ಮೈಸೂರು:ಸ್ನೇಹಿತನ ಜತೆ ತಿಂಡಿ ತಿನ್ನಲು ಕುಳಿತ ಕಾನೂನು ವಿದ್ಯಾರ್ಥಿಯೊಬ್ಬ ಹಠಾತ್‌ ಮೃತಪಟ್ಟ ಘಟನೆ ಹುಣಸೂರು ಪಟ್ಟಣದ ಹೋಟೆಲ್‌ನಲ್ಲಿ ಸಂಭವಿಸಿದೆ.
ಹುಣಸೂರು ತಾಲೂಕಿನ ನಂಜಾಪುರ ಗ್ರಾಮದ ನಿತಿನ್ ಕುಮಾರ್​ (25) ಮೃತ. ಮೈಸೂರಿನ ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ನಿತಿನ್​, ಟಿಫನ್​ ತಿನ್ನಲೆಂದು ಹುಣಸೂರಿನ ಟಿಫಾನಿಸ್ ಹೋಂ ಹೋಟೆಲ್‌ಗೆ ಗೆಳೆಯನ ಜತೆ ತೆರಳಿದ್ದರು. ತಿಂಡಿಗೆ ಆರ್ಡರ್ ಮಾಡಿ ಇಬ್ಬರೂ ಊಟದ ಟೇಬಲ್​ನಲ್ಲಿ ಕೂತಿದ್ದರು. ಅಕ್ಕಪಕ್ಕ ಗ್ರಾಹಕರು ತಿಂಡಿ ತಿನ್ನುತ್ತಾ ಇದ್ದರು. ನಿತಿನ್​ ಮತ್ತು ಈತನ ಗೆಳೆಯ ಇಬ್ಬರೂ ತಿಂಡಿಗಾಗಿ ಎದುರು ನೋಡುತ್ತಾ ಪರಸ್ಪರ ಮಾತಾಡಿಕೊಂಡು ಕೂತಿದ್ದರು.
ಇನ್ನೇನು ತಿಂಡಿ ಬರಬೇಕು ಅನ್ನುವಷ್ಟರಲ್ಲಿ ನಿತಿನ್​ ಕುರ್ಚಿ ಮೇಲಿಂದ ಕುಸಿದು ಬಿದ್ದರು. ಗಾಬರಿಗೊಂಡ ಸ್ನೇಹಿತಮ ನಿತಿನ್​ನನ್ನು ಮೇಲಕ್ಕೆ ಎತ್ತಿದರು. ಈ ವೇಳೆ ಅಕ್ಕಪಕ್ಕದಲ್ಲಿದ್ದ ಗ್ರಾಹಕರೂ ನೆರವಿಗೆ ಬಂದರಾದರೂ ಅಷ್ಟರಲ್ಲಿ ಹೃದಯಾಘಾತದಿಂದ ನಿತಿನ್​ ಕೊನೆಯುಸಿರೆಳೆದರು. ಹೋಟೆಲ್​ನಲ್ಲೇ ನಿತಿನ್​ ಕುಸಿದು ಬೀಳುವ ಕೊನೇ ಕ್ಷಣದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ತುಮಕೂರಲ್ಲಿ ಆರ್ಕೆಸ್ಟ್ರಾ ಕಲಾವಿದರನ್ನ ವೇಶ್ಯಾವಾಟಿಕೆ ದೂಡಲು ಯತ್ನ! ದಿನಕ್ಕೆ ಒಂದೂವರೆ ಸಾವಿರ ಕೊಡ್ತಾರೆ… ಆಡಿಯೋ ವೈರಲ್​

ಯಾದಗಿರಿಯ ಶಿಕ್ಷಕ ಒಂದಲ್ಲ, ಎರಡಲ್ಲ, ಮೂವರು ಹೆಂಡ್ತೀರ ಗಂಡ! ಇಬ್ಬರಿಗೆ ಕೈ ಕೊಟ್ಟು 3ನೇ ಹೆಂಡ್ತಿ ಜತೆ ಸಂಸಾರ… ಕೊನೆಗೂ ಆಯ್ತು ಶಾಸ್ತಿ

ಮದ್ವೆ ಆಸೆ ಹುಟ್ಟಿಸಿ ದೈಹಿಕ ಸಂಪರ್ಕ ಬೆಳೆಸಿದ, ಕೊನೆಗೆ ಹೇಳಬಾರದ್ದು ಹೇಳಿದ, ಪ್ಲೀಸ್​ ನ್ಯಾಯ ಕೊಡಿಸಿ… ಕಣ್ಣೀರಿಟ್ಟ ಸಂತ್ರಸ್ತೆ

Sign in to your account
Please enter an answer in digits:16 − 14 =
Remember me
