ಮಂಡ್ಯ:ಸುಮಲತಾ ದೊಡ್ಡವರು, ನನಗೆ ಅತ್ತಿಗೆ ಆಗಬೇಕು. ಅತ್ತಿಗೆ ತಾಯಿ ಸಮಾನ. ನಮ್ಮ ತಪ್ಪುಗಳನ್ನ ಹೊಟ್ಟೆಗೆ ಹಾಕಿಕೊಳ್ಳಬೇಕು. ನಾವು ಅವರಿಗೆ ಮಕ್ಕಳಿದ್ದ ಹಾಗೆ. ಮಕ್ಕಳನ್ನ ಭಯೋತ್ಪಾದಕರು ಅಂದ್ರೆ ಹೇಗೆ? ನಾವು ಮಂಡ್ಯದವ್ರು, ಸ್ವಲ್ಪ ಒರಟು. ಆದ್ರೆ ನಮ್ಮ ಹೃದಯ ಮೃದು. ನಾವು ಮಾತಾಡ್ಬಿಡ್ತೀವಿ.. ಕ್ಷಮೀಸಬೇಕು.. ನಮ್ಮ ತಪ್ಪುಗಳನ್ನ ಹೊಟ್ಟೆಗೆ ಹಾಕೊಳ್ಬೇಕು…
ಹೀಗಂತ ಜೆಡಿಎಸ್ ಶಾಸಕ ಸುರೇಶ್ ಗೌಡ ಮದ್ದೂರು ತಾಲೂಕಿನ ಕೊಪ್ಪದಲ್ಲಿ ಹೇಳಿದರು. ಅಂಬರೀಶ್ ಅವರು ಒರಟಾಗಿ ಮಾತನಾಡ್ತಿದ್ರು, ಹಾಗದ್ರೆ ಎಷ್ಟು ಸಲ ಜಗಳ ಮಾಡಬೇಕಿತ್ತು. ಅಂಬರೀಶಣ್ಣ ಬಯ್ಯಲಿ ಅಂತಾನೇ ಜನರು ಹೊಗ್ತಿದ್ರು. ಮನೆ ಅತ್ರ ಬಂದಾಗ ‘ಯಾಕೊ ಬಡೆತದೆ ಯಾಕೊ ಬಂದಿದೆ’ ಅಂತ ಹೇಳಿಲ್ಲ ಅಂದ್ರೆ ನೆಮ್ಮದಿ ಇರ್ತಿರಲಿಲ್ಲ. ಜನರು ಅಂಬರೀಶಣ್ಣ ಬಯ್ದಿಲ್ಲಾ ಅಂದ್ರೆ ನಮ್ಮನ ಮರ್ತಿದ್ದಾರೆ ಅನ್ಕೊತಿದ್ರು. ಅಂತಹ ಮನೆಯಲ್ಲಿರುವವರು ಸಣ್ಣಪುಟ್ಟ ಪದಗಳನ್ನು ಇಷ್ಟು ದೊಡ್ಡದು ಮಾಡ್ಕೊಂಡು ಕೂತಿದ್ದಾರೆ. ಸುಮಲತಾ ನನಗೆ ಅತ್ತಿಗೆ, ಅತ್ತಿಗೆ ತಾಯಿ ಸಮಾನ. ನಾವೇನು ಪಾಕಿಸ್ತಾನದಿಂದ ಬಂದಿದ್ದೀವಾ ಭಯೋತ್ಪಾದಕರು ಹಾಗೋಕೆ. ನಾವು ಭಯೋತ್ಪಾದಕ ಕೆಲಸ ಮಾಡ್ತಿದ್ದೀವಾ? ಸುಮಲತಾ ಅವರ ಮನೆಯಲ್ಲಿ ನೀರು- ಕಾಫೀ- ಟೀ ಕುಡಿದಿದ್ದೇವೆ. ಅವರು ಕೊಡ್ತಿದ್ರೋ ಬಿಡ್ತಿದ್ರೋ ನಾನೇ ಹೋಗಿ ನೀರು ಕುಡಿತಿದ್ದೆ ಎಂದರು.
ಆತ್ಮಪೂರಕವಾಗಿ ಹೇಳ್ತೀನಿ, ನಮ್ಮ ಕ್ಷೇತ್ರದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತಿದೆ. ಯಾರೇ ಅಕ್ರಮ ಗಣಿಗಾರಿಕೆ ನಡೆಸ್ತಿದ್ರೂ ನಿಲ್ಲಿಸಲಿ. ಈ ಎಪಿಸೋಡ್​ಗೆ ನಿಜವಾದ ಕಾರಣ ಭೂ ವಿಜ್ಞಾನಿ ಅಧಿಕಾರಿ ವರ್ಗಾವಣೆ. ಅದನ್ನ ಸಿಬಿಐ ತನಿಖೆಗೆ ಕೊಟ್ರೆ ಸಾವಿರಾರು ಕೋಟಿ ಅವ್ಯವಹಾರ ಬಯಲಾಗುತ್ತೆ! ಭೂ ವಿಜ್ಞಾನಿ ಅಧಿಕಾರಿ ವರ್ಗಾವಣೆ ಹಾಗಿದ್ದಾರೆ, ಅವರು ಅವರ ಕುಟುಂಬದವರು, ಅವರಿಗೆ ಸಹಾಯ ಮಾಡಿದವರನ್ನ ತನಿಖೆ ಮಾಡ್ಸುದ್ರೆ ನಿಜವಾದ ಅಕ್ರಮ ಗಣಿಗಾರಿಕೆ ಎಲ್ಲಿ ನಡೆಯಿತು? ಯಾರ ಯಾರ ಮನೆಯಲ್ಲಿ ನಡೆಯಿತು? ಎಲ್ಲವೂ ಸಿಗುತ್ತದೆ ಎಂದರು.
ಅರುಣಾಕುಮಾರಿಯ ಪ್ರೇಮ್​ಕಹಾನಿ ಬಿಚ್ಚಿಟ್ಟ ನಟ ದರ್ಶನ್​! 9 ವರ್ಷ ಚಿಕ್ಕವನೊಂದಿಗೆ ಲವ್ವಿಡವ್ವಿ ಶುರು ಮಾಡಿದ್ದಳಂತೆ…

ಪ್ರಿಯಕರನ ಮನೆಯಲ್ಲಿ ಯುವತಿ ಶವ ಪತ್ತೆ! ಮೃತಳ ಪೋಷಕರಿಂದ ನಡೆದೇ ಹೋಯ್ತು ಘೋರ ದುರಂತ

ಅಪ್ಪನ ಪಾರ್ಥಿವ ಶರೀರವನ್ನು ಸೇನಾ ಸಮವಸ್ತ್ರ ಹಾಕಿಕೊಂಡು ಸ್ವೀಕರಿಸಿದ ಮಗ!

Sign in to your account
Please enter an answer in digits:sixteen − thirteen =
Remember me
