ಮೈಸೂರು:ನಾಡಹಬ್ಬ ಮೈಸೂರು ದಸರಾ ಉತ್ಸವದ ಮುನ್ನುಡಿಯಂತಿರುವ ಗಜಪಯಣಕ್ಕೆ ಅರಣ್ಯ ಸಚಿವ ಉಮೇಶ್ ಕತ್ತಿ ಶೂ ಧರಿಸಿಯೇ ಪೂಜೆ ಸಲ್ಲಿಸಿರುವುದು ಟೀಕೆಗೆ ಕಾರಣವಾಗಿದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ವೀರನಹೊಸಹಳ್ಳಿಯಲ್ಲಿ ಭಾನುವಾರ ‘ಗಜಪಯಣ’ಕ್ಕೆ ಚಾಲನೆ ನೀಡುವಾಗ ಪೂಜಾ ಸ್ಥಳಕ್ಕೆ ಶೂ ಧರಿಸಿಯೇ ಬಂದ ಉಮೇಶ್​ ಕತ್ತಿ, ಅಂಬಾರಿ ಆನೆ ಅಭಿಮನ್ಯು ಸೇರಿದಂತೆ 9 ಆನೆಗಳಿಗೆ ಪೂಜೆ ಸಲ್ಲಿಸಿದರು. ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗುವಾಗ ಸಂಪ್ರದಾಯದಂತೆ ಶೂ/ ಪಾದರಕ್ಷೆ ಕಳಚಿದ ಬಳಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ವಾಡಿಕೆ. ಎಸ್.ಟಿ.ಸೋಮಶೇಖರ್, ಶಾಸಕ ಎಚ್.ಪಿ.ಮಂಜುನಾಥ್, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಸೇರಿದಂತೆ ಎಲ್ಲ ಗಣ್ಯರೂ ಸಂಪ್ರದಾಯವನ್ನು ಪಾಲಿಸಿದ್ದರು‌.
ವಿಧಾನ ಪರಿಷತ್ ಸದಸ್ಯ ವಿಶ್ವನಾಥ್ ಕೂಡ ಪಾದರಕ್ಷೆ ಧರಿಸಿ ಬಂದಿದ್ದರು. ಎಚ್ಚೆತ್ತುಕೊಂಡ ಅವರು ಅದನ್ನು ತೆಗೆದಿರಿಸಿ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾದರು. ಆದರೆ, ಸಚಿವ ಉಮೇಶ ಕತ್ತಿ ಅವರು ಕೊನೆಯವರೆಗೂ ಶೂ ಧರಿಸಿಯೇ ಇದ್ದರು. ಅವರಿಗೆ ನೆನಪಿಸುವ ಪ್ರಯತ್ನವನ್ನು ಯಾರೂ ಮಾಡಲಿಲ್ಲ. ಶೂ ಧರಿಯೇ ಪೂಜೆ ಮಾಡುತ್ತಿರುವ ಫೋಟೋ ವೈರಲ್​ ಆಗಿದ್ದು, ಉಮೇಶ್​ ಕತ್ತಿ ಅವರ ನಡೆಗೆ ಸಾರ್ವಜನಿಕರಿಂದ ಟೀಕೆ ವ್ಯಕ್ತವಾಗುತ್ತಿದೆ.
PHOTOS| ಮೈಸೂರು ದಸರಾ ಹಿನ್ನೆಲೆ ಗಜಪಯಣಕ್ಕೆ ವಿದ್ಯುಕ್ತ ಚಾಲನೆ: ನಾಗರಹೊಳೆಯ ವೀರನಹೊಸಳ್ಳಿಯಲ್ಲಿ ಸಂಭ್ರಮ

ಬುದ್ಧಿಮಾಂದ್ಯ ಎಂಬ ಕಾರಣಕ್ಕೆ ತನ್ನ ಮಗುವನ್ನೇ ಕೊಂದ ವೈದ್ಯೆ ಪ್ರಕರಣ: ತಂದೆಯ ಹೇಳಿಕೆ ಕೇಳಿದ್ರೆ ಮನಸ್ಸು ಭಾರ…

ನಾಗಮಂಗಲ ಶಾಸಕ ಸುರೇಶ್‌ಗೌಡ ವಿರುದ್ಧ ಎಫ್​ಐಆರ್​! ಸಾಕ್ಷ್ಯವಾಗಿ ವಿಡಿಯೋ-ಫೋಟೋ ಸಲ್ಲಿಕೆ

Sign in to your account
Please enter an answer in digits:seventeen − four =
Remember me
