ವಿಜಯಪುರ:ಬಿ.ಎಸ್​.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರಿಗೆ ನಾಯಕನಾಗುವ ಎಲ್ಲ ಕ್ವಾಲಿಟಿಯೂ ಇದೆ. ಯಾರ ಹಣೆ ಬರಹದಲ್ಲಿ ಏನು ಬರೆದಿದೆಯೋ ಗೊತ್ತಿಲ್ಲ. ಸಿಎಂ ಮಗ ಸಿಎಂ ಆದರೆ ತಪ್ಪೇನು? ವಿಜಯೇಂದ್ರ ಸಿಎಂ ಆಗಲಿ ಎಂದು ಸಚಿವ ಮುರುಗೇಶ್​ ನಿರಾಣಿ ಹೇಳಿದ್ದಾರೆ.
ವಿಜಯಪುರದಲ್ಲಿ‌ ಮಾತನಾಡಿದ ನಿರಾಣಿ, ನಮ್ಮ ರಾಜ್ಯದಲ್ಲಿದ್ದವರು ಪ್ರಧಾನಿಯಾದರು. ಮುಖ್ಯಮಂತ್ರಿ ಮಗ ಮುಖ್ಯಮಂತ್ರಿ ಆದ್ರೆ ಏನ್ ತಪ್ಪಿದೆ? ಈ ಬಗ್ಗೆ ನಿರ್ಧರಿಸಲು ರಾಜ್ಯ-ರಾಷ್ಟ್ರ ನಾಯಕರಿದ್ದಾರೆ. ಸಿಎಂ ಆಗಲು ವಿಜಯೇಂದ್ರಗೆ ಎಲ್ಲ ಕ್ವಾಲಿಟಿಯೂ ಇದೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ ಎಂದರು.
ವಿಜಯೇಂದ್ರಗೆ ಯಾವ ಜವಾಬ್ದಾರಿ ನೀಡಬೇಕು ಎಂದು ಹೈಕಮಾಂಡ್ ನಿರ್ಧರಿಸುತ್ತೆ. ಸಚಿವ ಸಂಪುಟ ವಿಸ್ತರಣೆ ಪಕ್ಷದ ನಾಯಕರಿಗೆ ಬಿಟ್ಟದ್ದು ಎಂದ ನಿರಾಣಿ,ಕಾಂಗ್ರೆಸ್ ನಾಯಕರು ಮೊದಲು ತಮ್ಮ ಪಕ್ಷವನ್ನು ಸರಿ ಮಾಡಿಕೊಳ್ಳಲಿ. ಯಡಿಯೂರಪ್ಪ ನಮ್ಮ ಪಕ್ಷದ ಮುಖಂಡರು, ಈ ಬಗ್ಗೆ ಎರಡು ಮಾತಿಲ್ಲ. ಒಂದು ಕುಟುಂಬದಲ್ಲಿ ಮೂರು ಸೀಟ್ ಇದೆ. ದೇಶದಲ್ಲೇ ಯಾರಿಗೂ ಕೊಟ್ಟಿಲ್ಲ, ಇದು ಎಲ್ಲರಿಗೂ ಗೊತ್ತಿರೋದೆ. ವಿಜಯೇಂದ್ರ ಹೆಚ್ಚಿನ ಕೆಲಸ ಮಾಡಲಿ, ಬೆಳೆಯಲಿ ಎನ್ನುವುದು ಇದೆ. ಮುಂದೆ ಯಡಿಯೂರಪ್ಪರ, ಸಂಘ ಪರಿವಾರ, ಹಿರಿಯರ ಆಶೀರ್ವಾದ, ಮಾರ್ಗದರ್ಶನದಿಂದ ವಿಜಯೇಂದ್ರ ಎತ್ತರಕ್ಕೆ ಬೆಳೆಯುತ್ತಾನೆ ಎನ್ನುವ ಮೂಲಕ ಬಿಎಸ್​ವೈರನ್ನು ಸೈಡ್‌ಲೈನ್ ಮಾಡಲಾಗಿದೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದರ ವಿರುದ್ಧ ವಾಗ್ದಾಳಿ ನಡೆಸಿದರು.
ನಗರಸಭೆ ಸದಸ್ಯನ ಹತ್ಯೆ: ಭಕ್ತರ ಸೋಗಲ್ಲಿ ದೇಗುಲದ ಎದರೇ ಕೊಚ್ಚಿ ಕೊಲೆ, ಗ್ರಾಪಂ ಮಾಜಿ ಸದಸ್ಯೆ ಮೇಲೆ ಖಾಕಿ ಕಣ್ಣು

ಸಿಂದಗಿಯಲ್ಲಿ ಮಟಮಟ ಮಧ್ಯಾಹ್ನವೇ ಅಕ್ಕ-ತಮ್ಮನ ಭೀಕರ ಹತ್ಯೆ! ಕಲ್ಲಿನಿಂದ ಜಜ್ಜಿ ವಿಕೃತಿ ಮೆರೆದ ಗಂಡ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 5 =
Remember me
