ಬಾಗಲಕೋಟೆ:ಮುಧೋಳ ತಾಲೂಕು ಪಂಚಾಯಿತಿ ಕಚೇರಿ ಆವರಣದ ಕೊಠಡಿಯೊಂದರಲ್ಲಿ ಗುತ್ತಿಗೆ ನೌಕರನೊಬ್ಬ ಸೋಮವಾರ ರಾತ್ರಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮಂಗಳವಾರ ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದೆ.
ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಚಿಕ್ಕಹೆಸರೂರ ಗ್ರಾಮದ ಬಸಣ್ಣ ಪಟ್ಟೇದ(42) ಮೃತ ದುರ್ದೈವಿ. ಮುಧೋಳ ನಗರದಲ್ಲಿ ಬಸಣ್ಣ ಪಟ್ಟೇದ ಗುತ್ತಿಗೆ ಆಧಾರದ ಮೇಲೆ ರಾಜೀವ್ ವಸತಿ ನಿಗಮದಲ್ಲಿ ಮನೆಗಳ ಜಿಪಿಎಸ್ ಕಾರ್ಯ ಮಾಡುತ್ತಿದ್ದರು. ಸೋಮವಾರ ರಾತ್ರಿ ತಾಪಂ ಕಚೇರಿಯ ಆವರಣದ ತನ್ನ ಕೊಠಡಿಯಲ್ಲೇ ಬಸಣ್ಣ ನೇಣಿಗೆ ಕೊರಳೊಡ್ಡಿದ್ದಾರೆ.
ಗಂಡನ ಸಾವಿನ ಸುದ್ದಿ ಕೇಳಿ ಕಂಗಾಲಾದ ಪತ್ನಿ, ಹತ್ತು ವರ್ಷದಿಂದ ಮುಧೋಳ ತಾಲೂಕು ಪಂಚಾಯಿತಿಯಲ್ಲಿ ಕೆಲಸ ಮಾಡುತ್ತಿದ್ದ ಇವರ ಸಾವಿಗೆ ವೇತನ ನೀಡದಿರುವುದೇ ಕಾರಣ ಎಂದು ಆರೋಪಿಸಿದ್ದಾರೆ.
ಏಳು ವರ್ಷದಿಂದ ವೇತನ ಆಗಿರಲಿಲ್ಲ. ಇದರಿಂದ ಕುಟುಂಬ ಆರ್ಥಿಕ ಸಂಕಷ್ಟಕ್ಕೀಡಾಗಿತ್ತು. ಕೆಲಸ ಖಾಯಂ ಮಾಡಬೇಕು ಎಂದು ಎಷ್ಟೇ ಮನವಿ ಮಾಡಿದರೂ ಆಗಿರಲಿಲ್ಲ. ಸಮಯಕ್ಕೆ ಸರಿಯಾಗಿ ವೇತನ ಆಗದೆ, ಕೆಲಸವೂ ಖಾಯಂ ಆಗದೆ ಜೀವನ ನಡೆಸಲು ಬಸಣ್ಣ ಪಟ್ಟೇದ ಬಳಲುತ್ತಿದ್ದರು ಎಂದು ಪತ್ನಿ ಕವಿತಾ ಅಳಲು ತೋಡಿಕೊಂಡಿದ್ದಾರೆ. ಸ್ಥಳಕ್ಕೆ ಮುಧೋಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೈಸೂರಲ್ಲಿ 2ನೇ ಪತ್ನಿಯ ರುಂಡ-ಮುಂಡ ಕತ್ತರಿಸಿ ಭೀಕರ ಕೊಲೆ! ತಂದೆಯ ಕರಾಳ ಮುಖ ಬಿಚ್ಚಿಟ್ಟ 20 ವರ್ಷದ ಮಗಳು

ಟಿ.ನರಸೀಪುರದಲ್ಲಿ ತಾಯಿ-ಮಕ್ಕಳ ದುರಂತ ಅಂತ್ಯ: ಬಾಳಿ ಬದುಕಬೇಕಿದ್ದವರನ್ನ ಸಾವಿನಕೂಪಕ್ಕೆ ದೂಡಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − one =
Remember me
