ಮೈಸೂರು:ಕೆ.ಆರ್.ಆಸ್ಪತ್ರೆಯ ಮಕ್ಕಳ ವೈದ್ಯರಾದ ಡಾ.ಗಿರೀಶ್ ಮತ್ತು ಡಾ.ಸುಮಾ ದಂಪತಿ ಪುತ್ರನ ಅಪಹರಣ ಪ್ರಕರಣ ಸುಖಾಂತ್ಯಗೊಂಡಿದೆ. ಮಿಂಚಿನ ಕಾರ್ಯಾಚರಣೆ ನಡೆಸಿದ ಪೊಲೀಸರು ಕಿಡ್ನ್ಯಾಪ್​ಗೆ ಒಳಗಾಗಿದ್ದ 12 ವರ್ಷದ ಅಭಿಜಿತ್‌ನನ್ನು ಸುರಕ್ಷಿತವಾಗಿ ಕರೆತಂದಿದ್ದಾರೆ.
ಕುವೆಂಪುನಗರದ ಬಿಇಎಂಎಲ್ ಬಡಾವಣೆಯ ನಿವಾಸಿ ಅಭಿಜಿತ್​, ಗುರುವಾರ ಸಂಜೆ 7 ಗಂಟೆ ಸುಮಾರಿನಲ್ಲಿ ಸೈಕಲ್ ತುಳಿಯುತ್ತಿದ್ದ. ಈ ವೇಳೆ ಅಲ್ಲಿಗೆ ಕಾರಿನಲ್ಲಿ ಬಂದ ಅಪರಿಚಿತರ ತಂಡ ಬಾಲಕನನ್ನು ಕಿಡ್ನ್ಯಾಪ್​ ಮಾಡಿತ್ತು. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿದ್ದರು. ಬೆಚ್ಚಿದ ದುಷ್ಕರ್ಮಿಗಳು ಮರುದಿನ ಬೆಳಗ್ಗೆ ಮಾರ್ಗದಲ್ಲೇ ಬಾಲಕನನ್ನು ಬಿಟ್ಟು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆ ಬಗ್ಗೆ ಮಾತನಾಡಿರುವ ಅಭಿಜಿತ್​, ನನ್ನನ್ನು ಕಿಡ್ನ್ಯಾಪ್ ಮಾಡಿದಾಗ ಹೆದರಿಕೆಯಾಯಿತು. ಧೈರ್ಯ ತಂದುಕೊಂಡು ಕಿಡ್ನ್ಯಾಪರ್ಸ್​ ಜತೆ ಮಿಂಗಲ್ ಆಗಿ ಮಾತನಾಡಲು ಆರಂಭಿಸಿದೆ. ‘ನಮ್​ ಬಗ್ಗೆ ನಿನ್ನ ಅಪ್ಪ- ಅಮ್ಮನಿಗೆ ಏನೂ ಹೇಳ್ಬಾರ್ದು. ಒಂದು ವೇಳೆ ಹೇಳಿದ್ರೆ ನಿನ್ನನ್ನು ಶಾಲೆಯಿಂದ ಎತ್ತಾಕೊಂಡು ಹೋಗಿ ಮರ್ಡರ್ ಮಾಡುತ್ತೇವೆ’ ಅಂತ ಅವರು ನನಗೆ ಹೆದರಿಸಿದರು. ಅವರನ್ನ ನಾನು ಈ ಮೊದಲು ನೋಡಿಯೇ ಇಲ್ಲ. ನನ್ನನ್ನು ಕರೆದೊಯ್ಯುತ್ತಿದ್ದ ಕಾರಿನ ನಂಬರ್​ ಪ್ಲೇಟ್​ ಹಳದಿ ಬಣ್ಣದ್ದು. ಕಾರಿನ ಎರಡು ನಂಬರ್ ಮಾತ್ರ ಕಾಣಿಸಿತ್ತು. ಕಾರಿನ ಹಿಂಭಾಗದ ಸೀಟ್​ನಲ್ಲಿ ನನ್ನನ್ನು ಕೂರಿಸಿದ್ದರು. ರಿಂಗ್​ ರೋಡ್​ನ ಸರ್ಕಲ್​ನಲ್ಲಿ ನಾಲ್ಕು ಸುತ್ತು ಹಾಕಿಸಿದ್ರು. ಮೈಸೂರಿನ 20 ಕಿ.ಮೀ. ಅಂತರದಲ್ಲೇ ಸುತ್ತಾಡಿಸ್ತಾ ಇದ್ರು. ತಿನ್ನಲು ಬಿಸ್ಕತ್​ ಮತ್ತು ಚಾಕೋಲೆಟ್​, ಕುಡಿಯಲು ನೀರು ಕೊಟ್ಟರು. ನಾನು ಬೇಡ ಅಂದೆ. ಕಾರಿನಲ್ಲಿ ಒಬ್ಬ ಕುಂಟ ಇದ್ದ. ‘ಕಾರಿನಲ್ಲಿ ಡೀಸೆಲ್ ಖಾಲಿಯಾಗಿದೆ. ಮ್ಯಾಕ್ಸಿಮಮ್ ಅಂದ್ರೆ 5 ಕಿ.ಮೀ. ಹೋಗಬಹುದು’ ಎನ್ನುತ್ತಿದ್ದರು. ನಾನು ನಿದ್ರೆಗಣ್ಣಿನಲ್ಲಿದ್ದಾಗ ಯಾರೋ ವಿಂಡ್​ಶೀಲ್ಡ್​ನಲ್ಲಿ ಮಾತನಾಡುತ್ತಿದ್ರು…’ ಎಂದು ವಿವರಿಸಿದ್ದಾನೆ.
ಡೇಟಿಂಗ್​ ಯುವತಿಗೆ 5.70 ಕೋಟಿ ರೂ. ಕೊಟ್ಟ ಬ್ಯಾಂಕ್​ ಮ್ಯಾನೇಜರ್! ಪ್ರೇಮಪಾಶಕ್ಕೆ ಸಿಲುಕಿ ಮಾಡಬಾರದ್ದು ಮಾಡಿಬಿಟ್ಟ

ಮಂಗಳೂರಲ್ಲಿ ಬೆಳ್ಳಂಬೆಳಗ್ಗೆ ಧಗಧಗಿಸಿದ ಎಲೆಕ್ಟ್ರಿಕ್ ಸ್ಕೂಟರ್ ಶೋ ರೂಂ

ಕಂಠದಲ್ಲಿ ಶ್ರೀಕೃಷ್ಣ! ಗಂಟಲು ನೋವೆಂದು ಆಸ್ಪತ್ರೆಗೆ ಹೋದ ವ್ಯಕ್ತಿಗೆ ಕಾದಿತ್ತು ಶಾಕ್​

ಬೆಳಗಾವಿಯಲ್ಲಿ ತ್ರಿವಳಿ ಕೊಲೆ: ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ‌ಪ್ರವೀಣ್ ಭಟ್​ನನ್ನು ನಿರ್ದೋಷಿ ಎಂದ ಧಾರವಾಡ ಹೈಕೋರ್ಟ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 3 =
Remember me
