ಮುಂಡಗೋಡ:ಇಲ್ಲಿನ ತಹಸೀಲ್ದಾರ್ ಶ್ರೀಧರ ಮುಂದಲಮನೆ ಅವರ ಬಂಧನಕ್ಕೆ ಕಲಬುರಗಿಯ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಎಸ್.ಪಿ. ರಶ್ಮಿ ಅವರು ಮುಂಡಗೋಡಕ್ಕೆ ಆಗಮಿಸಿದ್ದಾರೆ.
2014ನೇ ಬ್ಯಾಚ್​ನಲ್ಲಿ ಕೆಎಎಸ್​ ಅಧಿಕಾರಿಯಾಗಿ ಆಯ್ಕೆಯಾಗಿದ್ದ ಕೊಪ್ಪಳ ಜಿಲ್ಲೆ ಯಲಬುರ್ಗಾ ಸನಿಹದ ಕುಕನೂರು ಗ್ರಾಮದ ಶ್ರೀಧರ ಮುಂದಲಮನೆ ಸದ್ಯ ಮುಂಡಗೋಡ ತಹಸೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಕಲಿ ಜಾತಿ ಪ್ರಮಾಣಪತ್ರ ಸಲ್ಲಿಸಿ ಸರ್ಕಾರಿ ನೌಕರಿ ಪಡೆದಿದ್ದಾರೆ ಎಂಬ ದೂರು ದಾಖಲಾಗಿದ್ದು, ತಹಸೀಲ್ದಾರ್​ ಬಂಧನಕ್ಕೆ ರಶ್ಮಿ ಸೇರಿ ನಾಲ್ವರು ಶುಕ್ರವಾರ ಬೆಳಗಿನ ಜಾವ ಆಗಮಿಸಿದ್ದಾರೆ. ತಹಸೀಲ್ದಾರ್ ಮನೆ ಮುಂದೆ ಹಾಗೂ ಹಿಂದೆ ಕಾಯುತ್ತಾ ಕುಳಿತ್ತಿದ್ದಾರೆ. 10 ಗಂಟೆಯಾದರೂ ತಹಸೀಲ್ದಾರ್​ರ ಮನೆ ಬಾಗಿಲು ತೆರೆದಿಲ್ಲ.
ಶ್ರೀಧರ ಮುಂದಲಮನೆ ಅವರು ತಾನು ವಾಲ್ಮೀಕಿ ಎಂದು ನಕಲಿ ಜಾತಿ ಪ್ರಮಾಣಪತ್ರ ನೀಡಿ ಕೆಲಸಕ್ಕೆ ಸೇರಿದ್ದಾರೆ ಎಂದು ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ 2022ರ ಫೆಬ್ರವರಿ​ 12ರಂದು ಗೀರೀಶ ರೊಡಕರ ಎಂಬುವರು ಪ್ರಕರಣ ದಾಖಲಿಸಿದ್ದಾರೆ.
ಶಾಲಾ ಮಕ್ಕಳಿಗೆ ಕೆಜಿಎಫ್​ ಬಾಬು ನೀಡಿದ್ದ ಚೆಕ್​ಗಳು ಬೌನ್ಸ್!​ ಸಂಕಷ್ಟದಲ್ಲಿ ವಿದ್ಯಾರ್ಥಿಗಳು

ದೊಡ್ಡಪ್ಪನಿಂದಲೇ ಅತ್ಯಾಚಾರ, ತೀವ್ರ ರಕ್ತಸ್ರಾವವಾಗಿ 2 ವರ್ಷದ ಕಂದಮ್ಮ ಸಾವು: ಆನೇಕಲ್​ನಲ್ಲಿ ಅಮಾನುಷ ಘಟನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + 10 =
Remember me
