ಮೈಸೂರು:ಮನಸ್ಸಿದ್ದರೆ ಮಾರ್ಗ, ಛಲ ಹಿಡಿದು ಸಾಗಿದರೆ ಗುರಿ ಮುಟ್ಟೋದು ಗ್ಯಾರಂಟಿ, ಸತತ ಪ್ರಯತ್ನ ಇದ್ದಲ್ಲಿ ಸಾಧನೆ ಕಟ್ಟಿಟ್ಟ ಬುತ್ತಿ… ಎಂಬ ಮಾತು ಅಕ್ಷರಶಃ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಕೆ.ಟಿ. ಮೇಘನಾ ಅವರಿಗೆ ಅನ್ವಯಿಸುತ್ತೆ. 2021ನೇ ಸಾಲಿನ UPSC ಪರೀಕ್ಷೆಯಲ್ಲಿ ಮೇಘನಾ 425ನೇ ರ‍್ಯಾಂಕ್​ ಪಡೆಸು ಸ್ಪೂರ್ತಿಯ ಚಿಲುಮೆ ಆಗಿದ್ದಾರೆ.
ಪೂರ್ಣ ಪ್ರಮಾಣದಲ್ಲಿ ದೃಷ್ಟಿ ಸಮಸ್ಯೆ ಎದುರಿಸುತ್ತಿರುವ ಮೇಘನಾ ಅವರು ಪಿರಿಯಾಪಟ್ಟಣ ತಾಲೂಕಿನ ಕುಡುಕೂರು ಮೂಲದವರು. ತಾಂಡವಮೂರ್ತಿ ಮತ್ತು ನವನೀತ ದಂಪತಿ ಪುತ್ರಿಯಾದ ಮೇಘನಾ ಸದ್ಯ ಬೆಂಗಳೂರಿನ ಕೆಂಗೇರಿಯಲ್ಲಿ ವಾಸವಾಗಿದ್ದಾರೆ.
10ನೇ ತರಗತಿ ವಿದ್ಯಾರ್ಥಿಯಾಗ ಮೇಘನಾಗೆ ರೆಟಿನಾ ಸಮಸ್ಯೆ ಎದುರಾಗಿ, ಶೇ.70 ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದರು. ಆದರೆ ತಮಗಿರುವ ಈ ವೈಕಲ್ಯವನ್ನು ಮೆಟ್ಟಿನಿಂತು ಯುಪಿಎಸ್​‍ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಸಾಧನೆ ಮಾಡಿದ್ದಾರೆ.
2020ನೇ ಸಾಲಿನಲ್ಲೂ ಯುಪಿಎಸ್​ಸಿ ಪರೀಕ್ಷೆ ಎದುರಿಸಿದ್ದ ಮೇಘನಾ, 465ನೇ ರ‍್ಯಾಂಕ್ ಪಡೆದಿದ್ದರು. ಶಾಲಾ-ಕಾಲೇಜು ಶಿಕ್ಷಣವನ್ನು ಬೆಂಗಳೂರಿನಲ್ಲಿ ಮುಗಿಸಿದ್ದ ಮೇಘನಾ, 2015ನೇ ಬ್ಯಾಚ್​ನಲ್ಲಿ ಕೆಎಎಸ್ ಪರೀಕ್ಷೆಯಲ್ಲಿ 11ನೇ ರ‍್ಯಾಂಕ್ ಪಡೆದಿದ್ದರು. ಸದ್ಯ ಬೆಂಗಳೂರಿನಲ್ಲಿ ಖಜಾನೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮಗಳ ಸಾಧನೆ ಕಂಡು ಪೋಷಕರು ಮತ್ತು ಕುಟುಂಬಸ್ಥರ ಸಂತೋಷಕ್ಕೆ ಪಾರವೇ ಇಲ್ಲ.
ಮೊದಲ ಪ್ರಯತ್ನದಲ್ಲೇ UPSCಯಲ್ಲಿ 31ನೇ ರ‍್ಯಾಂಕ್ ಪಡೆದ ಕನ್ನಡಿಗ! ಸಾಧನೆ ಬಗ್ಗೆ ಅವಿನಾಶ್​ ಹೇಳಿದ್ದಿಷ್ಟು…

UPSC ರಿಸಲ್ಟ್​ ಪ್ರಕಟ: ದೇಶಕ್ಕೆ ಶ್ರುತಿ ಶರ್ಮಾ ಟಾಪರ್​, ದಾವಣಗೆರೆಯ ಅವಿನಾಶ್​ಗೆ 31ನೇ ರ‌್ಯಾಂಕ್

PSI ಪರೀಕ್ಷೆಯಲ್ಲಿ ಅಕ್ರಮ: ಒಂದೂವರೆ ತಿಂಗಳಿಂದ ತಲೆಮರೆಸಿಕೊಂಡಿದ್ದ ಶಾಂತಿಬಾಯಿ ಕೊನೆಗೂ ಅರೆಸ್ಟ್​! ಗಂಡನೂ ಸಿಕ್ಕಿಬಿದ್ದ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four + ten =
Remember me
