ಮೈಸೂರು:ನಾಡಹಬ್ಬ ಮೈಸೂರು ದಸರಾ ಹಿನ್ನೆಲೆ ಅ.1ರಂದು ನಗರದ ಜೆ.ಕೆ.ಮೈದಾನದಲ್ಲಿ ರಾಜ್ಯಮಟ್ಟದ ಹಾಲು ಕರೆಯುವ ಸ್ಪರ್ಧೆ ನಡೆಯಲಿದೆ.
ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಗೋಪಾಲಕರು ಸೆ.29ರಂದು ಹಸುಗಳೊಂದಿಗೆ ಆಗಮಿಸಬೇಕು. ಸೆ.30ರಂದು ವಿಶ್ರಾಂತಿ, ಅ.1ರಂದು ಸ್ಪರ್ಧೆ ನಡೆಯಲಿದೆ.
ಹಾಲು ಕರೆಯುವ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು ಬಹುಮಾನ ನೀಡಲಾಗುತ್ತದೆ. ಪ್ರಥಮ ಬಹುಮಾನ 50 ಸಾವಿರ ರೂ., ದ್ವಿತೀಯ ಬಹುಮಾನ 40 ಸಾವಿರ ರೂ., ತೃತೀಯ ಬಹುಮಾನ 30 ಸಾವಿರ ರೂ., ಸಮಾಧಾನಕರ ಬಹುಮನಾವಾಗಿ 20 ಸಾವಿರ ರೂಪಾಯಿ ನೀಡಲಾಗುತ್ತೆ.
ಹಸುಗಳ ವಾಸ್ತವ್ಯ ಸ್ಥಳದಲ್ಲಿ ಮಳೆ ನೀರು ಸೋರದಂತೆ ಶಾಮಿಯಾನ ಹಾಕಬೇಕು. ಕುಡಿಯುವ ನೀರು ವ್ಯವಸ್ಥೆ ಕಲ್ಪಿಸಬೇಕು. ಡ್ರಮ್​ ನೀಡಬೇಕು. ಹಸಿಹುಲ್ಲು, ಒಣಹುಲ್ಲು ನೀಡಬೇಕು. ಸೊಳ್ಳೆ ನಿಯಂತ್ರಿಸಬೇಕು. ಶೆಡ್​ಗೊಂದು ಫ್ಯಾನ್​ ಅಳವಡಿಸಬೇಕು. ಗೋಪಾಲಕರಿಗೆ ಟಿ-ಶರ್ಟ್​, ಕ್ಯಾಪ್​ ನೀಡಬೇಕು ಎಂದು ಮೈಸೂರು ನಗರ ಗೋಪಾಲಕರ ಸಂದ ಅಧ್ಯಕ್ಷ ಡಿ.ನಾಗಭೂಷಣ ಮನವಿ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ರೈತ ದಸರಾ ಉಪ ಸಮಿತಿ ವಿಶೇಷಾಧಿಕಾರಿಯೂ ಆದ ಜಿಪಂ ಉಪ ಕಾರ್ಯದರ್ಶಿ (ಅಭಿವೃದ್ಧಿ) ಡಾ.ಕೃಷ್ಣರಾಜು, ಎಲ್ಲ ವ್ಯವಸ್ಥೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ರೈತ ದಸರಾ ಉದ್ಘಾಟನೆ ದಿನ ಪ್ರತಿ ತಾಲೂಕಿನ ಒಬ್ಬರು ಗೋಪಾಲಕರನ್ನು ಅಭಿನಂದಿಸಲಾಗುವುದು. ಹಾಲು ಕರೆಯುವ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ವೇಳೆ ನಗರದ ಐವರು ಗೋಪಾಲಕರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದ್ದಾರೆ.
ಒಂದು ವಾರದ ಅಂತರದಲ್ಲಿ ಎರಡು ಕರುಗಳಿಗೆ ಜನ್ಮ ನೀಡಿದ ಎಮ್ಮೆ! ಸಾಗರದಲ್ಲಿ ಅಪರೂಪದ ಪ್ರಕರಣ

ಹುಳಿಯಾರು ಪೊಲೀಸ್​ ಠಾಣೆಯ ಸುಧಾ ಕೊಲೆ ಕೇಸ್​ಗೆ ಟ್ವಿಸ್ಟ್​: ಸುಪಾರಿ ಕೊಟ್ಟದ್ದು ಅದೇ ಠಾಣೆಯ ಮತ್ತೊಬ್ಬ ಮಹಿಳಾ ಪೇದೆ!

ಗಣೇಶೋತ್ಸವ ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸುತ್ತಲೇ ಪ್ರಾಣ ಬಿಟ್ಟ! ಡಿಜೆ ಸೌಂಡ್ಸ್​ ಎಫೆಕ್ಟ್​ಗೆ ಹೃದಯಾಘಾತ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + seven =
Remember me
