ಬೆಂಗಳೂರು: ಕೊಮ್ಮಘಟದಲ್ಲಿ ಆಯೋಜಿಸಿರುವ ಬೃಹತ್​ ಸಮಾವೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು. ನಾಡಗೀತೆಯೊಂದಿಗೆ ಆರಂಭಗೊಂಡ ಸಮಾವೇಶವದಲ್ಲಿ ಬಹುನಿರೀಕ್ಷಿತ 27,000 ಕೋಟಿ ರೂ. ಮೊತ್ತದ ವಿವಿಧ ಯೋಜನೆಗಳಿಗೆ ಪ್ರಧಾನಿ ಚಾಲನೆ ನೀಡಿದರು. ಪೂರ್ಣಗೊಂಡ ಹಲವು ಯೋಜನೆಗಳನ್ನು ಲೋಕಾರ್ಪಣೆ ಮಾಡಿದರು. ಜತೆಗೆ ಹಲವು ಮಹತ್ತರ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿದರು.
ಮೈಸೂರು ಪೇಟ, ಶಾಲು ತೊಡಿಸಿ ಪ್ರಧಾನಿ ಅವರಿಗೆ ಸನ್ಮಾನಿಸಲಾಯಿತು. ಕರ್ನಾಟಕದ ಕಾಮಧೇನು ಪ್ರತಿಮೆಯನ್ನ ನೀಡಿ ಗೌರವಿಸಲಾಯಿತು.
ಶಿಲನ್ಯಾಸ:15,700 ಕೋಟಿ ರೂ. ಅಂದಾಜು ವೆಚ್ಚದ ಬೆಂಗಳೂರು ಉಪನಗರ ರೈಲ್ವೆ ಯೋಜನೆ ನಾಲ್ಕು ಕಾರಿಡಾರ್​ ಸೇರಿ 148 ಕಿ.ಮೀ. ಉದ್ದದ ಕಾಮಗಾರಿಗೆ ಶಿಲಾನ್ಯಾಸ. 2280 ಕೋಟಿ ರೂ. ಅಂದಾಜು ವೆಚ್ಚದ ಬೆಂಗಳೂರು ವರ್ತುಲ ರಸ್ತೆಯ ದಾಬಸ್​ಪೇಟೆ-ಹೊಸಕೋಟೆ-ಹಳೇ ಮದ್ರಾಸ್​ ರಸ್ತೆ ಕಾಮಗಾರಿಗೆ ಚಾಲನೆ.ಲೋಕಾರ್ಪಣೆ:ವಿಮಾನ ನಿಲ್ದಾಣದ ಮಾದರಿಯಲ್ಲಿ ಬೈಯ್ಯಪ್ಪನಹಳ್ಳಿ ಬಳಿ ನಿರ್ಮಿತ ಸಂಪೂರ್ಣ ಹವಾನಿಯಂತ್ರಿತ ರೈಲ್ವೆ ನಿಲ್ದಾಣ. ಖರ್ಚಾದ ಮೊತ್ತ- 315 ಕೋಟಿ ರೂ.ಮಹಾರಾಷ್ಟ್ರದ ರೋಹದಿಂದ ಕರ್ನಾಟಕದ ತೋಕೂರುವರೆಗೆ ಕೊಂಕಣ ರೈಲ್ವೆ ಮಾರ್ಗ ವಿದ್ಯುದಿಕರಣ (740 ಕಿ.ಮೀ.) ಪೂರ್ಣ. ಉಡುಪಿ-ಮಡಗಾಂವ-ರತ್ನಗಿರಿ ಎಲೆಕ್ಟ್ರಿಕ್​ ರೈಲಿಗೆ ಹಸಿರು ನಿಶಾನೆ. ವ್ಯಯಿಸಿದ ಮೊತ್ತ 1,280 ಕೋಟಿ ರೂ.ಅರಸಿಕೆರೆ-ತುಮಕೂರು (96 ಕಿ.ಮೀ.), ಯಲಹಂಕ- ಪೆನುಕೊಂಡ (120) ರೈಲ್ವೆ ದ್ವಿಮಾರ್ಗ ನಿರ್ಮಾಣ ಪೂರ್ಣ, ಪ್ಯಾಸೆಂಜರ್​ ಮೆಮು ರೈಲಿಗೆ ಗ್ರೀನ್​ ಸಿಗ್ನಲ್​. ಕ್ರಮವಾಗಿ 750 ಕೋಟಿ ರೂ ಹಾಗೂ 1,100 ಕೋಟಿ ರೂ. ಖರ್ಚು.
ಬೆಂಗಳೂರಲ್ಲಿ BASE ವಿವಿ ಕ್ಯಾಂಪಸ್​ ಉದ್ಘಾಟಿಸಿದ ಪ್ರಧಾನಿ ಮೋದಿ: 150 ಐಟಿಐಗಳ ಲೋಕಾರ್ಪಣೆ

ಬೆಂಗಳೂರಲ್ಲಿ ಮಿದುಳು ಸಂಶೋಧನಾ ಕೇಂದ್ರ ಉದ್ಘಾಟಿಸಿದ ಪ್ರಧಾನಿ ಮೋದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − three =
Remember me
