ಕೆ.ಆರ್​.ಸಾಗರ:ಸರ್​ ಎಂ.ವಿಶ್ವೇಶ್ವರಯ್ಯ ಅವರ ತಮ್ಮನ ಮರಿಮೊಮ್ಮಗ ಸತೀಶ್​ ಮೋಕ್ಷ ಗುಂಡಂ ಮತ್ತು ಕುಟುಂಬ ಕೃಷ್ಣರಾಜಸಾಗರ ಅಣೆಕಟ್ಟೆಗೆ ಭೇಟಿ ನೀಡಿ ಜಲವೈಭವವನ್ನು ಕಣ್ತುಂಬಿಕೊಂಡಿತು.
ಸತೀಶ್​ ಮೋಕ್ಷ ಗುಂಡಂ ಅವರು ಪತ್ನಿ ಲಕ್ಷ್ಮಮ್ಮ ಹಾಗೂ ಪುತ್ರಿ ದಿವ್ಯಾ ಜತೆಗೂಡಿ ಅಣೆಕಟ್ಟೆಯ ಗೇಟುಗಳು, ಸರ್​ ಎಂ.ವಿ. ನಾಲೆ, ಹಿನ್ನೀರು, ಬೃಂದಾವನವನ್ನು ಸೋಮವಾರ ವೀಕ್ಷಿಸಿದರು. ಅಣೆಕಟ್ಟೆ ಮತ್ತು ಗೇಟುಗಳ ಪ್ರಸ್ತುತ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದರು. ಕಾವೇರಿ ನೀರಾವರಿ ನಿಗಮ ಸಹಾಯಕ ಇಂಜಿನಿಯರ್​ ಮಾನಸ ಅವರು ಪ್ರಸ್ತುತ ಅಣೆಕಟ್ಟೆ ಕುರಿತು ಮಾಹಿತಿ ನೀಡಿದರು.
ಸತೀಶ್​ ಮೋಕ್ಷ ಗುಂಡಂ ಮಾತನಾಡಿ, ಈ ಅಣೆಕಟ್ಟೆ ಕಟ್ಟಲು ಮೈಸೂರು ಮಹಾರಾಜರ ಕೊಡುಗೆ ಅನನ್ಯ. ನಮ್ಮ ಮುತ್ತಾತ ಸರ್​ ಎಂ.ವಿ. ಅವರ ತಂತ್ರಜ್ಞಾನದ ಕೊಡುಗೆ ಕೂಡ ಸ್ಮರಣೀಯ. ಮಹಾರಾಜರ ಶ್ರಮ ಮತ್ತು ಸರ್​ಎಂವಿ ಅವರ ಜ್ಞಾನದಿಂದ ಈ ಅಣೆಕಟ್ಟೆ ಇನ್ನೂ ಉತ್ತಮ ಸ್ಥಿತಿಯಲ್ಲಿದೆ. ಆದ್ದರಿಂದ ಇಲ್ಲಿ ಅವರ ಪ್ರತಿಮೆ ನಿರ್ಮಿಸಬೇಕು. ಈ ಬಗ್ಗೆ ಸರ್ಕಾರ ಕಠಿಣ ನಿಲುವು ತೆಗೆದುಕೊಳ್ಳಬೇಕು ಎಂದರು.
ಕಿರಿಯ ಇಂಜಿನಿಯರ್​ಗಳಾದ ಗಣೇಶ್​, ಅಭಿಲಾಷ್​, ಸರ್ಕಾರಿ ನೌಕರರ ಸಂದ ಕೆ.ಆರ್​.ಸಾಗರ ಯೋಜನಾ ಘಟಕದ ಅಧ್ಯಕ್ಷ ಶಿವಪ್ಪ ಇದ್ದರು.
ಇದು ಸತ್ತವರನ್ನು ಬದುಕಿಸೋ ಜಾತ್ರೆ! ಕೊಳ್ಳೇಗಾದಲ್ಲಿ ರಾತ್ರಿಯಿಡೀ ನಡೆಯಿತು ನರಬಲಿ ವಿಸ್ಮಯ…

ಬಿಕಿನಿ ಧರಿಸಿಕೊಂಡೇ ಬರ್ತ್​ ಡೇ ಕೇಕ್​ ಕತ್ತರಿಸಿದ ಆಮಿರ್​ ಖಾನ್​ ಪುತ್ರಿ ಇರಾ! ಫೋಟೋ ವೈರಲ್​, ನೆಟ್ಟಿಗರಿಂದ ಬಗೆಬಗೆಯ ಕಮೆಂಟ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + five =
Remember me
