ಚಿಕ್ಕಮಗಳೂರು:ಪಿಎಸ್​ಐ ರವೀಶ್​ ಅವರಿಗೆ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಅವಾಜ್​ ಹಾಕಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಆಡಿಯೋದಲ್ಲಿ ಏನಿದೆ ನೋಡಿ…
ಶಾಸಕ:ಹಲೋ ಯಾರಪ್ಪ ಇದು ನಂಬರ್ರವೀಶ್:ನಾನು ರವೀಶ್ ಸಾರ್ಶಾಸಕ:ಈಗ ಎಲ್ಲಿದ್ದೀಯಪ್ಪ ನೀನು?ರವೀಶ್:ಸ್ಟೇಷನ್​ನಲ್ಲಿ‌ ಸರ್ಶಾಸಕ:ಇಲ್ಲಿಗೆ ಬರ್ಬೆಡ ಅಂದಿದ್ನಲ್ಲ ನಾನುರವೀಶ್:ಐಜಿ ಸಾರ್ ತಗೋ ಅಂತ ಹೇಳಿದ್ರು ಸರ್ಶಾಸಕ:ವಾಪಸ್ ಹೋಗಲೇ ‌ಮರ್ಯಾದೆಯಿಂದ ವಾಪಸ್ಸು ಹೋಗು..ರವೀಶ್:ನಾಳೆ ಬಂದ್ ನಿಮ್ಮನ್ನು ಕಾಣ್ತೀನಿಶಾಸಕ:ನನಗೆ ವಾಪಸ್ಸು ಕಳಿಸುವುದು ಗೊತ್ತು, ಯಾರ್ಯಾರಿಗೆ ಎಷ್ಟೆಷ್ಟು ಕೊಟ್ಟಿದ್ದೀಯಾ ಅಂತಾನೂ ಗೊತ್ತುರವೀಶ್:ಇಲ್ಲ ಸಾರ್ ಯಾರಿಗೂ ಏನೂ ಕೊಟ್ಟಿಲ್ಲ, ಐಜಿ ಹೇಳಿದ್ರು ಅಷ್ಟೆಶಾಸಕ:ಯಾವನ್ ಐಜಿ? ಮೂಡಿಗೆರೆಗೆ ನಾನೇ ದೊಡ್ಡವನು, ಮರ್ಯಾದೆಯಿಂದ ವಾಪಸ್ ಹೋಗು
ಹೀಗೆ ಸಂಭಾಷಣೆಯುಳ್ಳ ಆಡಿಯೋ ವೈರಲ್​ ಆದ ಬೆನ್ನಲ್ಲೇ ಈ ಕರಿತು ಫೇಸ್​ಬುಕ್​ ಮೂಲಕ ಸ್ಪಷ್ಟನೆ ನೀಡಿರುವ ಶಾಸಕರು. ಇದೆಲ್ಲವೂ ನನ್ನ ವಿರೋಧಿಗಳು ಮಾಡಿರೋ ಕುತಂತ್ರ. ಹೆಚ್ಚು ಕೂಲಿ ಕಾರ್ಮಿಕರಿದ್ದು, ನೀವು ಮಂಡ್ಯದವರು ಆಗಿರೋದ್ರಿಂದ ಜನರನ್ನು ಸಂಭಾಳಿಸೋದು ಕಷ್ಟ ಎಂದು ತಿಳಿ ಹೇಳಿದ್ದೆ. ನನ್ನ ಗಮನಕ್ಕೆ ಬಾರದೇ ನನ್ನ ಕ್ಷೇತ್ರದಲ್ಲಿ ಕೆಲಸಕ್ಕೆ ಹಾಜರಾಗಿದ್ದರು. ನನ್ನ ಕ್ಷೇತ್ರದ ಕಾರ್ಯಕರ್ತರು ಮತ್ತು ಮತದಾರರು ಒತ್ತಡ ಹಾಕಿದ್ದರಿಂದ ನಾನೇ ಮಾತನಾಡಬೇಕಿದೆ. ಇದೀಗ ಒಕ್ಕಲಿಗ ವಿರೋಧಿ ಎಂದು ಹೆಣೆಯುತ್ತಿದ್ದು, ಇದು ಸತ್ಯಕ್ಕೆ ದೂರವಾಗಿದೆ. ನನ್ನ ವಿರೋಧಿಗಳು ಹೆಣೆದಿರುವ ಕುತಂತ್ರವನ್ನು ದಯವಿಟ್ಟು ಯಾರು ನಂಬಬಾರದು ಎಂದು ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾರೆ.
ಕನ್ನಡದ ಕೋಟ್ಯಧಿಪತಿ ಖ್ಯಾತಿಯ ಲೈನ್​ಮನ್ ಆತ್ಮಹತ್ಯೆ! ಗೃಹಪ್ರವೇಶಕ್ಕೂ 2 ದಿನ ಮೊದಲೇ ದುರಂತ, ಆ ರಾತ್ರಿ ತೋಟದಲ್ಲಿ…

ನಾದಿನಿ ಜತೆ ಸರಸವಾಡಲು ಪತ್ನಿಯನ್ನೇ ಕೊಂದ! ವಿಚಾರಣೆ ವೇಳೆ ಬಯಲಾಯ್ತು ಅಸಹ್ಯ… ನೆಲಮಂಗಲದಲ್ಲಿ ಹೀನ ಕೃತ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × four =
Remember me
