ಮೈಸೂರು:ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನಲ್ಲಿ ವಿವಿಧ ಹುದ್ದೆಗಳಿಗೆ ನಡೆದ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಕುರಿತು ಬ್ಯಾಂಕ್ ಮಾಜಿ ಅಧ್ಯಕ್ಷ ಎಸ್. ಚಂದ್ರಶೇಖರ್ ಸೇರಿ 12 ಜನರ ವಿರುದ್ಧ ಮಂಡಿ ಪೊಲೀಸ್ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಾಗಿದೆ.
ಬ್ಯಾಂಕ್‌ನ ಹಿರಿಯ ವ್ಯವಸ್ಥಾಪಕ, ಸಹಾಯಕ ವ್ಯವಸ್ಥಾಪಕ, ಕಾನೂನು ಅಧಿಕಾರಿ/ಸಲಹೆಗಾರರು, ಹಿರಿಯ ಸಹಾಯಕರು, ಕಿರಿಯ ಸಹಾಯಕರು ಮತ್ತು ಗುಮಾಸ್ತ ಹುದ್ದೆಗಳಿಗೆ 2017-18ರಲ್ಲಿ ನೇಮಕಾತಿ ನಡೆದಿತ್ತು. ಈ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ದೇವರಾಜ ಮೊಹಲ್ಲಾದ ನಿವಾಸಿ, ನೊಂದ ಅಭ್ಯರ್ಥಿ ಆರ್. ಮಹೇಶ್ ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ.
ಯಾರ ವಿರುದ್ಧ ಎಫ್‌ಐಆರ್?:ಬ್ಯಾಂಕಿನ ಅಂದಿನ ಅಧ್ಯಕ್ಷ ಎಸ್. ಚಂದ್ರಶೇಖರ್, ಅಂದಿನ ಉಪಾಧ್ಯಕ್ಷ ಎನ್. ಮಹದೇವಪ್ಪ, ಸಹಕಾರ ಸಂಘಗಳ ನಿಬಂಧಕರ ಪ್ರತಿನಿಧಿ ಶ್ರೀಧರ್, ಸಹಕಾರ ಸಂಘಗಳ ಅಪರ ನಿಬಂಧಕ (ನಿವೃತ್ತ) ಯದುನಾಥ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ನಾಗರಾಜ್, ಆಡಳಿತ ಮತ್ತು ಸಿಬ್ಬಂದಿ ವಿಭಾಗದ ಹಿರಿಯ ವ್ಯವಸ್ಥಾಪಕ ಎಂ. ಹಿರಿಯಣ್ಣ, ಸಹಾಯಕ ವ್ಯವಸ್ಥಾಪಕ ಎ.ಎಲ್. ರಾಜುಕುಮಾರ್, ಸಿಬಿಎಸ್ ವಿಭಾಗದ ಹಿರಿಯ ಸಹಾಯಕರಾದ ಜಿ. ಗೋಪಾಲಕೃಷ್ಣ, ಎಲ್. ರಾಜಕುಮಾರ, ಆಂತರಿಕ ಲೆಕ್ಕ ಪರಿಶೋಧನ ವಿಭಾಗದ ಸಹಾಯಕ ವ್ಯವಸ್ಥಾಪಕ ಎನ್. ಜಗದೀಶ, ಹಿರಿಯ ಸಹಾಯಕರಾದ ಎಚ್.ಎನ್. ರವಿ, ಎಸ್.ಜಯೇಂದ್ರ ವಿರುದ್ಧ ಪ್ರಕರಣ ದಾಖಲಾಗಿದ್ದು, ಇವರೆಲ್ಲರೂ ನೇಮಕಾತಿ ಸಮಿತಿಯಲ್ಲಿದ್ದರು.
ದೂರಿನಲ್ಲೇನಿದೆ?:ಬ್ಯಾಂಕ್ ಹೊಸದಾಗಿ ತೆರೆಯಲು ಉದ್ದೇಶಿಸಿರುವ 14 ಶಾಖೆಗಳಿಗೆ ಹಾಲಿ ಸಿಬ್ಬಂದಿಯನ್ನೇ ಬಳಸಿಕೊಳ್ಳಬೇಕು ಎಂದು ಸಹಕಾರ ಸಂಘಗಳ ನಿಬಂಧಕರ ನಿರ್ದೇಶನವಿದ್ದರೂ ಸುಳ್ಳು ಮಾಹಿತಿ ನೀಡಿ ಸಂಬಂಧಪಟ್ಟ ಇಲಾಖೆಗೆ 2017ರ ಜೂನ್​ 24ರಂದು ಪತ್ರ ಬರೆದು ಸಿಬ್ಬಂದಿ ನೇಮಕಾತಿ ಮಾಡಲು 2017ರ ಜೂನ್​ 29ರಂದು ಅನುಮತಿ ಪಡೆದರು. 61 ಸಿಬ್ಬಂದಿ ನೇಮಕಾತಿಗೆ 2017ರ ಆಗಸ್ಟ್​ 24ರಂದು ಪತ್ರಿಕಾ ಪ್ರಕಟಣೆ ನೀಡಲಾಯಿತು. ನೇಮಕಾತಿಯಲ್ಲಿ ಮೀಸಲಾತಿ ನಿಯಮಗಳನ್ನು ಪಾಲಿಸಿಲ್ಲ. ಅಲ್ಲದೆ ಬ್ಯಾಂಕ್ ಆಡಳಿತ ಮಂಡಳಿ ಸಭೆಯ ಒಪ್ಪಿಗೆಯನ್ನು ಸಹ ಪಡೆಯಲಿಲ್ಲ ಎಂದು ಆರ್. ಮಹೇಶ್ ದೂರಿನಲ್ಲಿ ಆರೋಪಿಸಿದ್ದಾರೆ.
ಸಿದ್ದರಾಮೋತ್ಸವ ಹಿನ್ನೆಲೆ ಲಾಡ್ಜ್‌, ಹೋಟೆಲ್​, ರೆಸ್ಟೋರೆಂಟ್‌ಗಳು ಹೌಸ್‌ಫುಲ್! ಕೋಟ್ಯಂತರ ರೂಪಾಯಿ ವಹಿವಾಟು…

ಮೃತಪಟ್ಟ 30 ವರ್ಷದ ಬಳಿಕ ವಿವಾಹ! ದಕ್ಷಿಣ ಕನ್ನಡದಲ್ಲಿ ಅದ್ದೂರಿಯಾಗಿ ನಡೆಯಿತು ಪ್ರೇತಗಳ ಮದ್ವೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 5 =
Remember me
