ಮೈಸೂರು:ರಾಜಕೀಯ ಪುಡಾರಿಗಳೇ ಹಾಗೆ. ಊರಿಗೆಲ್ಲ ನಾನೊಬ್ಬನೇ ದೊಣ್ಣೇ ನಾಯ್ಕ, ಊರೆಲ್ಲ ನಂದೆ ಅಂತ ಶೋ ಕೊಟ್ಟುಕೊಂಡು ಓಡಾಡ್ತಾರೆ. ಈತನೂ ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಲು ಹೋಗಿ ಬಡ ವೃದ್ಧೆಯನ್ನು ಕೊಂದೇ ಬಿಟ್ಟಿದ್ದಾನೆ.
ಇಂತಹ ಅಮಾನವೀಯ ಘಟನೆ ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕಿನ ಹೊಸೂರು ಕಲ್ಲಹಳ್ಳಿಯಲ್ಲಿ ನಡೆದಿದೆ. ಜಯಮ್ಮ(60) ಮೃತ ದುರ್ದೈವಿ. ಇದೇ ಗ್ರಾಮದ ವಿಶ್ವಕುಮಾರ್ ಕೊಲೆ ಆರೋಪಿ.
ಆರೋಪಿ ವಿಶ್ವಕುಮಾರ್ ಅವರ ಅಪ್ಪ ಮಹಾಲಿಂಗ ಗ್ರಾಮ ಪಂಚಾಯಿತಿ ಸದಸ್ಯ. ಹೀಗಾಗಿ ವಿಶ್ವಕುಮಾರ್ ಊರೆಲ್ಲ ನಂದೆ ಅಂಥ ಶೋ ಕೊಟ್ಟುಕೊಂಡು ಓಡಾಡಿಕೊಂಡಿದ್ದ. ಇತ್ತೀಚಿಗೆ ಜಯಮ್ಮರ ಮುರುಕಲು ಮನೆ ಕುಸಿದುಬಿದ್ದಿತ್ತು. ಗ್ರಾಮದ ಮುಖಂಡರ ಅನುಮತಿ ಮೇರೆಗೆ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಜಯಮ್ಮರ ಕುಟುಂಬ ವಾಸವಿತ್ತು. ಏಕಾಏಕಿ ಜಯಮ್ಮರ ಮನೆಗೆ ನುಗ್ಗಿದ ವಿಶ್ವಕುಮಾರ್, ಸಮುದಾಯ ಭವನದಲ್ಲಿ ಇಟ್ಟಿರುವ ಸಮಾನು- ಸರಂಜಾಮುಗಳನ್ನು ಎತ್ತಿಕೊಳ್ಳುವಂತೆ ಧಮ್ಕಿ ಹಾಕಿದ್ದ. ವೃದ್ಧೆಯ ಜುಟ್ಟು ಹಿಡಿದು ಗೋಡೆಗೆ ನೂಕಿಬಿಟ್ಟಿದ್ದ. ಆ ವೇಳೆ ಗಂಭೀರ ಗಾಯಗೊಂಡಿದ್ದ ಜಯಮ್ಮ ಒಂದು ವಾರ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡೆವೆ ಹೋರಾಡಿ ಫೆ.13ರಂದು ಕೊನೆಯುಸಿರೆಳೆದರು.
ಸಮುದಾಯ ಭವನ ಇರೋದೇ ಊರಿನವರ ಉಪಯೋಗಕ್ಕಾಗಿ. ಹಳ್ಳಿ ಜನರೆಲ್ಲರೂ ಬಡಕುಟುಂಬಕ್ಕೆ ತಾತ್ಕಾಲಿಕವಾಗಿ ಉಳಿದುಕೊಳ್ಳಲು ಅವಕಾಶ ಕೊಟ್ಟಿದ್ದರು. ಆದ್ರೆ ಈ ವಿಶ್ವಕುಮಾರ್​, ‘ನಮ್ಮಪ್ಪ ಗ್ರಾಮ್ ಪಂಚಾಯ್ತಿ ಮೆಂಬರ್ರು’ ಅಂತ ಜಗಳ ತೆಗೆದು ಅಜ್ಜಿಯನ್ನು ಕೊಂದದ್ದು ಮಾತ್ರ ದುರಂತ.(ದಿಗ್ವಿಜಯ ನ್ಯೂಸ್, ಮೈಸೂರು)
ಆಸ್ಪತ್ರೆಯಲ್ಲೇ ಕುಸಿದುಬಿದ್ದ ನರ್ಸ್ ಮೇಲಕ್ಕೆ ಏಳಲೇ ಇಲ್ಲ… ಸಾವಲ್ಲೂ ಸಾರ್ಥಕತೆ ಮೆರೆದ ಗಾನವಿ, ಈ ಸ್ಟೋರಿ ಓದಿದ್ರೆ ಮನಸ್ಸು ಭಾರ

ಪ್ರೇಮ ವಿವಾಹವಾದ್ರೂ ಮತ್ತೊಬ್ಬನ ಮೇಲೆ ಮೋಹ: ಪುರುಷನ ಚಪ್ಪಲಿ, ಪ್ರಸಾದದ ಬ್ಯಾಗು ಬಿಚ್ಚಿಟ್ಟ ಭಯಾನಕ ರಹಸ್ಯವಿದು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × four =
Remember me
