ಮೈಸೂರು:ಪತ್ನಿಯನ್ನು ಸಾವಲ್ಲೂ ಪತಿ ಹಿಂಬಾಲಿಸಿದ್ದು, ಪುಟ್ಟ ಮಕ್ಕಳಿಬ್ಬರು ಅನಾಥವಾಗಿದ್ದಾರೆ. ಇಬ್ಬರ ಸಾವಿಂದ ಕಂಗೆಟ್ಟ ಕುಟುಂಬಸ್ಥರ ಆಕ್ರಂದ ಮುಗಿಲು ಮುಟ್ಟಿದೆ. ಆಟವಾಡುತ್ತಾ ಮಧ್ಯೆ ಮಧ್ಯೆ ‘ನನ್ನ ಅಪ್ಪ-ಅಮ್ಮ ಎಲ್ಲಿಗೋದ್ರು? ಯಾವಾಗ ಬರ್ತಾರೆ ಅಂಕಲ್​?’ ಎಂದು ಪುಟ್ಟ ಕಂದ ಕೇಳುತ್ತಿದ್ದ ದೃಶ್ಯ ಮನಕಲಕುತ್ತೆ.
ಇಂತಹ ಕರುಣಾಜನಕ ಘಟನೆ ಮೈಸೂರು ತಾಲೂಕಿನ ಹಂಚ್ಯಾ ಗ್ರಾಮದಲ್ಲಿ ಸಂಭವಿಸಿದೆ. ಹಂಚ್ಯಾ ಗ್ರಾಮದ ಮಹೇಶ್ ಜತೆ ಗಾಯತ್ರಿ ಎಂಬುವರು ಮದುವೆ ಆಗಿದ್ದರು. ಇವರ ದಾಂಪತ್ಯ ಅನ್ಯೋನ್ಯವಾಗಿತ್ತು. ಇವರಿಗೆ ಇಬ್ಬರು ಮಕ್ಕಳೂ ಇದ್ದಾರೆ. ಎಲ್ಲವೂ ಚೆನ್ನಾಗಿದೆ, ಸುಖ ಸಂಸಾರಕ್ಕೆ ಮತ್ತೇನು ಬೇಡ ಎಂಬಂತೆ ಬದುಕುತ್ತಿದ್ದವರ ಬಾಳಲ್ಲಿ ವಿಧಿ ಆಟವಾಡಿಬಿಟ್ಟಿದೆ.
ಎರಡು ತಿಂಗಳ ಹಿಂದೆ ಮಹೇಶ್ ಪತ್ನಿ ಗಾಯತ್ರಿ ಬಿಪಿ ಮಾತ್ರೆಯ ಬದಲಾಗಿ ಬೇರೆ ಮಾತ್ರ ಸೇವಿಸಿ ದುರಂತ ಅಂತ್ಯ ಕಂಡಿದ್ದಾರೆ. ಪ್ರೀತಿಯ ಮಡದಿಯ ಸಾವಿಂದ ಕಂಗೆಟ್ಟ ಪತಿ ಮಹೇಶ್​, ನಿತ್ಯ ನೋವಿನಿಂದಲೇ ಬಳಲುತ್ತಿದ್ದ. ಪತ್ನಿಯ ಸಾವಿನ ನೋವು ಸಹಿಸಲಾಗದೇ ಎರಡು ಬಾರಿ ಆತ್ಮಹತ್ಯೆಗೂ ಯತ್ನಿಸಿದ್ದ. ಆಗ ಸ್ಥಳೀಯರು ಆತನನ್ನು ತಡೆದಿದ್ದರು. ಮನೆಯವರು ಧೈರ್ಯ ತಂದುಕೊಳ್ಳುವಂತೆ ಎಷ್ಟೇ ಮನವೊಲಿಸಿದರೂ ಪ್ರಯೋಜನವಾಗಲಿಲ್ಲ.
ಇಂದು(ಭಾನುವಾರ) ತೋಟವೊಂದರಲ್ಲಿ ಗಿಡಕ್ಕೆ ಸಿಂಪಡಿಸುವ ಕ್ರಿಮಿನಾಶಕ ಸೇವಿಸಿ ಸಾವಿನ ಮನೆಯ ಕದ ತಟ್ಟಿದ್ದಾನೆ. ಕ್ರಿಮಿನಾಶಕ ಕುಡಿದು ಸಹೋದರನಿಗೆ ಕರೆ ಮಾಡಿದ ಮಹೇಶ್​, ‘ನನ್ನ ಮಕ್ಕಳನ್ನು ಚೆನ್ನಾಗಿ ನೋಡಿಕೋ… ನನಗೆ ಗಾಯತ್ರಿ ನೆನಪು ಕಾಡುತ್ತಿದೆ. ನಾನು ಅವಳ ಬಳಿಗೇ ಹೋಗುತ್ತಿರುವೆ’ ಎಂದಿದ್ದಾನೆ. ಕೂಡಲೇ ಸ್ಥಳಕ್ಕೆ ಓಡೋಡಿ ಬಂದ ಕುಟುಂಬಸ್ಥರು ಮಹೇಶ್​ನನ್ನು ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಿದ್ದರಾದರೂ ಅಷ್ಟರಲ್ಲಿ ಪ್ರಾಣಪಕ್ಷಿ ಹಾರಿಹೋಗಿತ್ತು.
ಜಿಮ್​ನಲ್ಲೇ ಮಹಿಳೆ ಸಾವು: ವರ್ಕೌಟ್​ನಿಂದ ಹೃದಯಾಘಾತ? ವೈದ್ಯರು ಕೊಟ್ಟ ಮಹತ್ವದ ಮಾಹಿತಿ ಇಲ್ಲಿದೆ

ಮಹಿಳೆಯ ಕಾಟ ಸಹಿಸಲಾಗದೆ ಯುವಕ ಆತ್ಮಹತ್ಯೆ: ಸಾವಿಗೂ ಮುನ್ನ ಆತ ಮಾಡಿಟ್ಟ ವಿಡಿಯೋದಲ್ಲಿದೆ ರಹಸ್ಯ

ಒಂದೇ ದಿನ ವಿದ್ಯಾರ್ಥಿ-ಶಿಕ್ಷಕಿ ನಾಪತ್ತೆ! ಮದ್ವೆ ಆಗಿ ಬಾಲಕನ ಜತೆ ಸಂಸಾರ ನಡೆಸುತ್ತಿದ್ದಾಕೆ ಸಿಕ್ಕಿಬಿದ್ದದ್ದೇ ರೋಚಕ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:five × three =
Remember me
