ಮೈಸೂರು:ಆಷಾಢ ಶುಕ್ರವಾರ ಹಿನ್ನೆಲೆಯಲ್ಲಿ ಚಾಮುಂಡಿಬೆಟ್ಟದ ಅಧಿದೇವತೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಒಂದೇ ತಿಂಗಳಲ್ಲಿ ಮೂರೂವರೆ ಕೋಟಿ ರೂ. ಹರಿದು ಬಂದಿದೆ. ಇದು ಆಷಾಢ ಮಾಸದಲ್ಲಿ ಚಾಮುಂಡೇಶ್ವರಿ ದೇವಾಲಯದಲ್ಲಿ ಸಂಗ್ರಹವಾದ ದಾಖಲೆಯ ಆದಾಯ. ಹುಂಡಿಯ ಕಾಣಿಕೆ ಹಣ ಮತ್ತು ಪ್ರವೇಶ ಟಿಕೆಟ್​ ಸೇರಿಸಿ ಇಷ್ಟು ಹಣ ಬಂದಿದೆ.
ದೇವಸ್ಥಾನದಲ್ಲಿ ಸೋಮವಾರ ಹುಂಡಿ ಎಣಿಕೆ ಕಾರ್ಯ ನಡೆಯಿತು. 250 ಜನರು ದಿನವಿಡೀ ಎಣಿಕೆ ಮಾಡಿದರು. ವಿವಿಧ ನೋಟುಗಳ ರೂಪದಲ್ಲಿ 2,29,93,739 ಕೋಟಿ ರೂ. ಬಂದಿದ್ದರೆ, ನಾಣ್ಯದ ರೂಪದಲ್ಲಿ 3,57,531 ರೂ. ಬಂದಿದೆ. ಒಟ್ಟು 2,33,51, 270 ರೂ. ಸಂಗ್ರಹವಾಗಿದೆ. 270 ಗ್ರಾಂ ಚಿನ್ನ, ಒಂದು ಕೆಜಿ ಬೆಳ್ಳಿ ಕಾಣಿಕೆ ರೂಪದಲ್ಲಿ ಸಂದಾಯವಾಗಿದೆ. ಪ್ರವೇಶ ಟಿಕೆಟ್​ನಿಂದ 1.3 ಕೋಟಿ ರೂ. ಆದಾಯ ಸಂಗ್ರಹವಾಗಿದೆ.
ಹಣವನ್ನು ಚಾಮುಂಡಿಬೆಟ್ಟದಲ್ಲಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್​ಗೆ ಜಮಾ ಮಾಡಲಾಗಿದೆ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಸಿ.ಜಿ.ಕೃಷ್ಣ ತಿಳಿಸಿದ್ದಾರೆ.
ರದ್ದಾದ ನೋಟುಗಳು ಪತ್ತೆ:ಅಮಾನ್ಯಗೊಳಿಸಿರುವ 500, 1000 ರೂ. ಮುಖಬೆಲೆಯ ನೋಟುಗಳು ಹುಂಡಿಯಲ್ಲಿದ್ದವು. ಒಂದು ಲಕ್ಕೂ ಅಧಿಕ ಬೆಲೆಯ ರದ್ದಾದ ನೋಟುಗಳು ಪತ್ತೆಯಾಗಿವೆ.
ವಿಧಾನಸಭಾ ಚುನಾವಣೆಯಲ್ಲಿ ನಿಖಿಲ್​ ಸ್ಪರ್ಧಿಸಲ್ಲ: ಎಚ್​ಡಿಕೆ

ರಾಜ್ಯಮಟ್ಟದ ಕಬ್ಬಡಿ ಪಂದ್ಯ ಆಟವಾಡುತ್ತಲೇ ಹಾರಿಹೋಯ್ತು ಆಟಗಾರನ ಪ್ರಾಣಪಕ್ಷಿ! ಮನಕಲಕುತ್ತೆ ಸಾವಿನ ಆ ದೃಶ್ಯ

ಕಾಂಗ್ರೆಸ್ ಪ್ರತಿಭಟನೆಯಲ್ಲಿ ನಟಿ ಭಾವನಾಗೆ ತರಾಟೆ: ಕಾರ್ಯಕರ್ತೆ ಮಾತಿಗೆ ಮುಜುಗರಕ್ಕೊಳಗಾದ ನಟಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + five =
Remember me
