ತಿ.ನರಸೀಪುರ:ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮಿದುಳು ನಿಷ್ಕ್ರಿಯವಾಗಿದ್ದ ಯುವಕನ ಅಂಗಾಂಗಗಳನ್ನು 7 ಜನರಿಗೆ ದಾನ ಮಾಡುವ ಮೂಲಕ ಪಾಲಕರು ಮಗನ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ತಿ.ನರಸೀಪುರ ತಾಲೂಕಿನ ಅತ್ತಹಳ್ಳಿ ಗ್ರಾಮದ ನಿಂಗರಾಜು ಹಾಗೂ ಸವಿತಾ ದಂಪತಿಯ ಪುತ್ರ ಭರತ್​ಗೌಡ(18) ಅವರ ಅಂಗಾಂಗವನ್ನು ದಾನ ಮಾಡಲಾಯಿತು. ಬನ್ನೂರಿನ ಸಂತೆಮಾಳದ ಬಳಿ ಮಾ.9ರಂದು ಎರಡು ಬೈಕ್​ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಭರತ್​ಗೌಡನನ್ನು ಮೈಸೂರಿನ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಚಿಕಿತ್ಸೆ ನೀಡಿದರೂ ಮಿದುಳು ನಿಷ್ಕ್ರಿಯವಾಗಿದ್ದರಿಂದ ಪುತ್ರ ಜೀವಂತವಾಗಿ ಉಳಿಯದಿರುವುದನ್ನು ಮನಗಂಡ ಪಾಲಕರು ಅಂಗಾಂಗ ದಾನಕ್ಕೆ ಒಪ್ಪಿಗೆ ಸೂಚಿಸಿದರು. ಬಳಿಕ ವೈದ್ಯರು ಭರತ್​ಗೌಡನ ಹೃದಯ, ಮೂತ್ರಪಿಂಡ, ಮೂತ್ರಕೋಶ, ಕಣ್ಣು ಪಡೆದುಕೊಂಡು 7 ಜನರಿಗೆ ಕಸಿ ಮಾಡಿದ್ದಾರೆ. ಆ ಮೂಲಕ ಭರತ್ ಸಾವಿನಲ್ಲೂ​ 7 ಜನರ ಬದುಕಿಗೆ ಬೆಳಕಾಗಿ ಸಾರ್ಥಕತೆ ಮರೆದಿದ್ದಾರೆ.
ಕಲಬುರಗಿಯಲ್ಲಿ ಘೋರ ದುರಂತ: ಗೋಧಿ ರಾಶಿ ಮಾಡುವ ಯಂತ್ರಕ್ಕೆ ಸಿಲುಕಿ ಪಿಯು ವಿದ್ಯಾರ್ಥಿನಿ ಸಾವು

ಬ್ಲೂಟೂತ್ ಬಳಸೋ ಜನರೇ ಎಚ್ಚರ! ​ನಿಮ್ಗೂ ಬರಬಹುದು ಆಪತ್ತು…

ಮಗನ ಸಾವಿನ ಹಿಂದೆ ಸೊಸೆ ಕೈವಾಡ? ಅಂತ್ಯಸಂಸ್ಕಾರ ಆಗಿದ್ದ ಶವ ಹೊರತೆಗಿಸಿ ಮರಣೋತ್ತರ ಪರೀಕ್ಷೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × one =
Remember me
