯುವಕನಿಗೆ ನೀಡಿ ನಾಪತ್ತೆಯಾಗಿರುವ ಅಮಾನವೀಯ ಪ್ರಕರಣ ರಾಯಚೂರಿನಲ್ಲಿ ನಡೆದಿದ್ದು, ಮೈಸೂರಿನಲ್ಲಿ ಬೆಳಕಿಗೆ ಬಂದಿದೆ.
ಮೈಸೂರು ಜಿಲ್ಲೆ ಎಚ್​.ಡಿ.ಕೋಟೆಯ ನಿವಾಸಿ ರಘು ಎಂಬುವರು ಕೆಲಸದ ನಿಮಿತ್ತ ರಾಯಚೂರಿಗೆ ತೆರಳಿದ್ದರು. ರಾಯಚೂರಿನಿಂದ ಮೈಸೂರಿಗೆ ಹಿಂದಿರುಗಲು ಭಾನುವಾರ ಮಧ್ಯಾಹ್ನ ಬಸ್​ ನಿಲ್ದಾಣದಲ್ಲಿದ್ದರು. ಈ ವೇಳೆ ಮಹಿಳೆಯೊಬ್ಬಳು ರಘು ಬಳಿ ಬಂದು ಶೌಚಗೃಹಕ್ಕೆ ಹೋಗಿ ಬರುವೆ. 5 ನಿಮಿಷ ಮಗುವನ್ನು ಕೂರಿಸಿಕೊಳ್ಳಿ ವಾಪಸ್​ ಬರುವೆ ಎಂದೇಳಿ ಮಗುವನ್ನು ಕೊಟ್ಟು ಹೋಗಿದ್ದಾಳೆ. ಆದರೆ, ಸುಮಾರು ಹೊತ್ತಾದರೂ ಆ ಮಹಿಳೆ ಹಿಂದಿರುಗದ ಕಾರಣ ರಘು ಇಡೀ ಬಸ್​ ನಿಲ್ದಾಣದಲ್ಲಿ ಹುಡುಕಾಡಿದ್ದಾರೆ.
ಬಳಿಕ ಬಸ್​ ಹೊರಡಲು ಸಿದ್ಧವಾಗಿದ್ದರಿಂದ ಮಗುವನ್ನು ತಮ್ಮ ಜತೆಯೇ ಮೈಸೂರಿಗೆ ಕರೆತಂದಿದ್ದಾರೆ. ಮೈಸೂರಿನಲ್ಲಿ ಸೋಮವಾರ ಬೆಳಗ್ಗೆ ಬಸ್​ ಇಳಿಯುತ್ತಿದ್ದಂತೆ ನೇರ ಲಷ್ಕರ್​ ಪೊಲೀಸ್​ ಠಾಣೆಗೆ ಹೋಗಿ ಮಗುವನ್ನು ಒಪ್ಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಲಷ್ಕರ್​ ಪೊಲೀಸರು ಮಗುವನ್ನು ರಕ್ಷಿಸಿ, ಆರೈಕೆ ಮಾಡಿ ಮಾನವೀಯತೆ ಮೆರೆದಿದ್ದಾರೆ. ನಂತರ ಮಗುವನ್ನು ಸರ್ಕಾರಿ ಬಾಲ ಮಂದಿರಕ್ಕೆ ಒಪ್ಪಿಸಿದ್ದಾರೆ.
ಇದು ಸತ್ತವರನ್ನು ಬದುಕಿಸೋ ಜಾತ್ರೆ! ಕೊಳ್ಳೇಗಾದಲ್ಲಿ ರಾತ್ರಿಯಿಡೀ ನಡೆಯಿತು ನರಬಲಿ ವಿಸ್ಮಯ…

ಬಿಕಿನಿ ಧರಿಸಿಕೊಂಡೇ ಬರ್ತ್​ ಡೇ ಕೇಕ್​ ಕತ್ತರಿಸಿದ ಆಮಿರ್​ ಖಾನ್​ ಪುತ್ರಿ ಇರಾ! ಫೋಟೋ ವೈರಲ್​, ನೆಟ್ಟಿಗರಿಂದ ಬಗೆಬಗೆಯ ಕಮೆಂಟ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 4 =
Remember me
